
ನವದೆಹಲಿ: ಪ್ರಧಾನಿ ಮೋದಿ ನರೇಂದ್ರ ಮೋದಿ ಬುಧವಾರ ರಾತ್ರಿ ದೆಹಲಿಯ ಲೋಕ ಕಲ್ಯಾಣ್ ಮಾರ್ಗದಲ್ಲಿರುವ ತಮ್ಮ ನಿವಾಸದಲ್ಲಿ ಮಹಿಳಾ ವಿಶ್ವಕಪ್ ಚಾಂಪಿಯನ್ಗಳನ್ನು ಭೇಟಿಯಾದರು. ಮಹಿಳಾ ಕ್ರಿಕೆಟ್ ತಂಡದ ಗೆಲುವಿಗೆ ಅಭಿನಂದನೆ ಸಲ್ಲಿಸಿದರು ಮತ್ತು ಸತತ ಮೂರು ಸೋಲುಗಳ ನಂತರ ಪಂದ್ಯಾವಳಿಯಲ್ಲಿ ಅದ್ಭುತ ಪುನರಾಗಮನವನ್ನು ಮಾಡಿರುವ ಆಟಗಾರ್ತಿಯರ ಇಚ್ಛಾಶಕ್ತಿಯನ್ನು ಕೊಂಡಾಡಿದರು.
ಈ ಸಂದರ್ಭದಲ್ಲಿ, ಕ್ಯಾಪ್ಟನ್ ಹರ್ಮನ್ಪ್ರೀತ್ ಕೌರ್ 2017 ರಲ್ಲಿ ಮೋದಿಯವರನ್ನು ಟ್ರೋಫಿ ಇಲ್ಲದೆಯೇ ಭೇಟಿಯಾದ ಸಂದರ್ಭವನ್ನು ನೆನೆಪಿಸಿಕೊಂಡು, ಟ್ರೋಫಿಯೊಂದಿಗೆಯೇ ಪ್ರಧಾನಿಯನ್ನು ಭೇಟಿಯಾಗುವುದು ನಮ್ಮ ಬಯಕೆಯಾಗಿತ್ತು ಎಂದಿದ್ದಾರೆ.
ಉಪನಾಯಕಿ ಸ್ಮೃತಿ ಮಂಧಾನ ಮಾತನಾಡಿ, ಪ್ರಧಾನಿ ನಮ್ಮನ್ನು ಪ್ರೇರೇಪಿಸಿದ್ದಾರೆ ಮತ್ತು ಅವರೆಲ್ಲರಿಗೂ ಸ್ಫೂರ್ತಿಯಾಗಿದ್ದಾರೆ ಎಂದಿದ್ದಾರೆ. ಇಂದು ಹುಡುಗಿಯರು ಎಲ್ಲಾ ಕ್ಷೇತ್ರಗಳಲ್ಲಿ ಶ್ರೇಷ್ಠ ಸಾಧನೆಗಳನ್ನು ಮಾಡುತ್ತಿರುವ ಬಗ್ಗೆಯೂ ಉಲ್ಲೇಖಿಸಿರುವ ಅವರು, ಪ್ರೋತ್ಸಾಹದ ಮೂಲವಾಗಿರುವುದಕ್ಕೆ ಪ್ರಧಾನಿಯನ್ನು ಶ್ಲಾಘಿಸಿದ್ದಾರೆ.
ದೀಪ್ತಿ ಶರ್ಮಾ 2017 ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರೊಂದಿಗಿನ ತಮ್ಮ ಭೇಟಿಯನ್ನು ನೆನಪಿಸಿಕೊಂಡರು, ಆಗ ಪ್ರಧಾನಿಯವರು ಕಷ್ಟಪಟ್ಟು ಕೆಲಸ ಮಾಡುವಂತೆ ಸಲಹೆ ನೀಡಿದ್ದನ್ನು ಕೂಡ ಸ್ಮರಿಸಿದ್ದಾರೆ.
Every Indian feels immense pride in Team India’s World Cup victory. It was a delight interacting with the women’s cricket team. Do watch! https://t.co/PkkfKFBNbb
— Narendra Modi (@narendramodi) November 6, 2025
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



