ಪುತ್ತೂರು: ಆಧುನಿಕ ಜಾಲತಾಣಗಳು ಒಳಿತು ಹಾಗೂ ಕೆಡುಕು ಎರಡನ್ನು ಒಳಗೊಂಡಿರುತ್ತದೆ. ಇದರಲ್ಲಿ ಒಳಿತನ್ನು ಮಾತ್ರ ಆಯ್ದು ಸಮಾಜದ ಅಭಿವೃದ್ಧಿಗೆ ಬಳಸಿಕೊಳ್ಳಬೇಕು ಎಂದು ಜಗದ್ಗುರು ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳು ಹೇಳಿದರು
ಅವರು ಭಾನುವಾರ ಪುತ್ತೂರಿನ ಬೊಳುವಾರು ಶ್ರೀ ವಿಶ್ವಕರ್ಮ ಸಭಾಂಗಣದಲ್ಲಿ ದ.ಕ. ಜಿಲ್ಲಾ ವಿಶ್ವಕರ್ಮ ಹಿತರಕ್ಷಣಾ ಸಂಘದ ವತಿಯಿಂದ ನಡೆದ ಸಾಮೂಹಿಕ ಶ್ರೀ ಗುರು ಪಾದಪೂಜೆ, ವಿದ್ಯಾರ್ಥಿ ಸಂಘ ಉದ್ಘಾಟಿಸಿ ಆಶೀರ್ವಚನ ನೀಡಿದರು. ವಿದ್ಯಾರ್ಥಿಗಳು ಸಮಾಜಮುಖಿ ಚಿಂತನೆ ಬೆಳೆಸಿಕೊಂಡಾಗ ಉತ್ತಮ ಚಿಂತನೆ, ಸಮಾಜಮುಖಿ ಕಾರ್ಯ ಹೊರಹೊಮ್ಮಲು ಸಾಧ್ಯ. ಹೆತ್ತವರು ಇದಕ್ಕೆ ಪೂರಕವಾಗಿ ಧಾರ್ಮಿಕ ಆಚಾರ- ವಿಚಾರಗಳನ್ನು ಕಲಿಸಿಕೊಡುವ ಕೆಲಸ ಮಾಡಬೇಕು. ಹೆತ್ತವರಿಗೆ ಧರ್ಮದ ಬಗ್ಗೆ ಮಾಹಿತಿ ಅಗತ್ಯವಾಗಿದೆ. ಇಲ್ಲದೇ ಇದ್ದರೆ ಮಕ್ಕಳಿಗೆ ತಿಳಿಹೇಳುವುದೂ ಕಷ್ಟವಾಗಿದೆ ಎಂದ ಅವರು ಎಳೆ ಮನಸ್ಸುಗಳು ಇತರ ಧರ್ಮದ ವಿಚಾರಗಳತ್ತ ಆಕರ್ಷಿತವಾಗುತ್ತವೆ. ಇತರ ಧರ್ಮಗಳ ಬಗ್ಗೆ ತಿಳಿದುಕೊಳ್ಳುವ ಮೊದಲು ನಾವು ಹುಟ್ಟಿ- ಬೆಳೆದು ಆಶ್ರಯ ನೀಡಿದ ಧರ್ಮದ ಬಗ್ಗೆ ಅರಿತುಕೊಳ್ಳಬೇಕು ಎಂದರು.
ಸಂಘ ಅಧ್ಯಕ್ಷ ಪಿ.ಹರಿಶ್ಚಂದ್ರ ಆಚಾಯ್ ಇಳಂತಿಲ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್ ಆಚಾರ್ಯ ಉಪಸ್ಥಿತರಿದ್ದರು. ಕಾರ್ಯಾಧ್ಯಕ್ಷ ಜನಾರ್ದನ ಆಚಾರ್ಯ ಸ್ವಾಗತಿಸಿ, ಗೌರವಾಧ್ಯಕ್ಷ ಕೆ.ಉದಯ ಕುಮಾರ್ ಆಚಾರ್ಯ ವಂದಿಸಿದರು.
ವಿಶ್ವೇಶ ಪುರೋಹಿತ್ ನೇತೃತ್ವದಲ್ಲಿ ಗುರು ಪಾದಪೂಜೆ ನಡೆಯಿತು. ಇದೇ ಸಂದರ್ಭ ವಧು-ವರರ ನೋಂದಾವಣೆ ಹಾಗೂ ಸಪ್ತಶತಿ ಪಾರಾಯಣ ಸಹಿತ ಸಾಮೂಹಿಕ ದುರ್ಗಾನಮಸ್ಕಾರ ಪೂಜೆ ನಡೆಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.