News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 24th October 2026

×
Home About Us Advertise With s Contact Us

ಅಫ್ಜಲ್‌ ಗುರು ಭಯೋತ್ಪಾದಕನೇ ಎಂಬ ಪ್ರಶ್ನೆಗೆ ಗೊತ್ತಿಲ್ಲ ಎಂದ ಹಮೀದ್‌ ಅನ್ಸಾರಿ

ನವದೆಹಲಿ: ಯುಪಿಎ ಸರ್ಕಾರದ ಅವಧಿಯಲ್ಲಿ, ಅಂದರೆ 2013ರಲ್ಲಿ ಗಲ್ಲುಶಿಕ್ಷೆಗೆ ಗುರಿಯಾದ ಸಂಸತ್ ಭವನದ ಮೇಲಿನ ದಾಳಿಯ ಅಪರಾಧಿ ಅಫ್ಜಲ್ ಗುರು ಕುರಿತ ಪ್ರಶ್ನೆಯೊಂದಕ್ಕೆ ಉತ್ತರಿಸಲು ನಿರಾಕರಿಸುವ ಮೂಲಕ, ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ವಿವಾದವೊಂದಕ್ಕೆ ಎಡೆಮಾಡಿಕೊಟ್ಟಿದ್ದಾರೆ.

ಪಾಡ್‌ಕಾಸ್ಟ್ ಒಂದರ ಸಂದರ್ಭದಲ್ಲಿ ಈ ಸಂಭಾಷಣೆ ನಡೆದಿದೆ. ಇದರಲ್ಲಿ ಸಂದರ್ಶಕ, 2001ರ ಸಂಸತ್ ಭವನದ ಮೇಲಿನ ದಾಳಿ ಮತ್ತು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ (JNU) ನಡೆದ ಘಟನೆಗಳಂತಹ ಹಿಂದಿನ ವಿವಾದಗಳ ಬಗ್ಗೆ ಅನ್ಸಾರಿ ಅವರನ್ನು ಪ್ರಶ್ನಿಸಿದ್ದಾನೆ. ಆಗ ಅನ್ಸಾರಿ ಹಿಂದೆ ಜೆಎನ್‌ಯುನಲ್ಲಿ ಬೋಧಕರಾಗಿದ್ದರು.

ಸಂಭಾಷಣೆಯ ವೇಳೆ, ಅಫ್ಜಲ್ ಗುರುಗೆ ವಿಧಿಸಲಾದ ಗಲ್ಲುಶಿಕ್ಷೆಯ ಕುರಿತು ತಮ್ಮ ಅಭಿಪ್ರಾಯವೇನು ಎಂದು  ಅನ್ಸಾರಿ ಅವರನ್ನು ಕೇಳಲಾಗಿದೆ. 2001ರಲ್ಲಿ ಭಾರತೀಯ ಸಂಸತ್ ಭವನದ ಮೇಲೆ ನಡೆದ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ಅಫ್ಜಲ್ ಗುರು ದೋಷಿ ಎಂದು ಸಾಬೀತಾಗಿತ್ತು. ಆತನ ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿದ ನಂತರ, 2013ರ ಫೆಬ್ರವರಿ 9ರಂದು ಆತನನ್ನು ಗಲ್ಲಿಗೇರಿಸಲಾಯಿತು.

ಅಫ್ಜಲ್ ಗುರು ಒಬ್ಬ ಭಯೋತ್ಪಾದಕನೇ ಎಂದು ಕೇಳಿದಾಗ, “ನನಗೆ ಹೇಗೆ ಗೊತ್ತು?” ಎಂದು ಅನ್ಸಾರಿ ಉತ್ತರಿಸಿದರು. ನ್ಯಾಯಾಂಗ ವ್ಯವಸ್ಥೆಯ ಮೂಲಕ ಸರ್ಕಾರವು ಗುರುಗೆ ಶಿಕ್ಷೆ ವಿಧಿಸಿದೆ ಮತ್ತು ಆ ವಿಷಯ ಅಲ್ಲಿಗೆ ಮುಗಿದುಹೋಗಿದೆ ಎಂದಿದ್ದಾರೆ.

ಜೆಎನ್‌ಯು  ನಲ್ಲಿ ಅಫ್ಜಲ್ ಗುರು ಪ್ರಕರಣದ ಬಗ್ಗೆ ಎಂದಿಗೂ ಚರ್ಚೆ ನಡೆದಿಲ್ಲ ಎಂದು ಹಮೀದ್ ಅನ್ಸಾರಿ ಹೇಳಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top