ಸುಳ್ಯ: ತಾಲೂಕಿಗೆ ಮಂಜೂರಾಗಿರುವ 110 ಕೆವಿ ವಿದ್ಯುತ್ ಸಬ್ಸ್ಟೇಷನ್ ಅನುಷ್ಠಾನದ ವಿಳಂಬವನ್ನು ವಿರೋಧಿಸಿ ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸುಳ್ಯ ಮೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವೆಂಕಪ್ಪ ಗೌಡ ಜಿಲ್ಲೆಯ ಇತರ ಎಲ್ಲಾ ತಾಲೂಕುಗಳಲ್ಲಿ ವಿದ್ಯುತ್ ಸರಬರಾಜು ಸರಿಯಾಗಿದೆ. ಆದರೆ ಸುಳ್ಯದಲ್ಲಿ ಮಾತ್ರ ವಿದ್ಯುತ್ ಸಮಸ್ಯೆ ತೀವ್ರವಾಗಿದ್ದು, ಅದನ್ನು ಪರಿಹರಿಸಲು ಯಾವುದೇ ಪ್ರಯತ್ನಗಳು ನಡೆಯುತ್ತಿಲ್ಲ. 110 ಕೆವಿ ಸಬ್ಸ್ಟೇಷನ್ ಮಂಜೂರಾಗಿದ್ದರೂ ಅದನ್ನು ಅನುಷ್ಠಾನಗೊಳಿಸಲು ಶಾಸಕರು ಯಾವುದೇ ಪ್ರಯತ್ನವನ್ನೂ ಮಾಡಿಲ್ಲ ಎಂದು ಆರೋಪಿಸಿದರು.
ರಾಜ್ಯ ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ ಕಾಂಗ್ರೆಸ್ ಮುಖಂಡರಾದ ಪಿ.ಎಸ್.ಗಂಗಾಧರ, ಕೆ.ಎಂ.ಮುಸ್ತಫಾ, ಮಹಮ್ಮದ್ ಪವಾಝ್, ಶಿವರಾಮ ರೈ, ನಂದರಾಜ್ ಸಂಕೇಶ್, ಅಶೋಕ್ ಚೂಂತಾರು ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು.
ಕಾಂಗ್ರೆಸ್ ಪ್ರಮುಖರಾದ ಬಾಪೂ ಸಾಹೇಬ್, ಕಿರಣ್ ಬುಡ್ಲೆಗುತ್ತು, ಲೀಲಾ ಮನಮೋಹನ್, ತಾರಾ ಮಲ್ಲಾರ, ಮಾಧವ ಗೌಡ ಬೆಳ್ಳಾರೆ, ಹರಿಪ್ರಸಾದ್.ಕೆ.ಕೆ., ಸತೀಶ್ ಕೂಜುಗೋಡು, ಅಬೂಬಕ್ಕರ್ ಅಡ್ಕಾರ್, ಮೂಸಾ ಪೈಂಬೆಚ್ಚಾಲ್, ತೇಜಕುಮಾರ್ ಬಡ್ಡಡ್ಕ, ಅಶೋಕ್ ನೆಕ್ರಾಜೆ, ಶರೀಫ್ ಕಂಠಿ, ಲೀಲಾ ಮನಮೋಹನ್, ಲಕ್ಷ್ಮೀ ಸುಬ್ರಹ್ಮಣ್ಯ, ಶಶಿಕಲ, ಶಾಫಿ ಕುತ್ತಮೊಟ್ಟೆ, ಸುರೇಶ್ ಅಮೈ, ರಾಧಾಕೃಷ್ಣ ಪರಿವಾರಕಾನ, ರಿಯಾಝ್ ಕಟ್ಟೆಕಾರ್, ನಝೀರ್, ಅಶ್ರಫ್ ಗುಂಡಿ ಮತ್ತಿತರರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.