ನವದೆಹಲಿ: ಐಎಸ್ಐಎಸ್ ಭಯೋತ್ಪಾದನ ಸಂಘಟನೆಯನ್ನು ಸೇರಲು ಮಹಾರಾಷ್ಟ್ರದಿಂದ ಇರಾಕ್ಗೆ ತೆರಳಿದ್ದ ಭಾರತದ ಯುವಕ ಸಿರಿಯಾದಲ್ಲಿ ಮೃತಪಟ್ಟಿದ್ದಾನೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.
ಐಎಸ್ಐಎಸ್ ಟ್ವಿಟರ್ ಮಹಾರಾಷ್ಟ್ರದ ಯುವಕ ಅಬ್ದುಲ್ ರೆಹಮಾನ್ ಮೃತಪಟ್ಟಿರುವುದನ್ನು ಸ್ಪಷ್ಟಪಡಿಸಿದೆ. ಅಲ್ಲದೇ ಐಎಸ್ಐಎಸ್ ಸೇರಿ ಮೃತಪಟ್ಟಿರುವ ಭಾರತದ ೩ನೇ ಯುವಕ ಈತ ಎಂದು ಹೇಳಿದೆ.
‘ಮೂವರು ಭಾರತೀಯರು ಹುತಾತ್ಮರಾಗಿದ್ದಾರೆ. ಮೊದಲನೇಯವ ಅಬು ಅಬ್ದುಲ್ಲಾಹ ಅಲ್ ಹಿಂದಿಯಲ್ಲಿ ಹೋರಾಡುತ್ತಾ ಪ್ರಾಣ ಬಿಟ್ಟಿದ್ದಾನೆ, ಎರಡನೇಯವ ಅಬು ಉತ್ಮಾನ್ ಅಲ್ ಹಿಂದಿಯಲ್ಲಿ ಹೋರಾಡಿ ಪ್ರಾಣ ಸಮರ್ಪಿಸಿದ್ದಾನೆ. ೩ನೇಯವ ಇತ್ತೀಚಿಗೆ ಹತ್ಯೆಗೀಡಾಗಿದ್ದಾನೆ. ಇವರೆಲ್ಲರನ್ನೂ ಅಲ್ಲಾಹು ಸ್ವೀಕಾರ ಮಾಡಲಿ’ ಎಂದು ಟ್ವಿಟರ್ನಲ್ಲಿ ಹೇಳಲಾಗಿದೆ.
ಸುನ್ನಿ ಉಗ್ರ ಸಂಘಟನೆಯಾಗಿರುವ ಐಎಸ್ಐಎಸ್ ಇರಾಕ್ ಮತ್ತು ಸಿರಿಯಾದಲ್ಲಿ ತಮ್ಮ ಪ್ರಭುತ್ವ ಸಾಧಿಸಲು ರಕ್ತಪಾತವನ್ನು ಮಾಡುತ್ತಿದೆ. ಸಮಾಜಿಕ ಜಾಲತಾಣಗಳ ಮೂಲಕ ಇತರ ದೇಶದ ಯುವಕರನ್ನು ತಮ್ಮತ್ತ ಆಕರ್ಷಿಸಲು ಪ್ರಯತ್ನಿಸುತ್ತಿದೆ. ಹಲವು ತಿಂಗಳುಗಳ ಹಿಂದೆ ಈ ಸಂಘಟನೆಯನ್ನು ಸೇರುವ ಸಲುವಾಗಿ ಮುಂಬಯಿಯ ಕೆಲ ಯುವಕರು ಇರಾಕ್, ಸಿರಿಯಾಗೆ ತೆರಳಿದ್ದರು. ಅದರಲ್ಲಿ ಒಬ್ಬ ವಾಪಾಸ್ಸಾಗಿ ಪೊಲೀಸರ ವಿಚಾರಣೆ ಎದುರಿಸುತ್ತಿದ್ದಾನೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.