ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಸ್ವತಃ ದುರ್ಗಾ ದೇವಿಗೆ ಅರ್ಪಿತವಾಗಿ ಬರೆದ ‘ಗರ್ಬಾ’ ಹಾಡನ್ನು ಸೋಮವಾರ ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ.
“ಇದು ನವರಾತ್ರಿಯ ಮಂಗಳಕರ ಸಮಯ ಮತ್ತು ಜನರು ದುರ್ಗೆಯ ಮೇಲಿನ ಭಕ್ತಿಯಿಂದ ಒಂದಾಗಿ ವಿವಿಧ ರೀತಿಯಲ್ಲಿ ಆಚರಿಸುತ್ತಿದ್ದಾರೆ. ಈ ಪೂಜ್ಯ ಮತ್ತು ಸಂತೋಷದ ಉತ್ಸಾಹದಲ್ಲಿ, ಆವತಿ ಕಲೆ, ಅವಳ ಶಕ್ತಿ ಮತ್ತು ಅನುಗ್ರಹಕ್ಕೆ ಗೌರವವಾಗಿ ನಾನು ಬರೆದ ಗರ್ಬಾ ಇಲ್ಲಿದೆ. ಅವರ ಆಶೀರ್ವಾದ ಯಾವಾಗಲೂ ನಮ್ಮ ಮೇಲೆ ಇರಲಿ”ಎಂದು ಎಕ್ಸ್ ಪೋಸ್ಟ್ನಲ್ಲಿ ಒಕ್ಕಣೆ ಬರೆದು ಹಾಡು ಹಂಚಿಕೊಂಡಿದ್ದಾರೆ.
ಗರ್ಬಾ ಗೀತೆಯನ್ನು ಸುಶ್ರಾವ್ಯವಾಗಿ ಪ್ರಸ್ತುತಪಡಿಸಿದ ಪ್ರತಿಭಾನ್ವಿತ ಗಾಯಕಿ ಪೂರ್ವ ಮಂತ್ರಿಗೆ ಅವರು ಧನ್ಯವಾದ ಹೇಳಿದ್ದಾರೆ.
ಗರ್ಬಾ ಒಂದು ಸಾಂಪ್ರದಾಯಿಕ ಗುಜರಾತಿ ನೃತ್ಯವಾಗಿದ್ದು ಇದನ್ನು ವಿಶೇಷವಾಗಿ ನವರಾತ್ರಿ ಉತ್ಸವದಲ್ಲಿ ಪ್ರದರ್ಶಿಸಲಾಗುತ್ತದೆ.
It is the auspicious time of Navratri and people are celebrating in different ways, united by their devotion to Maa Durga. In this spirit of reverence and joy, here is #AavatiKalay, a Garba I wrote as a tribute to Her power and grace. May Her blessings always remain upon us. pic.twitter.com/IcMydoXWoR
— Narendra Modi (@narendramodi) October 7, 2024
I thank Purva Mantri, a talented upcoming singer, for singing this Garba and presenting such a melodious rendition of it. #AavatiKalay
— Narendra Modi (@narendramodi) October 7, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.