ಬೈಂದೂರು : ಉತ್ತಮ ಸಮಾಜ ನಿರ್ಮಾಣ ಮಾಡಿ ಜನಪರ ಕಾರ್ಯಗಳನ್ನು ಮಾಡಲು ಹೋದಾಗ ವಿಘ್ನಗಳು ಜಾಸ್ತಿಯಾಗುತ್ತದೆ. ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ಕಾಯಕಗಳಿಗೆ ತಮ್ಮ ಸ್ವಾರ್ಥ ಸಾಧನೆಗಾಗಿ ಇನ್ನೊಬ್ಬರ ಕಾಲೆಳೆಯುವ ಪ್ರವೃತ್ತಿಯ ವ್ಯಕ್ತಿಗಳು ಇಲ್ಲಿಗೂ ಬರಬಹುದು ಎಚ್ಚರವಾಗಿರಿ.ಇದು ರಾಜ್ಯ ರೈತಮೋರ್ಚಾ ಉಪಾಧ್ಯಕ್ಷ ದೀಪಕ್ ಕುಮಾರ ಶೆಟ್ಟಿ ಹೇಳಿದ ಖಡಕ್ ಮಾತುಗಳು. ಅತ್ಯಂತ ಹಿಂದುಳಿದ ಗ್ರಾಮೀಣ ಪ್ರದೇಶದ ಅತ್ಯಾಡಿ ಸ.ಹಿ.ಪ್ರಾ ಶಾಲೆಯಲ್ಲಿ ನಡೆದ ಕಲಿಕೋತ್ಸವ ಹಾಗೂ ಸಾಂಕೇತಿಕ ದತ್ತು ಸ್ವೀಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮುಚ್ಚುವ ಸ್ಥಿತಿಯಲ್ಲಿರುವ ಸರಕಾರಿ ಶಾಲೆಗಳನ್ನು ಉಳಿಸಿಕೊಳ್ಳಲು ಪಕ್ಷಾತೀತ ಸಹಕಾರ ಅಗತ್ಯ. ಕನ್ನಡ ಶಾಲೆಗಳಲ್ಲಿ ಆಂಗ್ಲಭಾಷೆಯನ್ನು ಕಲಿಸಿ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ಜವಬ್ದಾರಿ ಶಿಕ್ಷಕರ ಮೇಲಿದೆ. ಇದಕ್ಕೆ ಊರಿನವರ ಸಹಕಾರ ಸಹಭಾಗಿತ್ವ ಅತ್ಯಗತ್ಯ. ಶಿಕ್ಷಣದ ಕುರಿತಾದ ಚಿಂತನೆ ಹೃದಯವಂತಿಕೆ ಇರುವ ದಾನಿಗಳು ಹಿಂದುಳಿದ ಇಂತಹ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿ ಪಡಿಸುವಲ್ಲಿ ಸಹಕರಿಸಬೇಕು ಎಂದರು.
ಎಲ್.ಕೆ.ಜಿಯಿಂದ 6ನೇತರಗತಿಯ ತನಕ ಇಂಗ್ಲೀಷ್, ಹಿಂದಿ (1 ರಿಂದ) ಸಾಮಾನ್ಯ ಜ್ಞಾನ (ಜಿ.ಕೆ)ವನ್ನು ಕನ್ನಡ ಮಾಧ್ಯಮಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಇಲ್ಲಿ ಭೋದಿಸಲಾಗುತ್ತಿದೆ. ಪೋಷಕರ ಸಹಭಾಗಿತ್ವದಲ್ಲಿ ನಾಲ್ಕು ಶಿಕ್ಷಕಿಯರನ್ನು ಈ ಶಾಲೆಗೆ ನೇಮಿಸಲಾಗಿದೆ. ಕಳೆದ ಶೈಕ್ಷಣಿಕ ವರ್ಷದಲ್ಲಿ ಖಾಸಗಿ ಶಾಲೆಗೆ ಹೋಗುತ್ತಿದ್ದ ಈ ಪರಿಸರದ 35 ಮಕ್ಕಳನ್ನು ಮರಳಿ ಮಾತೃಶಾಲೆಗೆ ಸೇರಿಸಲಾಗಿದ್ದು, ಮುಂದಿನ ಶೈಕ್ಷಣಿಕ ವರ್ಷದಲ್ಲಿ ಖಾಸಗಿ ಶಾಲಾ ವಾಹನಗಳು ಬರಲು ಅವಕಾಶ ಇಲ್ಲ, ಬದಲಾಗಿ ಅತ್ಯಾಡಿ ಶಾಲೆಯ ಆಟೋ ರಿಕ್ಷಾಗಳು ತಿರುಗಾಡಲಾರಂಭಗೊಳ್ಳುತ್ತದೆ. ಇದಕ್ಕೆ ಹೆಚ್ಚಾಗಿ ಶಿಕ್ಷಕರ ಶ್ರಮ ಬೇಕು ಎಂದರು. ಈ ಸಂದರ್ಭದಲ್ಲಿ ಕಲಿಕೆಯಲ್ಲಿ ಮುಂದಿರುವ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ವಿ.ಜೆ ಮಥಾಯಿ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಗೌರಿ ದೇವಾಡಿಗ ಕಲಿಕೋತ್ಸವ ಉದ್ಘಾಟಿಸಿದರು. ಜಿ.ಪಂ ಸದಸ್ಯೆ ಸುಪ್ರಿತಾ ಡಿ. ಶೆಟ್ಟಿ, ಮದ್ದೋಡಿ ಚರ್ಚನ ಧರ್ಮಗುರು ಸನ್ನಿ ಪಿ ಜಾನ್ ಬೈಂದೂರು, ಗ್ರಾ.ಪಂ ಅಧ್ಯಕ್ಷ ಜನಾರ್ದನ, ಎಸ್.ಡಿ.ಸಿ. ಅಧ್ಯಕ್ಷ ಹೆರಿಯ ಪೂಜಾರಿ, ಹಿರಿಯರಾದ ಕುಪ್ಪಯ್ಯ ಪೂಜಾರಿ ಉಪಸ್ಥಿತರಿದ್ದರು. ಮಂಜುನಾಥ ನಾಯಕ್ ಪ್ರಾಸ್ತಾವಿಸಿದರು. ಮುಖ್ಯಶಿಕ್ಷಕ ಪ್ರಭಾಕರ ಬಿಲ್ಲವ ಸ್ವಾಗತಿಸಿ, ಥಾಮಸ್ ಕುಟ್ಟಿ ವಂದಿಸಿದರು. ಸಿ.ಜೆ ಸಾಜು ನಿರೂಪಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.