ದೀಪಾವಳಿ ಸಂಭ್ರಮಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇವೆ, ಮನೆಯಂಗಳವನ್ನು ಕೆಲವರು ಹಣತೆಯ ದೀಪಗಳಿಂದ ಸಿಂಗರಿಸಿದರೆ, ಇನ್ನು ಕೆಲವರು ಜಗಮಗಿಸುವ ವಿದ್ಯುತ್ ಅಲಂಕಾರಕ್ಕೆ ಮೊರೆ ಹೋಗುತ್ತಾರೆ. ಒಟ್ಟಿನಲ್ಲಿ ಬೆಳಕಿನ ಹಬ್ಬವನ್ನು ತಮ್ಮ ತಮ್ಮ ಅನುಕೂಲಕ್ಕೆ ತಕ್ಕಂತೆ ಜನರು ಆಚರಿಸುತ್ತಾರೆ.
ಆದರೆ ಈ ಬಾರಿಯ ದೀಪಾವಳಿಯನ್ನು ಪ್ರಕೃತಿ ಸ್ನೇಹಿಯಾಗಿ ಆಚರಿಸಲು ನಿರ್ಧರಿಸಿರುವ ಮುಸ್ಕಾನ್ ಟುಟ್ಟನ್, ಶರ್ದುಲ್ ದತರ್, ಪಾರ್ಥ್ ಶಿಂಧೆ ಎಂಬ ಮೂವರು 14 ವರ್ಷ ವಯಸ್ಸಿನ ಮಕ್ಕಳು ಸೋಲಾರ್ನಿಂದ ಉರಿಯುವ ಲ್ಯಾಂಪ್ ಮತ್ತು ಲ್ಯಾಂಟರ್ನ್ಗಳನ್ನು ವಿನ್ಯಾಸಗೊಳಿಸಿದ್ದಾರೆ.
ದೀಪಾವಳಿಗೆ ವಿಶೇಷವಾಗಿ ಏನಾದರು ಕಾರ್ಯ ಮಾಡಬೇಕು ಎಂದು ಈ ಮೂರು ಮಕ್ಕಳು ಕಳೆದ 10 ತಿಂಗಳಿನಿಂದ ಯೋಜನೆ ರೂಪಿಸುತ್ತಿದ್ದರು, ಆದರೆ ಕೊನೆಗೆ ಎಲ್ಲಾ ಐಡಿಯಾವನ್ನು ಬದಿಗೊತ್ತಿ ಸೋಲಾರ್ ಲ್ಯಾಂಪ್ ತಯಾರಿಸಿದರು.
ಮಿನಿಚರ್ ಸೋಲಾರ್ ಪ್ಯಾನಲ್ ಮಾದರಿಯನ್ನು ಬಳಸಿ, ಅದನ್ನು ಸಾಮಾನ್ಯ ಲ್ಯಾಂಟರ್ನ್ ನ ಹೊರಭಾಗಕ್ಕೆ ಜೋಡಿಸಿದರು. ಇದನ್ನು ಕಿಟಕಿ, ಬಾಲ್ಕನಿ, ಟೆರೆಸ್ನಲ್ಲಿ ಇಟ್ಟಾಗ ಮಿನಿ ಸೋಲಾರ್ ಪ್ಯಾನಲ್ ಸೂರ್ಯನ ಕಿರಣವನ್ನು ಹೀರಿ ಅದು ಎಲ್ಇಡಿ ಬಲ್ಬ್ ಮೂಲಕ ಲ್ಯಾಂಟರ್ನ್, ಲ್ಯಾಂಪ್ಗೆ ಬೆಳಕು ನೀಡುತ್ತದೆ.
ಲ್ಯಾಂಟರ್ನ್ಗೆ ಬ್ಯಾಟರಿಯನ್ನೂ ಅಳವಡಿಸಲಾಗಿದ್ದು, 8 ರಿಂದ 10 ಗಂಟೆಗಳ ಕಾಲ ಇದು ಉರಿಯುತ್ತದೆ. ಈ ಬ್ಯಾಟರಿಗೆ 25 ವರ್ಷಗಳ ಬಾಳಿಕೆ ಇದೆ. ಹೀಗಾಗಿ ದೀಪಾವಳಿಗೆಂದು ತಯಾರಿಸಲಾದ ಈ ಸೋಲಾರ್ ಲ್ಯಾಂಟರ್ನ್ಗಳನ್ನು ಇತರ ಹಬ್ಬಗಳಿಗೂ ಬಳಸುವುದಕ್ಕೆ ಯಾವುದೇ ಅಡ್ಡಿಯಿಲ್ಲ.
ಸೋಲಾರ್ ಪ್ಯಾನೆಲ್ ತುಂಬಾ ದುಬಾರಿಯಾದ ಹಿನ್ನಲೆಯಲ್ಲಿ ಅವರು ಚೀನಾದ ಮಿನಿಚರ್ಗಳನ್ನು ಬಳಸಿದರು. ಮಕ್ಕಳ ಈ ಕಾರ್ಯಕ್ಕೆ ಅವರ ಶಿಕ್ಷಕರು ಸಾಥ್ ನೀಡಿದ್ದರು.
ಒಟ್ಟಿನಲ್ಲಿ 3 ಮಕ್ಕಳು ಸೇರಿ ಈ ಬಾರಿಯ ದೀಪಾವಳಿಯಲ್ಲಿ ವಿದ್ಯುತ್ ಉಳಿತಾಯವಾಗುವಂತೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ಪ್ರಕೃತಿ ಸ್ನೇಹಿ ಬೆಳಕನ್ನು ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.