ವಾಷಿಂಗ್ಟನ್: ಬಿಲಿಯನೇರ್ ಎಲಾನ್ ಮಸ್ಕ್ ಅವರು ಅಮೆರಿಕಾದ ಡಿಪಾರ್ಮೆಂಟ್ ಆಫ್ ಗವರ್ನ್ಮೆಂಟ್ ಎಫಿಶಿಯನ್ಸಿ (DOGE) ಮುಖ್ಯಸ್ಥರಾಗಿ ತಮ್ಮ ಅವಧಿ ಕೊನೆಗೊಂಡಿದೆ ಎಂದು ಘೋಷಿಸಿದ್ದಾರೆ, ಅಲ್ಲದೇ “ವ್ಯರ್ಥ ಖರ್ಚು ಕಡಿಮೆ ಮಾಡುವ ಅವಕಾಶ”ಕ್ಕಾಗಿ ಅಮೆರಿಕ ಅಧ್ಯಕ್ಷರಿಗೆ ಧನ್ಯವಾದ ಎಂದಿದ್ದಾರೆ. ಈ ಮೂಲಕ ಮಸ್ಕ್ ಮತ್ತು ಟ್ರಂಪ್ ಸರ್ಕಾರದ ನಡುವಣ ಸಂಬಂಧ ಕೊನೆಗೊಂಡಿದೆ.
ಸರ್ಕಾರದಲ್ಲಿ ಜೀವನ ವಿಧಾನವಾಗುವ ನಿಟ್ಟಿನಲ್ಲಿ DOGE ಮಿಷನ್ ಕಾಲಾನಂತರದಲ್ಲಿ ಬಲಗೊಳ್ಳುತ್ತದೆ ಎಂದು ಮಸ್ಕ್ ವಿಶ್ವಾಸ ವ್ಯಕಪಡಿಸಿದ್ದಾರೆ.
ಟ್ರಂಪ್ ಅವರ 2024 ರ ಚುನಾವಣಾ ಪ್ರಚಾರಕ್ಕೆ ಮಸ್ಕ್ ಭಾರೀ ದೊಡ್ಡ ಪ್ರಮಾಣದಲ್ಲಿ ದೇಣೀಗೆ ನೀಡಿದ್ದರು, ಮಾತ್ರವಲ್ಲದೇ ಚುನಾವಣಾ ಪೂರ್ವ ಪ್ರವಾಸಗಳಲ್ಲಿ ನಿರಂತರ ಕಾಣಿಸಿಕೊಂಡಿದ್ದಾರೆ. ನಂತರ ರಿಪಬ್ಲಿಕನ್ ಪ್ರಮಾಣವಚನ ಸಂದರ್ಭದಲ್ಲೂ ಟ್ರಂಪ್ ಅವರ ಪಕ್ಕದಲ್ಲಿ ಮಸ್ಕ್ ನಿಂತಿದ್ದರು. ಟ್ರಂಪ್ ತಮ್ಮ ವಿಜಯ ಭಾಷಣದಲ್ಲಿ ಮಸ್ಕ್ ಅವರನ್ನು ಹಾಡಿ ಹೊಗಳಿ, “ಸ್ಟಾರ್ ಹ್ಯಾಸ್ ಬಾರ್ನ್ ” ಎಂದು ಹೇಳಿದ್ದರು.
ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ಮಸ್ಕ್, ವಿಶೇಷ ಸರ್ಕಾರಿ ಉದ್ಯೋಗಿಯಾಗಿ ನನ್ನ ಅವಧಿ ಮುಗಿಯುತ್ತಿರುವುದರಿಂದ, ವ್ಯರ್ಥ ಖರ್ಚು ಕಡಿಮೆ ಮಾಡಲು ಅವಕಾಶ ನೀಡಿದ್ದಕ್ಕಾಗಿ ಅಧ್ಯಕ್ಷ ಟ್ರಂಪ್ಗೆ ಧನ್ಯವಾದ ಹೇಳಲು ಬಯಸುತ್ತೇನೆ. ಸರ್ಕಾರದಲ್ಲಿ DOGE ಮಿಷನ್ ಜೀವನ ವಿಧಾನವಾಗಿ ಕಾಲಾನಂತರದಲ್ಲಿ ಬಲಗೊಳ್ಳುತ್ತದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.