ಬೆಳ್ತಂಗಡಿ : ಜನಜಾಗೃತಿ ಮತ್ತು ಲೋಕಕಲ್ಯಾಣಕ್ಕಾಗಿ ಗಾಯತ್ರಿ ಯಜ್ಞ ಅಗತ್ಯ. ಯಜ್ಞದಿಂದ ಮೋಕ್ಷಕ್ಕೆ ದಾರಿ ಸಿಗಬಹುದು. ವಿದ್ಯಾರ್ಥಿಗಳು ದೇಶದ ಸಂಪತ್ತಾಗಬೇಕಾದರೆ ಸಂಸ್ಕಾರಯುತವಾದ ಶಿಕ್ಷಣ ಅಗತ್ಯ. ಅದಕ್ಕಾಗಿ ದೇವರಗುಡ್ಡೆ ಶ್ರೀ ಆತ್ಮಾನಂದ ಸರಸ್ವತಿ ವಿದ್ಯಾಲಯದಲ್ಲಿ ಯಾವುದೇ ಪ್ರಶಸ್ತಿ, ಡಿಸ್ಟಿಂಕ್ಷನ್ ಬಯಸದೆ ಎಲ್ಲಾ ವಿದ್ಯಾರ್ಥಿಗಳಿಗೆ ಗುರುಕುಲ ಪದ್ದತಿಯಲ್ಲಿ ಸಂಸ್ಕಾರಯುತ ಶಿಕ್ಷಣ ನೀಡಲಾಗುತ್ತಿದೆ ಎಂದು ಕನ್ಯಾಡಿ ನಿತ್ಯಾನಂದ ನಗರ ಶ್ರೀರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ನುಡಿದರು.
ಅವರು ಬುಧವಾರ ಧರ್ಮಸ್ಥಳ ದೇವರಗುಡ್ಡೆ ಶ್ರೀ ಆತ್ಮಾನಂದ ಸರಸ್ವತಿ ವಿದ್ಯಾಲಯದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಗಾಯತ್ರಿ ಮಂತ್ರ ದೀಕ್ಷೆ ಶಿಬಿರದಲ್ಲಿ ಆಶೀರ್ವಚನ ನೀಡುತ್ತಾ ಶೃದ್ಧೆ ಹಾಗೂ ಭಕ್ತಿಯಿಂದ ಯಜ್ಞ ಮಾಡಿದಾಗ ಅದು ಕಾಮದೇನು ಆಗಬಹುದು. ಶುದ್ಧ ಭಕ್ತಿ ಹಾಗೂ ನಿರ್ಮಲ ಮನಸ್ಸಿನಿಂದ ನಮ್ಮ ಅಗತ್ಯತೆಯನ್ನು ಪ್ರಾರ್ಥಿಸಿದಾಗ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂದರು.
ಯಜ್ಞ ಶಿಬಿರದ ತರಬೇತುದಾರರಾಗಿ ಗಾಯತ್ರಿ ಪರಿವಾರ ಶಾಂತಿ ಕುಂಜ ಹರಿದ್ವಾರ ಇದರ ಮುಂಬೈ ದಹಿಸರ್ ಶಾಖೆಯ ಮುಖ್ಯಸ್ಥೆ ಕುಮಾರಿ ಎಂ. ಶೆಟ್ಟಿ ಅವರು ಪ್ರಧಾನ ತರಬೇತಿ ನೀಡಿದರು. ಸಹಾಯಕ ತರಬೇತುದಾರರಾಗಿ ಜಯಲಕ್ಷ್ಮೀ ಹೆಚ್. ಶೆಟ್ಟಿ, ಜಾಹ್ನವಿ ಜೆ. ಕರ್ಕೆರ, ಲೀಲಾವತಿ ಎಸ್. ಕುಂದರ್, ಜಯಶ್ರೀ ಆರ್. ಕೋಟ್ಯಾನ್, ಜನಾರ್ದನ ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಉಪಾಧ್ಯಕ್ಷೆ ಸುಜಿತಾ ವಿ. ಬಂಗೇರ, ಮಹಿಳಾ ಬಿಲ್ಲವ ವೇದಿಕೆ ಅಧ್ಯಕ್ಷೆ ವಿನೋದಿನಿ ರಾಮಪ್ಪ, ಮಹಿಳಾ ಬಿಲ್ಲವ ವೇದಿಕೆಯ ನಿಕಟ ಪೂರ್ವ ಕಾರ್ಯದರ್ಶಿ ಸುಜಾತ ಅಣ್ಣಿ ಪೂಜಾರಿ, ಟ್ರಸ್ಟಿ ಮೋಹನ್ ಉಜ್ಜೋಡಿ, ಕೃಷ್ಣಪ್ಪ ಗುಡಿಗಾರ್, ಜಯರಾಮ ಬಂಗೇರ ಮದ್ದಡ್ಕ ಮುಂತಾದವರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.