News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಶಿಮ್ಲಾ ಒಪ್ಪಂದ 1972 : ಮಧ್ಯರಾತ್ರಿಯ ಸಂಭಾಷಣೆಯಿಂದ ಏರ್ಪಟ್ಟ ಒಪ್ಪಂದ

ಡಿಸೆಂಬರ್ 1971ರಲ್ಲಿ, ಒಂದು ಭಯಂಕರ ಯುದ್ಧವೊಂದು ಅದಾಗಷ್ಟೇ ಮುಗಿದಿತ್ತು. ಭಾರತವು ಯುದ್ಧಭೂಮಿಯಲ್ಲಿ ಐತಿಹಾಸಿಕ ಮತ್ತು ನಿರ್ಣಾಯಕ ವಿಜಯ ಸಾಧಿಸಿತ್ತು. ಉಪಖಂಡದ ನಕ್ಷೆಯನ್ನೇ ಬದಲಾಯಿಸಿದ ಆ ವಿಜಯವು ಭಾರತಕ್ಕೆ ಮಾತುಕತೆಯಲ್ಲಿ ಮೇಲುಗೈ ನೀಡಿತ್ತು. ಭಾರತದ ಕೈಯಲ್ಲಿ ವಿಶಾಲ ಪ್ರದೇಶ ಮತ್ತು 93,000ಕ್ಕೂ ಹೆಚ್ಚು ಪಾಕಿಸ್ತಾನಿ ಯುದ್ಧಬಂಧಿಗಳು ಇದ್ದರು. ಪಾಕಿಸ್ತಾನದ ಹೊಸ ರಾಷ್ಟ್ರಪತಿ ಜುಲ್ಫಿಕರ್ ಅಲಿ ಭುಟ್ಟೋಗೆ ಪರಿಸ್ಥಿತಿ ಅತ್ಯಂತ ಗಂಭೀರವಾಗಿತ್ತು. ತನ್ನ ನಾಶವಾದ ದೇಶವನ್ನು ಉಳಿಸಿಕೊಳ್ಳಲು ಮತ್ತು ತನ್ನ ಸೈನಿಕರನ್ನು ಮನೆಗೆ ಕರೆಸಿಕೊಳ್ಳಲು ಅವರು ಬಹಳ ಆತುರದಲ್ಲಿದ್ದರು. ಅದಕ್ಕಾಗಿ ಅವರು 1972ರ ಜುಲೈನಲ್ಲಿ ಭಾರತದ ಶಿಮ್ಲಾ ಪರ್ವತಗಳಿಗೆ ಬಂದರು.

ಶಿಮ್ಲಾ ಒಪ್ಪಂದ 

ಶಿಮ್ಲಾ ಒಪ್ಪಂದ (3 ಜುಲೈ 1972) ಎಂದು ಪ್ರಸಿದ್ಧವಾದ ಈ ಒಪ್ಪಂದವು ಹೇಗೆ ಜರುಗಿತು ಎಂಬುದು ಬಹಳ ಕಡಿಮೆ ಜನರಿಗೆ ತಿಳಿದಿದೆ. ಇದು ಮೇಜಿನ ಮೇಲಿನ ಔಪಚಾರಿಕ ಕುಟನೀತಿಯಿಂದಾಗಿ ಅಲ್ಲ, ಅರ್ಧರಾತ್ರಿಯಲ್ಲಿ ನಡೆದ ಖಾಸಗಿ ಸಂಭಾಷಣೆಯಿಂದ ಉದ್ಭವವಾಯಿತು.

ಕುಟನೀತಿ ವಿಫಲವಾಗುವ ಸ್ಥಿತಿ

ಎರಡು ದೇಶಗಳ ನಾಯಕರ ನಡುವಿನ ಮಾತುಕತೆ 28 ಜೂನ್ 1972ರಂದು ಪ್ರಾರಂಭವಾಗಿ 30 ಜೂನ್‌ವರೆಗೂ ಯಾವುದೇ ಫಲಿತಾಂಶವಿಲ್ಲದೆ ಮುಂದುವರೆಯಿತು. 1 ಜುಲೈ 1972ರಂದು ಮಾತುಕತೆ ಸಂಪೂರ್ಣ ವಿಫಲವಾಗಿ ಹೋಯಿತು. 93,000 ಯುದ್ಧಬಂಧಿಗಳ ವಿಷಯ ಮತ್ತು 1949ರ ಸೀಮಾರೇಖೆಯನ್ನು ನಿಯಂತ್ರಣ ರೇಖೆ (LoC) ಯಾಗಿ ಮಾಡುವ ವಿಷಯದಲ್ಲಿ ತೀವ್ರ ಭಿನ್ನಾಭಿಪ್ರಾಯವಿತ್ತು. 2 ಜುಲೈರಂದು ಸಭೆಯ ಕೊನೆಯ ದಿನವಾಗಿದ್ದರಿಂದ ಎಲ್ಲರೂ ಒತ್ತಡದಲ್ಲಿದ್ದರು. ಆದರೆ ಯಾವುದೇ ಫಲಿತಾಂಶ ಬರಲಿಲ್ಲ. ಔಪಚಾರಿಕ ಔತನಕೂಟದ ನಂತರ ಎಲ್ಲರೂ ತಮ್ಮ ತಮ್ಮ ಕೊಠಡಿಗಳಿಗೆ ಹೋದರು. ಮರುದಿನ ಸಭೆಯ ವಿಫಲತೆಯನ್ನು ಪ್ರಕಟಿಸುವುದೊಂದೇ ಬಾಕಿ ಎಂದು ಎಲ್ಲರೂ ಭಾವಿಸಿದ್ದರು.

ಅರ್ಧರಾತ್ರಿಯ ನಿರ್ಣಾಯಕ ತಿರುವು

ಆದರೆ ಅಸಲಿ ಯಶಸ್ಸು ಔಪಚಾರಿಕ ಮೇಜಿನ ಮೇಲೆ ಬರಲಿಲ್ಲವಾದರೂ  ಶಾಂತವಾದ, ಖಾಸಗಿ ಕ್ಷಣದಲ್ಲಿ ಒಪ್ಪಂದ ನಿರ್ಣಾಯಕ ಘಟ್ಟ ತಲುಪಿತು .2 ಜುಲೈ 1972ರ ರಾತ್ರಿ, ಡಿನ್ನರ್ ನಂತರ, ಜುಲ್ಫಿಕರ್ ಅಲಿ ಭುಟ್ಟೋ ಇಂದಿರಾ ಗಾಂಧಿಯವರ ಕೊಠಡಿಗೆ ಹೋದರು. ಅವರು ಇಂದಿರಾ ಗಾಂಧಿಯ ಕಾಲಿಗೆ ಬಿದ್ದು, “ನನ್ನ ಸೈನಿಕರನ್ನು ಬಿಡುಗಡೆ ಮಾಡದಿದ್ದರೆ ನಾನು ಜೀವಂತವಾಗಿ ಮನೆಗೆ ಹೋಗಲಾರೆ. ಜನರು ನನ್ನನ್ನು ಕೊಲ್ಲುತ್ತಾರೆ. ದಯವಿಟ್ಟು ನನಗೆ ಒಂದು ಮಾರ್ಗ ತೋರಿಸಿ” ಎಂದು ಕೇಳಿಕೊಂಡರು. ಇಂದಿರಾ ಗಾಂಧಿ ಅವರಿಗೆ ಸ್ಪಷ್ಟವಾಗಿ ಹೇಳಿದರು: “ನಿಯಂತ್ರಣ ರೇಖೆಯನ್ನು (LoC) ಅಂತರರಾಷ್ಟ್ರೀಯ ಸರ್ಕಾರಿ ಗಡಿಯಾಗಿ ಮಾಡುವುದಾಗಿ ಬರೆದು ಕೊಡಿ, ನಾನು ನಿಮ್ಮ ಎಲ್ಲಾ ಬೇಡಿಕೆಗಳನ್ನು ಒಪ್ಪಿಕೊಳ್ಳುತ್ತೇನೆ.”ಭುಟ್ಟೋ “ಖಂಡಿತ! ನನ್ನ ಮೇಲೆ ನಂಬಿಕೆ ಇರಿಸಿ” ಎಂದು ಹೇಳಿದರು. ಆ ಕ್ಷಣದಲ್ಲಿ ಎಲ್ಲವೂ ಬದಲಾಯಿತು.ಇಬ್ಬರೂ ನಾಯಕರು ಮುಖ್ಯ ಹಾಲ್‌ಗೆ ಹೋಗಿ ಅಧಿಕಾರಿಗಳನ್ನು ಕರೆದರು. ಅರ್ಧರಾತ್ರಿ 12:40ಕ್ಕೆ ಶಿಮ್ಲಾ ಒಪ್ಪಂದದ ಮೇಲೆ ಸಹಿ ಆಯಿತು. ಭಾರತವು ಅತ್ಯಂತ ಉದಾರತೆಯಿಂದ 93,000 ಯುದ್ಧಬಂಧಿಗಳನ್ನು ಬಿಡುಗಡೆ ಮಾಡಿತು ಮತ್ತು ಆಕ್ರಮಿತ ಪ್ರದೇಶಗಳನ್ನು ಹಿಂದಿರುಗಿಸಿತು — ಶಾಶ್ವತ ಸ್ನೇಹದ ನಿರೀಕ್ಷೆಯಲ್ಲಿ ಇದೆಲ್ಲವೂ ನಡೆಯಿತು.

ಅಪೂರ್ಣ ವಾಗ್ದಾನ

ಆದರೆ ಭುಟ್ಟೋ ತಮ್ಮ ಮಾತನ್ನು  ಎಂದಿಗೂ ಈಡೇರಿಸಲಿಲ್ಲ. ಶಿಮ್ಲಾ ಒಪ್ಪಂದವನ್ನು ಪಾಕಿಸ್ತಾನವು ಪದೇ ಪದೇ ಉಲ್ಲಂಘಿಸಿತು. LoC ದಾಟಿ ಭಾರತದಲ್ಲಿ ಭಯೋತ್ಪಾದನೆಗೆ ಬೆಂಬಲ ನೀಡಿತು, 1999ರ ಕಾರ್ಗಿಲ್ ಯುದ್ಧ ಮಾಡಿತು ಮತ್ತು ಕಾಶ್ಮೀರವನ್ನು ಅಂತರರಾಷ್ಟ್ರೀಯೀಕರಣಗೊಳಿಸುವ ಪ್ರಯತ್ನ ಮಾಡುತ್ತಲೇ ಇದೆ. 2025ರ ಪಹಲ್ಗಾಂ ದಾಳಿಯ ನಂತರ ಪಾಕಿಸ್ತಾನವು ಶಿಮ್ಲಾ ಒಪ್ಪಂದವನ್ನು “ತಾತ್ಕಾಲಿಕವಾಗಿ ನಿಲ್ಲಿಸುತ್ತೇವೆ” ಎಂದು ಘೋಷಿಸಿತು — ಇದು ಅತ್ಯಂತ ಕಹಿ ವ್ಯಂಗ್ಯವಾಗಿದೆ, ಏಕೆಂದರೆ ಒಪ್ಪಂದವನ್ನು ಅತ್ಯಂತ ಹೆಚ್ಚು ಉಲ್ಲಂಘಿಸಿದ ದೇಶಕ್ಕೆ ಅದನ್ನು ನಿಲ್ಲಿಸುವ ಹಕ್ಕೇ ಇಲ್ಲ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top