ನವದೆಹಲಿ: ಭಾರತೀಯ ತನಿಖಾಧಿಕಾರಿಗಳು ಹಲವಾರು ಭಾರತೀಯ ನಾಗರಿಕರ ಸ್ವಿಸ್ ಬ್ಯಾಂಕ್ ಖಾತೆಗಳ ತನಿಖೆಯನ್ನು ಮುಂದುವರಿಸಿದ್ದು, ಮಾಜಿ ಕಾಂಗ್ರೆಸ್ ಸಚಿವೆ ಪ್ರಣೀತ್ ಕೌರ್ ಹಾಗೂ ಆಕೆಯ ಮಗ ರವಿಂದರ್ ಸಿಂಗ್ ಹೊಂದಿರುವ ಖಾತೆಗಳ ತನಿಖೆಗೆ ಸಹಕರಿಸುವಂತೆ ಭಾರತ ಕೋರಿದೆ ಎಂದು ಸ್ವಿಜರ್ಲ್ಯಾಂಡ್ ಹೇಳಿದೆ.
ಖಾತೆ ಹಂಚಿಕೆ, ತೆರಿಗೆ ವಿವರ ಮತ್ತಿತರ ವಿಷಯಗಳ ನಿಯಮಗಳ ಪ್ರಕಾರ, ಸ್ವಿಜಲ್ಯಾಂಡ್ನ ಸಂಯುಕ್ತ ತೆರಿಗೆ ಆಡಳಿತವು ಕೌರ್ ಮತ್ತು ರವಿಂದರ್ ಸಿಂಗ್ಗೆ ತಮ್ಮ ಹಕ್ಕುಗಳ ಮಾಹಿತಿ ಬಹಿರಂಗದ ವಿರುದ್ಧ 10 ದಿನಗಳಲ್ಲಿ ಮೇಲ್ಮನವಿ ಸಲ್ಲಿಸುವಂತೆ ಕೇಳಿಕೊಂಡಿದೆ. ಸ್ವಿಸ್ ತನಿಖಾ ಇಲಾಖೆಯು ಎರಡು ಪ್ರತ್ಯೇಕ ಅಧಿಸೂಚನೆಗಳನ್ನು ಬಿಡುಗಡೆಗೊಳಿಸಿದ್ದು, ಕೌರ್ ಹಾಗೂ ರವಿಂದರ್ ಸಿಂಗ್ ಅವರ ರಾಷ್ಟ್ರೀಯತೆ ಮತ್ತು ಜನ್ಮ ದಿನಾಂಕವನ್ನು ಹೊರತುಪಡಿಸಿ ಇನ್ನಾವುದೇ ಮಾಹಿತಿಯನ್ನು ಬಹಿರಂಗಗೊಳಿಸಿಲ್ಲ.
ಈ ಹಿಂದೆ ಸೋರಿಯಾದ ಎಚ್ಎಸ್ಎಫ್ಸಿ ಪಟ್ಟಿಯಲ್ಲಿ ತನ್ನ ಹೆಸರು ಬಂದಾಗ ವಿದೇಶಿ ಬ್ಯಾಂಕ್ನಲ್ಲಿ ತನ್ನ ಹೆಸರಿನ ಯಾವುದೇ ಖಾತೆಯನ್ನು ಹೊಂದಿರುವುದನ್ನು ಕೌರ್ ನಿರಾಕರಿಸಿದ್ದರು. ಜೊತೆಗೆ ತೆರಿಗೆ ಅಧಿಕಾರಿಗಳು ಅವರ ಹೇಳಿಕೆಯನ್ನು ದಾಖಲಿಸಿದ್ದು, ವಿದೇಶಿ ಬ್ಯಾಂಕ್ ಖಾತೆ ಅಥವಾ ಟ್ರಸ್ಟ್ ಹೊಂದಿರುವ ಬಗ್ಗೆ ಸೂಚಿಸುವ ಯಾವುದೇ ದಾಖಲೆಗಳನ್ನು ತೋರಿಸಿಲ್ಲ ಎಂದು ಹೇಳಿದ್ದರು.
ಆಡಳಿತಾತ್ಮಕ ನೆರವು ಮತ್ತು ಸ್ವಿಜರ್ಲ್ಯಾಂಡ್ ಜೊತೆ ಮಾಹಿತಿ ವಿನಿಮಯಕ್ಕೆ ತನ್ನ ದ್ವಿಪಕ್ಷೀಯ ಒಪ್ಪಂದದ ಭಾಗವಾಗಿ ಭಾರತವು ಸ್ವಿಸ್ ಬ್ಯಾಂಕ್ಗಳಲ್ಲಿ ಕಪ್ಪು ಹಣವನ್ನು ಇರಿಸಿರುವ ಹಲವು ವ್ಯಕ್ತಿಗಳ ಹಾಗೂ ಕಂಪೆನಿಗಳ ವಿರುದ್ಧ ಶಿಸತುಕ್ರಮ ಕೈಗೊಳ್ಳುವ ಭಾಗವಾಗಿ ವಿವಿರ ನೀಡುವಂತೆ ಕೋರಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.