ಜೈಪುರ: ಜೈಪುರ ರೈಲ್ವೆ ನಿಲ್ದಾಣದ ಮತ್ತು ಅದರ ಸುತ್ತಮುತ್ತ ಸಂಗ್ರಹಿಸಲ್ಪಡುವ ಘನ ತ್ಯಾಜ್ಯ ಮತ್ತು ಪ್ಲಾಸ್ಟಿಕ್ ಮರು ಬಳಕೆ ಮಾಡಿ ಅದರಿಂದ ಇಂಧನವನ್ನು ಉತ್ಪಾದಿಸುವ ಯೋಜನೆಯೊಂದನ್ನು ವಾಯುವ್ಯ ರೈಲ್ವೆ ಪ್ರಾಧಿಕಾರದ ಅಧಿಕಾರಿಗಳು ಪ್ರಾರಂಭಿಸಲಿದ್ದಾರೆ.
ಘನ ಜೈವಿಕ ತ್ಯಾಜ್ಯ ವಿಲೇವಾರಿ ಮತ್ತು ಪ್ಲಾಸ್ಟಿಕ್ ವಿಲೇವಾರಿಗೆ ಎರಡು ತ್ಯಾಜ್ಯ ಸ್ಥಾವರಗಳನ್ನು ನಿರ್ಮಿಸಲು ಯೋಜಿಸಿದ್ದು, ಇದನ್ನು ಇಂಧನ ಉತ್ಪಾದಿಸಲು ಬಳಸಲಾಗುವುದು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಈ ಎರಡು ಸ್ಥಾವರಗಳು ಇದೇ ಆರ್ಥಿಕ ವರ್ಷದಿಂದ ಕಾರ್ಯನಿರ್ವಹಿಸಲಿದೆ ಎಂದು ತಿಳಿದು ಬಂದಿದೆ.
ಘನ ತ್ಯಾಜ್ಯ ನಿರ್ವಹಣೆಗೆ ಜೈಪುರ ರೈಲ್ವೆ ನಿಲ್ದಾಣ ಸಮೀಪ ಸ್ಥಾವರ ನಿರ್ಮಿಸಲಾಗುತ್ತಿದ್ದು, ಇದರಿಂದ 500 ಕೆಜಿ ಘನ ಜೈವಿಕ ತ್ಯಾಜ್ಯದಿಂದ 22 ಕೆಜಿ ಎಲ್ಪಿಜಿ ಗ್ಯಾಸ್ ಉತ್ಪಾದಿಸಲಾಗುವುದು. ಈ ಪರಿವರ್ತಿತ ಅನಿಲವನ್ನು ರೈಲ್ವೆ ನಿಲ್ದಾಣದಲ್ಲಿ ಅಡುಗೆ ಕಾರ್ಯಗಳಿಗೆ ಬಳಸಲಾಗುವುದು ಎಂದು ವಾಯವ್ಯ ರೈಲ್ವೆಯ ಸಾರ್ವಜನಿಕ ಸಂಪರ್ಕಾಧಿಕಾರಿ ತರುಣ್ ಜೈನ್ ತಿಳಿಸಿದ್ದಾರೆ.
ಪ್ಲಾಸ್ಟಿಕ್ ತ್ಯಾಜ್ಯದಿಂದ ಡೀಸೆಲ್ ತಯಾರಿಸುವ ಮತ್ತೊಂದು ಸ್ಥಾವರವನ್ನು ಕೂಡ ನಿರ್ಮಿಸಲಾಗುತ್ತಿದ್ದು, ಇದನ್ನು ಇಂಜಿನ್ ಚಲಾಯಿಸಲು ಬಳಸಲಾಗುವುದು ಎಂದು ಜೈನ್ ಹೇಳಿದ್ದಾರೆ.
ಇದೊಂದು ಉತ್ತಮ ಯೋಜನೆಯಾಗಿದ್ದು, ತ್ಯಾಜ್ಯಗಳ ಮರುಬಳಕೆಯ ಈ ಯೋಜನೆಯಿಂದ ರೈಲ್ವೆ ನಿಲ್ದಾಣಗಳ ಸಬಲೀಕರಣವಾಗುವುದಲ್ಲದೆ, ಸ್ವಚ್ಛತೆಯನ್ನೂ ಕಾಪಾಡುವಲ್ಲಿ ಈ ಯೋಜನೆ ಶ್ಲಾಘನೀಯವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.