ನ್ಯೂಯಾರ್ಕ್: ಉತ್ತಮ ಮತ್ತು ಸಮಾನತೆಯ ಜಗತ್ತನ್ನು ನಿರ್ಮಿಸಲು ಶ್ರಮಿಸುತ್ತಿರುವ ಅಸಾಧಾರಣ ನಾಯಕಿಯರನ್ನು ಗೌರವಿಸುವ ಟೈಮ್ ನಿಯತಕಾಲಿಕೆಯ 2025 ರ ‘ವರ್ಷದ ಮಹಿಳೆಯರು’ ಪಟ್ಟಿಯಲ್ಲಿ, ಭಾರತೀಯ ಜೀವಶಾಸ್ತ್ರಜ್ಞೆ ಮತ್ತು ವನ್ಯಜೀವಿ ಸಂರಕ್ಷಣಾ ತಜ್ಞರೊಬ್ಬರು ಸ್ಥಾನ ಪಡೆದಿದ್ದಾರೆ.
ಗುರುವಾರ ಬಿಡುಗಡೆಯಾದ ಟೈಮ್ನ 2025 ರ ವರ್ಷದ ಮಹಿಳೆಯರ ಪಟ್ಟಿಯಲ್ಲಿ 45 ವರ್ಷದ ಪೂರ್ಣಿಮಾ ದೇವಿ ಬರ್ಮನ್ ಕಾಣಿಸಿಕೊಂಡಿದ್ದಾರೆ. ಈಕೆ ಪಟ್ಟಿಯಲ್ಲಿ ಕಾಣಿಸಿಕೊಂಡಿರುವ ಏಕೈಕ ಭಾರತೀಯ ಮಹಿಳೆ. ಗ್ರೇಟರ್ ಅಡ್ಜಟಂಟ್ ಕೊಕ್ಕರೆಗಳ ಸಂರಕ್ಷಣೆಯಲ್ಲಿ ಇವರು ಜೀವನ ಮುಡುಪಾಗಿಟ್ಟಿದ್ದಾರೆ.
2007 ರಲ್ಲಿ ಅಸ್ಸಾಂನಲ್ಲಿ ಗ್ರೇಟರ್ ಅಡ್ಜಟಂಟ್ ಕೊಕ್ಕರೆಗಳ ಕುಟುಂಬಕ್ಕೆ ನೆಲೆಯಾಗಿದ್ದ ಮರವನ್ನು ಕಡಿಯಲಾಗುತ್ತಿದೆ ಎಂಬ ಒಂದು ಸುದ್ದಿ ಪೂರ್ಣಿಮಾ ಅವರ ಜೀವನದ ದಿಕ್ಕನ್ನೇ ಬದಲಾಯಿಸಿತು. ಮರ ಕಡಿಯುವುದನ್ನು ಆಕೆ ಪ್ರಶ್ನಿಸಿದಾಗ ಜನರು ಗುಂಪು ಆಕೆಯನ್ನು ಸುತ್ತುವರೆದು ಕೇಕೆ ಹಾಕಿತ್ತು. ಆಗ ಆಕೆಗೆ ತನ್ನ ಅವಳಿ ಪುಟಾಣಿ ಹೆಣ್ಣು ಮಕ್ಕಳ ಚಿಂತೆ ಆರಂಭವಾಯಿತು. ತನಗೆ ಅಪಾಯವಾದರೆ ತನ್ನ ಮಕ್ಕಳ ಗತಿಯೇನು ಎಂದು ಅಂದುಕೊಂಡಳು. ಆದರೆ ಈ ಕೊಕ್ಕರೆಗಳು ಕೂಡ ತನ್ನ ಮಕ್ಕಳಂತೆಯೇ ಎಂಬುದು ಆಕೆಗೆ ಅರಿವಾಯಿತು. ಅವಳ ರಕ್ಷಣೆ ಆಕೆಗೆ ಅನಿವಾರ್ಯ ಎನಿಸಿಯಿ. ಅಲ್ಲಿಂದ ಆಕೆ ಜೀವ ವೈವಿಧ್ಯಗಳ ಸಂರಕ್ಷಣೆಗೆ ಪಣತೊಟ್ಟು ನಿಂತಳು.
ಅಲ್ಲಿಂದ ಆಕೆ ಈ ಪ್ರದೇಶದಲ್ಲಿ ಅಂದಾಜು 450 ಗ್ರೇಟರ್ ಅಡ್ಜಟಂಟ್ ಕೊಕ್ಕರೆಗಳು ಉಳಿಸಿದ್ದಾಳೆ. 2023 ರಲ್ಲಿ ಬರ್ಮನ್ ಅವರ ಕಾರ್ಯದ ಫಲವಾಗಿ ಅಂತರರಾಷ್ಟ್ರೀಯ ಪ್ರಕೃತಿ ಸಂರಕ್ಷಣೆ ಒಕ್ಕೂಟವು ವರ್ಗೀಕರಣದ ಅಡಿಯಲ್ಲಿ ಕೊಕ್ಕರೆಯನ್ನು ಅಳಿವಿನಂಚಿನಲ್ಲಿರುವ ಸ್ಥಿತಿಯಿಂದ ಅಪಾಯದ ಸಮೀಪದಲ್ಲಿದೆ ಎಂದು ಬದಲಾಯಿಸಿತು. ಅಸ್ಸಾಂನಲ್ಲಿ ಅದರ ಜನಸಂಖ್ಯೆ 1,800 ಕ್ಕೂ ಹೆಚ್ಚಾಯಿತು.
ಬರ್ಮನ್ ಅವರ ಪ್ರಯತ್ನಗಳಿಗೆ ಬೆಂಬಲ ನೀಡುತ್ತಿರುವುದು ಅವರ “ಹರ್ಗಿಲಾ ಆರ್ಮಿ” ಎಂಬ ತಂಡದಲ್ಲಿ ಪಕ್ಷಿಗಳ ಗೂಡುಗಳನ್ನು ರಕ್ಷಿಸುವ ಮತ್ತು ಸುಮಾರು 5 ಅಡಿ ಎತ್ತರದ ಈ ಭವ್ಯವಾದ ಸ್ಕ್ಯಾವೆಂಜರ್ಗಳ ಸೌಂದರ್ಯದ ಬಗ್ಗೆ ಇತರರಿಗೆ ಶಿಕ್ಷಣ ನೀಡುವ ಸುಮಾರು 20,000 ಮಹಿಳೆಯರಿದ್ದಾರೆ.
ಈ ತಂಡ ಅಸ್ಸಾಂನಿಂದ ಹಿಡಿದು ಭಾರತದ ಇತರ ಭಾಗಗಳಿಗೆ ಮತ್ತು ಈಗ ಕಾಂಬೋಡಿಯಾ, ಫ್ರಾನ್ಸ್ಗೂ ವಿಸ್ತರಿಸಿ ಶಾಲೆಗಳು ವಿದ್ಯಾರ್ಥಿಗಳಿಗೆ ಅವರ ಕೆಲಸದ ಬಗ್ಗೆ ಕಲಿಸುತ್ತಿವೆ.
“ಬಾರ್ಮನ್ ಹೆಮ್ಮೆಯಿಂದ ತನ್ನ ಸಾಂಪ್ರದಾಯಿಕ ಉಡುಗೆ ಮತ್ತು ಶಾಲು ಧರಿಸುತ್ತಾರೆ, ಹರ್ಗಿಲಾ ಆರ್ಮಿಯ ಸದಸ್ಯರು ನೇಯ್ದ ಕೊಕ್ಕರೆಗಳ ಚಿತ್ರಗಳಿಂದ ಅಲಂಕರಿಸಲ್ಪಟ್ಟ ಬಟ್ಟೆ ಉಡುತ್ತಾರೆ, ಅಂತಹ ಬಟ್ಟೆಗಳನ್ನು ಮಾರಾಟ ಮಾಡುವ ಮೂಲಕ ಜೀವನ ಸಾಗಿಸಲು ಸಮರ್ಥರಾಗಿದ್ದಾರೆ” ಎಂದು ಟೈಮ್ ಹೇಳಿದೆ.
ಬಟ್ಟೆ ತಯಾರಿಸುವುದು, ಹಾಡುವುದು ಅಥವಾ ಹೊಸ ಮರಿಗಳಿಗೆ ಬೇಬಿ ಶವರ್ ಆಚರಿಸುವುದರಿಂದ ಹಿಡಿದು, ಈ ಪಕ್ಷಿ ಈಗ ನಮ್ಮ ಸಂಪ್ರದಾಯ ಮತ್ತು ಸಂಸ್ಕೃತಿಯ ಭಾಗವಾಗಿದೆ ಎಂದು ಬರ್ಮನ್ ಹೇಳುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.