ನವದೆಹಲಿ: ಬಾಲಿವುಡ್ ನಟಿ ಮತ್ತು ಐಪಿಎಲ್ ತಂಡ ಪಂಜಾಬ್ ಕಿಂಗ್ಸ್ ಸಹ ಮಾಲಕಿ ಪ್ರೀತಿ ಜಿಂಟಾ ಭಾರತೀಯ ಸೇನೆಯ ಸೌತ್ ವೆಸ್ಟರ್ನ್ ಕಮಾಂಡ್ ಅಡಿಯಲ್ಲಿ ಬರುವ ಸೇನಾ ಪತ್ನಿಯರ ಕಲ್ಯಾಣ ಸಂಘಕ್ಕೆ (AWWA) 1 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ.
“ನಾನು ಭಾರತೀಯ ಸೇನೆಯ ನೈಋತ್ಯ ಕಮಾಂಡ್ನಲ್ಲಿರುವ ಸಭಾಂಗಣದ ಕಡೆಗೆ ಕಾರಿನಲ್ಲಿ ಹೋಗುತ್ತಿದ್ದಾಗ, ವಿವಿಧ ಶೌರ್ಯ ಪ್ರಶಸ್ತಿಗಳನ್ನು ಗೆದ್ದ ಸೇನಾ ಅಧಿಕಾರಿಗಳು ಮತ್ತು ಯೋಧರ ಪೋಸ್ಟರ್ಗಳನ್ನು ನೋಡಿದ್ದೆ. ಕೆಲವರು ನಮ್ಮ ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದರೆ, ಇತರರು ಯುದ್ಧಭೂಮಿಯಲ್ಲಿ ಗಾಯಗೊಂಡವರು. ಆ ಪೋಸ್ಟರ್ನಲ್ಲಿದ್ದ ಪ್ರತಿಯೊಬ್ಬ ಯೋಧ ಕೂಡ ಒಬ್ಬ ಪತಿ, ಒಬ್ಬ ಪುತ್ರ, ಒಬ್ಬ ಸಹೋದರ ಮತ್ತು ಒಬ್ಬ ತಂದೆ. ಅವರು ನಮ್ಮ ಸಶಸ್ತ್ರ ಪಡೆಗಳ ಭಾಗವಾಗವಾದವರು ಮತ್ತು ನಮ್ಮ ನಾಳೆಗಾಗಿ ತಮ್ಮ ಇಂದನ್ನು ತ್ಯಾಗ ಮಾಡಿದವರು” ಎಂದು ಪ್ರೀತಿ ಜಿಂಟಾ ಭಾವನಾತ್ಮಕ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದಾರೆ.
“ಜೀವನದ ಪ್ರತಿ ಕ್ಷಣ ಪತಿಯನ್ನು ಮಿಸ್ ಮಾಡಿಕೊಳ್ಳುವ ಯೋಧನ ಪತ್ನಿಯನ್ನು ನಾನು ನೋಡಿದೆ. ಅವನ ಮಕ್ಕಳನ್ನು ಭೇಟಿಯಾದೆ ಮತ್ತು ಅವರ ಮುಖದಲ್ಲಿನ ನಗುವನ್ನು ಕಂಡೆ. ಅವರ ಬಳಿ ಹೇಳಲು ದೂರುಗಳಿರಲಿಲ್ಲ ಮತ್ತು ಕಣ್ಣೀರೂ ಇರಲಿಲ್ಲ! ಕೇವಲ ಹೆಮ್ಮೆ, ಶಕ್ತಿ ಮತ್ತು ತ್ಯಾಗದ ಭಾವವಿತ್ತು. ಅವರಲ್ಲಿ ಧೈರ್ಯವಿತ್ತು, ಅದನ್ನು ವರ್ಣಿಸಲು ನನಗೆ ಪದಗಳಿಲ್ಲ. ಆ ವೀರ ನಾರಿಗಳು ಮತ್ತು ಅವರ ಕುಟುಂಬಗಳೊಂದಿಗೆ ವೇದಿಕೆಯನ್ನು ಹಂಚಿಕೊಳ್ಳುವುದು ನಿಜವಾಗಿಯೂ ನನಗೆ ಗೌರವವಾಗಿದೆ” ಎಂದಿದ್ದಾರೆ.
“ಅವರ ಸೇವೆ ಮತ್ತು ತ್ಯಾಗಕ್ಕೆ ಧನ್ಯವಾದ ಹೇಳಲು ನಾನು ಒಂದು ಸಣ್ಣ ಕೊಡುಗೆಯೊಂದಿಗೆ ಹೋಗಿದ್ದೆ. ಅವರನ್ನು ನಾವು ಮರೆತಿಲ್ಲ ಮತ್ತು ನಾವು ಅವರಿಗೆ ಶಾಶ್ವತವಾಗಿ ಋಣಿಯಾಗಿದ್ದೇವೆ ಎಂದು ತಿಳಿಸಲು ನಾನು ಬಯಸಿದ್ದೆ. ಕಾರ್ಯಕ್ರಮದ ನಂತರ ಮಂದಹಾಸ ಮತ್ತು ಹೃದಯದ ತುಂಬಾ ಕೃತಜ್ಞತೆ ತುಂಬಿಕೊಂಡು ಹೊರಟೆ. ಈ ವೀರರು ನಮ್ಮ ಗಡಿಗಳನ್ನು ಕಾಪಾಡುವವರೆಗೆ ನಮ್ಮ ದೇಶ ಸುರಕ್ಷಿತವಾದ ಕೈಯಲ್ಲಿರುತ್ತದೆ ಎಂದು ನನಗೆ ತಿಳಿದಿದೆ. ನಾನು ನನ್ನ ಪಾತ್ರವನ್ನು ನಿರ್ವಹಿಸಿದ್ದೇನೆ ಮತ್ತು ನಮ್ಮ ರಕ್ಷಣಾ ಪಡೆಗಳ ಕುಟುಂಬಗಳಿಗೆ ಧನ್ಯವಾದ ಹೇಳಲು ಒಂದು ಮಾರ್ಗವನ್ನು ಕಂಡುಕೊಳ್ಳುವ ಮೂಲಕ ನೀವು ಪ್ರತಿಯೊಬ್ಬರೂ ನಿಮ್ಮ ಪಾತ್ರವನ್ನು ನಿಭಾಯಿಸಬಹುದು ಎಂದು ನಾನು ಪ್ರಾಮಾಣಿಕವಾಗಿ ಭಾವಿಸುತ್ತೇನೆ” ಎಂದಿದ್ದಾರೆ.
As I drove towards the auditorium in the South Western Command of the Indian Army, I saw posters of army officers and jawans at regular intervals, that won various bravery awards. Some laid down their lives for our country while others came back with scars from the battlefield.… pic.twitter.com/NP4GaoL5Nt
— Preity G Zinta (@realpreityzinta) May 25, 2025
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.