ಬೆಳ್ತಂಗಡಿ : ಕುಡಿತಕ್ಕೆಜಾತಿ, ಮತ, ಭೇದ, ಧರ್ಮವಿಲ್ಲ. ಶಿಬಿರಕ್ಕೆ ಬರುವುದು ಅದೃಷ್ಟದ ಪ್ರತೀಕ. ಕುಡಿತ ಬಿಟ್ಟವ ಸಾಧಕನಾಗುತ್ತಾನೆ. ಅದುದರಿಂದ ಪಾನಮುಕ್ತ ಜೀವನವೆಂಬುದೇ ದೊಡ್ಡ ಸಾಧನೆಯಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವೀರೆಂದ್ರ ಹೆಗ್ಗಡೆ ಹೇಳಿದ್ದಾರೆ.
ಅವರು ಈಚೆಗೆ ಬಾಗಲಕೋಟೆ, ಹೊನ್ನಾವರ, ನೆಲಮಂಗಲ, ಹಿರೇಕೆರೂರಿನಿಂದ ಬಂದಂತಹ ೩೦೮ ಶಿಬಿರಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ಪ್ರೇರಣೆಯಿಂದ ನಡೆಸಲ್ಪಡುವ ಮದ್ಯವರ್ಜನಕಾರ್ಯಕ್ರಮ ಸವಾಲಾಗಿ ತೆಗೆದುಕೊಂಡಯೋಜನೆಯಾಗಿದೆ.ಹಿಂಸೆ, ಒತ್ತಡ, ದೀರ್ಘಕಾಲದ ಬಂದನದಲ್ಲಿಟ್ಟುಕುಡಿತ ಬಿಡಿಸಲು ಸಾಧ್ಯವಿಲ್ಲ. ಪ್ರೇರಣೆ, ಮನಪರಿವರ್ತನೆಯಿಂದ ಇದು ಸಾಧ್ಯವೆಂದು ಶಿಬಿರದ ಮೂಲಕ ಸಾಬೀತಾಗಿದೆ.ಒಂದು ವಾರದ ಶಿಬಿರದಲ್ಲಿ ತನು-ಮನ ಶುದ್ಧೀಕರಣ ಮಾಡುವುದರಜೊತೆಗೆ ಮನಸ್ಸಿನ ದೃಢತೆಗಾಗಿ, ಪಂಚೇಂದ್ರೀಯಗಳ ನಿಗ್ರಹಕ್ಕಾಗಿ, ಕೌಟುಂಬಿಕ ಸಾಮರಸ್ಯಕ್ಕಾಗಿ, ಸಮಸ್ಯೆಗಳ ಪರಿಹಾರೋಪಾಯಗಳನ್ನು ತಿಳಿಸಿ ಹೊಸ ಕನಸಿನೊಂದಿಗೆ ದೃಢ ಸಂಕಲ್ಪವನ್ನು ಮೂಡಿಸುವುದೇ ಶಿಬಿರದ ಉದ್ದೇಶವಾಗಿದೆಎಂದರು.
ಬಳಿಕ ಜನಜಾಗೃತಿ ವೇದಿಕೆಯ ನಿರ್ದೇಶಕರಾದ ವಿವೇಕ್ ವಿ.ಪಾಸ್ ಮಾತನಾಡಿ, ಸಮುದಾಯ ಮದ್ಯವರ್ಜನ ಶಿಬಿರದಲ್ಲಿ ಭಾಗಿಯಾದಎಲ್ಲಾ ಶಿಬಿರಾರ್ಥಿಗಳನ್ನು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಪಾನಮುಕ್ತತೆಯ 100ನೇ ದಿನವನ್ನುಆಚರಿಸುವುದಕ್ಕೆ ಶ್ರೀ ಕ್ಷೇತ್ರಕ್ಕೆ ಆಗಮಿಸುತ್ತಿದ್ದಾರೆ. ತಿಂಗಳಿಗೆ 15 ಶಿಬಿರಗಳಂತೆ ವರ್ಷಕ್ಕೆ 150 ಶಿಬಿರಗಳನ್ನು ಆಯೋಜಿಸುತ್ತಿದ್ದು, ಇದರಿಂದ ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಗಿದೆಎಂದರು.
ಸಭೆಯಲ್ಲಿ ವ್ಯವಸ್ಥಾಪನಾ ಸಮಿತಿಗಳ ಅಧ್ಯಕ್ಷರಾದ ಶ್ರೀಕಾಂತ್, ಆರ್.ಎಚ್.ನಾಯ್ಕ, ಶಂಕರ್ಗೌಡ, ಎಸ್.ಎಸ್.ಪಾಟೀಲ್, ಯೋಜನಾಧಿಕಾರಿ ಮಂಜುನಾಥ್, ಶಿಬಿರಾಧಿಕಾರಿಗಳಾದ ನಾಗೇಶ್ ವೈ.ಎ., ಮನೋಹರ್ ಟಿ.ಎಸ್., ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.