Saturday, July 11th, 2026
ರಾಷ್ಟ್ರೀಯ

ಶ್ರೀನಗರ: ಪಾಕಿಸ್ತಾನ-ಆಕ್ರಮಿತ ಜಮ್ಮು-ಕಾಶ್ಮೀರದಲ್ಲಿ ಜನರ ಆಕ್ರೋಶದ ಕಟ್ಟಿಯೊಡೆದಿದ್ದು, ಪ್ರತಿಭಟನೆಗಳು ತೀವ್ರಗೊಂಡಿವೆ. ಜಾಯಿಂಟ್ ಅವಾಮಿ ಆಕ್ಷನ್ ಕಮಿಟಿ (JAAC) ನಾಯಕತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಕಿಸ್ತಾನ ಭದ್ರತಾ ಪಡೆಗಳು ಗುಂಡು ಹಾರಿಸಿ ಅಮಾಯಕರನ್ನು ಕೊಂದು ಹಾಕಿದ್ದಾರೆ. ರಾವಲಕೋಟ್‌ನಲ್ಲಿ ನಡೆದ ಪ್ರತಿಭಟನೆಯ ವೇಳೆ ಭದ್ರತಾ ಪಡೆಗಳು ಗುಂಡು ಹಾರಿಸಿದ್ದರ ಪರಿಣಾಮ ಇಬ್ಬರು ಪ್ರತಿಭಟನಾಕಾರರು ಸಾವನ್ನಪ್ಪಿದ್ದಾರೆ. ಹಲವಾರು ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ.
ಈ ಘಟನೆಯಿಂದಾಗಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಆಕ್ರೋಶ ಮತ್ತು ಅಸ್ಥಿರತೆ ಹೆಚ್ಚಾಗಿದೆ. ಜಾಯಿಂಟ್ ಅವಾಮಿ ಆಕ್ಷನ್ ಕಮಿಟಿಯ ಪ್ರಮುಖ ನಾಯಕ ಉಮರ್ ನಜೀರ್ ಕಾಶ್ಮೀರಿ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, “ಜುಲೈ 14ರೊಳಗೆ ನಮ್ಮ 38 ಬೇಡಿಕೆಗಳನ್ನು ಈಡೇರಿಸದಿದ್ದರೆ ಜುಲೈ 15ರಂದು ಮುಜಫ್ಫರಾಬಾದ್‌ನತ್ತ ಬೃಹತ್ ಮುತ್ತಿಗೆ ಹಾಕುವುದಾಗಿ” ಎಚ್ಚರಿಕೆ ನೀಡಿದ್ದಾರೆ. ಇವರ ಬೇಡಿಕೆಗಳಲ್ಲಿ ಬಂಧಿತ ನಾಯಕರ ಬಿಡುಗಡೆ, ಪ್ರತಿಭಟನಾಕಾರರ ಮೃತದೇಹಗಳ ಹಸ್ತಾಂತರ, ಆಹಾರ, ಔಷಧಿ ಸರಬರಾಜು ಮತ್ತು ಸಂವಹನ ಸೇವೆಗಳ ಪುನಃಸ್ಥಾಪನೆ, ಚುನಾವಣಾ ಪ್ರತಿನಿಧಿತ್ವ ಮತ್ತು ಇತರ ಆರ್ಥಿಕ-ರಾಜಕೀಯ ಸುಧಾರಣೆಗಳು ಸೇರಿವೆ.
ಪಿಒಕೆಯಲ್ಲಿ ದೀರ್ಘಕಾಲದಿಂದಲೂ ಆರ್ಥಿಕ ಸಮಸ್ಯೆಗಳು, ಹಕ್ಕುಗಳ ಕೊರತೆ ಮತ್ತು ಪಾಕಿಸ್ತಾನ ಸರ್ಕಾರದ ನೀತಿಗಳ ವಿರುದ್ಧ ಅಸಂತೋಷ ಹೆಚ್ಚುತ್ತಿದೆ. JAAC ಈ ಸಮಸ್ಯೆಗಳನ್ನು ಎತ್ತಿಹಿಡಿದು ಪ್ರತಿಭಟನೆಗಳನ್ನು ನಡೆಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಪ್ರತಿಭಟನೆಗಳು ತೀವ್ರಗೊಂಡು, ಭದ್ರತಾ ಪಡೆಗಳೊಂದಿಗೆ ಘರ್ಷಣೆಗಳು ಸಂಭವಿಸುತ್ತಿವೆ. ಪ್ರಸ್ತುತ ಸ್ಥಿತಿಯಲ್ಲಿ POJKದಲ್ಲಿ ತುಂಬಾ ಉದ್ವಿಗ್ನತೆ ತುಂಬಿದೆ. ಜನರು ಶಾಂತಿಯುತವಾಗಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



