ತಿರುವನಂತಪುರಂ : ವಿಜಯದಶಮಿಯ ಪಾವನ ದಿನವಾದ ಶುಕ್ರವಾರ ಕೇರಳದ ಸಾವಿರಾರು ಮಕ್ಕಳು ವಿದ್ಯಾರಂಭ ಮಾಡಿದರು. ಧರ್ಮ, ಜಾತಿಯನ್ನು ಮೀರಿ ಎಲ್ಲರೂ ತಮ್ಮ ಮಕ್ಕಳಿಗೆ ಅಕ್ಷರಾರಂಭ ಮಾಡಿಸಿರುವುದು ವಿಶೇಷ.
ನವರಾತ್ರಿಯ ಕೊನೆಯ ದಿನವಾದ ವಿಜಯದಶಮಿಯಂದು ಸಂಪೂರ್ಣ ಸಾಕ್ಷರತಾ ರಾಜ್ಯ ಕೇರಳದಲ್ಲಿ ‘ವಿದ್ಯಾರಂಭ’ವನ್ನು ಮಾಡಲಾಗುತ್ತದೆ. ಮಕ್ಕಳಿಗೆ ವಿದ್ಯಾಭ್ಯಾಸ ಆರಂಭಿಸಲು ಇದು ಅತ್ಯಂತ ಪವಿತ್ರ ದಿನವೆಂಬ ಪ್ರತೀತಿ ಇದೆ.
ಹೊಸ ಬಟ್ಟೆ ತೊಟ್ಟ 2ರಿಂದ 3 ವರ್ಷದ ಮಕ್ಕಳು ತಮ್ಮ ಪೋಷಕರೊಂದಿಗೆ ದೇವಸ್ಥಾನಗಳಿಗೆ ಆಗಮಿಸಿ ವಿದ್ಯಾರಂಭ ಸಂಪ್ರದಾಯದಲ್ಲಿ ಪಾಲ್ಗೊಂಡರು. ಕೆಲವೆಡೆ ಮಕ್ಕಳ ನಾಲಗೆಯ ಮೇಲೆ ಚಿನ್ನದಲ್ಲಿ ಅಕ್ಷರವನ್ನು ಬರೆದರೆ, ಇನ್ನೂ ಕೆಲವೆಡೆ ಅಕ್ಕಿಯಲ್ಲಿ ಅಕ್ಷರವನ್ನು ಬರೆಸಿ ವಿದ್ಯಾರಂಭ ಮಾಡಿಸಲಾಗಿದೆ.
ಶಿಕ್ಷಕರು, ಸೆಲೆಬ್ರಿಟಿಗಳು, ರಾಜಕಾರಣಿಗಳು ಈ ಸಂಪ್ರದಾಯದಲ್ಲಿ ಪಾಲ್ಗೊಂಡರು. ಹಿಂದೂ ಪದ್ಧತಿಯಾದ ಇದರಲ್ಲಿ ಇತರ ಧಾರ್ಮಿಯರೂ ಪಾಲ್ಗೊಂಡು ವಿದ್ಯೆಯ ಮಹತ್ವವನ್ನು ಸಾರಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.