ಲಂಡನ್: ಯುಕೆಯಲ್ಲಿರುವ ಭಾರತೀಯ ಮೂಲದ 15 ವರ್ಷದ ಬಾಲಕ ಪ್ರತಾಪ್ ಸಿಂಗ್ ಪ್ರತಿಷ್ಟಿತ ಇನ್ಸ್ಟ್ಯೂಟ್ ಆಫ್ ಫಿಝಿಕ್ಸ್ (ಐಒಪಿ) ಪ್ರಶಸ್ತಿಗೆ ಆಯ್ಕೆಯಾಗಿದ್ದಾನೆ.
ಈ ಪ್ರಶಸ್ತಿಯೂ 500 ಪೌಂಡ್ ನಗದನ್ನು ಹೊಂದಿದೆ. ಅಲ್ಲದೇ ಈ ಮೂಲಕ ಪ್ರತಾಪ್ ರಾಷ್ಟ್ರೀಯ ಭೌತಶಾಸ್ತ್ರ ಸಂಬಂಧಿ ಸಂಸ್ಥೆಗಳಿಗೆ ಪ್ರವಾಸಕೈಗೊಳ್ಳುವ ಅವಕಾಶವನ್ನೂ ಪಡೆದುಕೊಂಡಿದ್ದಾನೆ.
ಅಲ್ಬರ್ಟ್ ಐನ್ಸ್ಟೇನಿನ ಥಿಯರಿ ಆಫ್ ಸ್ಪೆಶಲ್ ರಿಲೇಟಿವಿಟಿಯ ಪ್ರಭಾವಗಳ ಬಗ್ಗೆ ಮೇಲೆ ಪರಿಶೀಲನಾ ಪ್ರಯೋಗಗಳನ್ನು ಕೈಗೊಂಡ ಹಿನ್ನಲೆಯಲ್ಲಿ ಪ್ರತಾಪ್ ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಾನೆ. ಈ ಪ್ರಶಸ್ತಿ ಸ್ಪರ್ಧೆಯಲ್ಲಿ ಸುಮಾರು 200 ಬಾಲಕರು ಭಾಗವಹಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.