ನವದೆಹಲಿ: ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಪಾಕಿಸ್ಥಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಡೆಸಲಾದ ಆಪರೇಷನ್ ಸಿಂಧೂರ್ ವೈಮಾನಿಕ ದಾಳಿಯನ್ನು ಸಶಸ್ತ್ರ ಪಡೆಗಳು ಈ ಬಾರಿ ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಿಕೊಂಡಿವೆ ಎಂದು ಹೇಳಿದ್ದಾರೆ.
“ನಾವು 22 ನಿಮಿಷಗಳಲ್ಲಿ ಒಂಬತ್ತು ಭಯೋತ್ಪಾದಕ ನೆಲೆಗಳನ್ನು ಧ್ವಂಸಗೊಳಿಸಿದ್ದೇವೆ. ಈ ಬಾರಿ ನಾವು ಎಲ್ಲವನ್ನೂ ಕ್ಯಾಮೆರಾದ ಮುಂದೆ ಮಾಡಿದ್ದೇವೆ, ಯಾರೂ ಪುರಾವೆ ಕೇಳದಂತೆ ನಾವು ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ,” ಎಂದು ಗುಜರಾತ್ನಲ್ಲಿ ಮೋದಿ ಹೇಳಿದ್ದಾರೆ.
ಈ ಹಿಂದೆ 2016 ರ ಸರ್ಜಿಕಲ್ ಸ್ಟ್ರೈಕ್ ಮತ್ತು 2019 ರ ಬಾಲಕೋಟ್ ವೈಮಾನಿಕ ದಾಳಿಗಳ ನಂತರ ಪ್ರತಿಪಕ್ಷಗಳು ಪುರಾವೆ ಕೇಳಿದ್ದವು. 26 ಅಮಾಯಕರ ಸಾವಿಗೆ ಕಾರಣವಾದ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತವು ಮೇ 7 ರಂದು ವೈಮಾನಿಕ ದಾಳಿ ನಡೆಸಿತು. ವಾಯುದಾಳಿಯ ನಂತರ ಭಾರತೀಯ ಪಡೆಗಳು ತಾವು ಗುರಿಯಾಗಿಸಿಕೊಂಡ ಸ್ಥಳಗಳ ದೃಶ್ಯಾವಳಿಗಳು ಮತ್ತು ಅದರ ಮುಂಚಿನ ಚಿತ್ರಗಳನ್ನು ಬಿಡುಗಡೆ ಮಾಡಿವೆ, ಹೀಗಾಗಿ ಯಾವುದೇ ಊಹಾಪೋಹಗಳಿಗೆ ಅವಕಾಶ ನೀಡದಂತೆ ಕಾರ್ಯಾಚರಣೆ ನಡೆಸಿವೆ.
ವಿಭಜನೆಯನ್ನು ಉಲ್ಲೇಖಿಸಿದ ಪ್ರಧಾನಿ, 1947 ರಲ್ಲಿ ಭಾರತ ಸ್ವತಂತ್ರವಾದಾಗ, ಸರಪಳಿಗಳನ್ನು ಕತ್ತರಿಸಬೇಕಾಗಿತ್ತು, ಆದರೆ ತೋಳುಗಳನ್ನು ಕತ್ತರಿಸಲಾಯಿತು ಮತ್ತು ದೇಶವನ್ನು ಮೂರು ಭಾಗಗಳಾಗಿ ವಿಂಗಡಿಸಲಾಯಿತು. ಆ ರಾತ್ರಿ, ಕಾಶ್ಮೀರದ ನೆಲದಲ್ಲಿ ಮೊದಲ ಭಯೋತ್ಪಾದಕ ದಾಳಿ ನಡೆಯಿತು ಮತ್ತು ಪಾಕಿಸ್ತಾನವು ಭಯೋತ್ಪಾದಕರ ಬಲದಿಂದ ಭಾರತದ ಒಂದು ಭಾಗವನ್ನು ವಶಪಡಿಸಿಕೊಂಡಿತು. ಆ ದಿನವೇ ಮುಜಾಹಿದ್ದೀನ್ಗಳನ್ನು ಕೊಂದು ಹಾಕಿದ್ದರೆ ಭಯೋತ್ಪಾದಕರು ಬೆಳೆಯುತ್ತಿರಲಿಲ್ಲ ಎಂದು ಪ್ರಧಾನಿ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಮೇಲೆ ಪರೋಕ್ಷ ವಾಗ್ದಾಳಿ ನಡೆಸಿದರು.
“, ಆ ರಾತ್ರಿ ರಕ್ತದ ರುಚಿ ನೋಡಿದರು ಮತ್ತು ಅವರ ದಾಳಿಯ ಸರಣಿ 75 ವರ್ಷಗಳಿಂದಲೂ ಮುಂದುವರೆದಿದೆ. ಪಹಲ್ಗಾಮ್ನಲ್ಲೂ ಇದರ ವಿಕೃತ ರೂಪ ಕಂಡುಬಂದಿದೆ. ನಾವು 75 ವರ್ಷಗಳ ಕಾಲ ಸಹಿಸಿಕೊಂಡಿದ್ದೇವೆ. ಮತ್ತು ಪ್ರತಿ ಬಾರಿ ಯುದ್ಧ ಪ್ರಾರಂಭವಾದಾಗ, ಮೂರು ಬಾರಿಯೂ, ಭಾರತದ ಸೇನೆ ಪಾಕಿಸ್ತಾನವನ್ನು ಸೋಲಿಸಿತು. ಪಾಕಿಸ್ತಾನವು ಭಾರತದೊಂದಿಗಿನ ಯುದ್ಧವನ್ನು ಗೆಲ್ಲಲು ಸಾಧ್ಯವಿಲ್ಲ ಎಂದು ಅರ್ಥಮಾಡಿಕೊಂಡಿತು, ಆದ್ದರಿಂದ ಅದು ಪ್ರಾಕ್ಸಿ ಯುದ್ಧವನ್ನು ಪ್ರಾರಂಭಿಸಿತು. ಮಿಲಿಟರಿ ತರಬೇತಿ ಪಡೆದ ಭಯೋತ್ಪಾದಕರನ್ನು ಭಾರತಕ್ಕೆ ಕಳುಹಿಸಿತು. ನಿರಾಯುಧ ಅಮಾಯಕರನ್ನು, ಬಸ್ನಲ್ಲಿ ಪ್ರಯಾಣಿಸುತ್ತಿರುವವರನ್ನು, ಹೋಟೆಲ್ನಲ್ಲಿ ಇರುವವರನ್ನು, ಪ್ರವಾಸಿಗರನ್ನು ಹೀಗೆ, ಅವರಿಗೆ ಅವಕಾಶ ಸಿಕ್ಕಲ್ಲೆಲ್ಲಾ ಅವರು ಕೊಲ್ಲುತ್ತಲೇ ಹೋದರು ಮತ್ತು ನಾವು ಸಹಿಸಿಕೊಳ್ಳುತ್ತಲೇ ಇದ್ದೆವು. ನಾವು ಇನ್ನೂ ಸಹಿಸಿಕೊಳ್ಳಬೇಕೇ?” ಎಂದು ಮೋದಿ ಪ್ರಶ್ನೆ ಮಾಡಿದ್ದಾರೆ.
“ನಮ್ಮ ನೆರೆಹೊರೆಯವರು ಶಾಂತಿಯಿಂದ ಬದುಕಬೇಕು ಮತ್ತು ನಮ್ಮನ್ನು ಶಾಂತಿಯಿಂದ ಬದುಕಲು ಬಿಡಬೇಕು ನಾವು ಬಯಸುತ್ತೇವೆ. ಆದರೆ ನಮಗೆ ಪದೇ ಪದೇ ಸವಾಲು ಹಾಕಿದರೆ ಧೈರ್ಯದಿಂದಲೇ ಉತ್ತರಿಸುತ್ತೇವೆ” ಎಂದಿದ್ದಾರೆ.
“ಹತ್ಯೆಗೊಳಗಾದ ಭಯೋತ್ಪಾದಕರಿಗೆ ಪಾಕಿಸ್ಥಾನದಲ್ಲಿ ಸರ್ಕಾರಿ ಗೌರವಗಳನ್ನು ನೀಡಲಾಯಿತು. ಅವರ ಶವಪೆಟ್ಟಿಗೆಯ ಮೇಲೆ ಪಾಕಿಸ್ಥಾನಿ ಧ್ವಜಗಳನ್ನು ಹೊದಿಸಲಾಯಿತು ಮತ್ತು ಅವರ ಸೈನಿಕರು ಭಯೋತ್ಪಾದಕರಿಗೆ ನಮನಗಳನ್ನು ಕೂಡ ಸಲ್ಲಿಸಿದ್ದಾರೆ. ಈ ಭಯೋತ್ಪಾದಕ ಚಟುವಟಿಕೆಗಳು ಕೇವಲ ಪ್ರಾಕ್ಸಿ ಯುದ್ಧವಲ್ಲ ಎಂಬುದನ್ನು ಇದು ಸಾಬೀತುಪಡಿಸುತ್ತದೆ. ಇದು ಅವರ ಕಡೆಯ ಉದ್ದೇಶಪೂರ್ವಕ ಯುದ್ಧ ತಂತ್ರವಾಗಿದೆ. ಅವರು ಯುದ್ಧದಲ್ಲಿ ತೊಡಗಿದರೆ ಪ್ರತಿಕ್ರಿಯೆ ನೀಡಲು ನಾವು ಕೂಡ ಸಿದ್ಧ” ಎಂದು ಮೋದಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.