ನವದೆಹಲಿ: ಟಿ20 ವಿಶ್ವಕಪ್ ಗೆದ್ದು ಬೀಗಿರುವ ಭಾರತೀಯ ಕ್ರಿಕೆಟ್ ತಂಡ ಇಂದು ಬೆಳಿಗ್ಗೆ ತವರಿಗೆ ವಾಪಾಸ್ ಆಗಿದ್ದು ಅದ್ಧೂರಿ ಸ್ವಾಗತವನ್ನು ಪಡೆದುಕೊಂಡಿದೆ. ತಂಡ ಆಗಮಿಸುತ್ತಿದ್ದಂತೆ ʼಇಂಡಿಯಾ ಇಂಡಿಯಾʼ ಘೋಷಣೆಗಳನ್ನು ಕೂಗಿ ಚಪ್ಪಾಳೆ ತಟ್ಟಿ ಜನರು ಅವರನ್ನು ಸ್ವಾಗತಿಸಿದರು. ಈ ವೇಳೆ ಆಟಗಾರರು ಕುಣಿದು ಕುಪ್ಪಳಿಸಿದರು.
ನವದೆಹಲಿಯ ಐಟಿಸಿ ಮೌರ್ಯ ಹೋಟೆಲ್ನಿಂದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲು ತಂಡ ತೆರಳಿದಾದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಕೇಕ್ ಕತ್ತರಿಸಿದರು. ಐಟಿಸಿ ಮೌರ್ಯ ಹೋಟೆಲ್ ಬಾಣಸಿಗ ತಂಡವು ಬಾರ್ಬಡೋಸ್ನಿಂದ ಜಯಶಾಲಿಯಾಗಿ ಹಿಂದಿರುಗಿದ ಟೀಮ್ ಇಂಡಿಯಾಕ್ಕಾಗಿ ವಿಶೇಷ ಕೇಕ್ ಅನ್ನು ಸಿದ್ಧಪಡಿಸಿತ್ತು.
T20 ವಿಶ್ವಕಪ್ 2024 ವಿಜೇತರು ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದರು. ಬಾರ್ಬಡೋಸ್ನಲ್ಲಿ ತೀವ್ರ ಚಂಡಮಾರುತ ಇದ್ದ ಕಾರಣ ನಾಲ್ಕು ದಿನಗಳ ವಿಳಂಬದ ಬಳಿಕ ಅವರು ತವರಿಗೆ ವಿಶೇಷ ವಿಮಾನದಲ್ಲಿ ಆಗಮಿಸಿದರು. ರೋಹಿತ್ ಶರ್ಮಾ ನೇತೃತ್ವದ ಮೆನ್ ಇನ್ ಬ್ಲೂ ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ತಕ್ಷಣ, ಅವರು ಐಟಿಸಿ ಮೌರ್ಯ ಹೋಟೆಲ್ಗೆ ತೆರಳಿ ವಿಶ್ರಾಂತಿ ಪಡೆದರು. ಅವರು ಇಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೂಡ ಭೇಟಿ ಮಾಡಲಿದ್ದಾರೆ.
17 ವರ್ಷಗಳ ನಂತರ ಟೀಮ್ ಇಂಡಿಯಾ T20 ವಿಶ್ವಕಪ್ ಟ್ರೋಫಿಯನ್ನು ಎತ್ತಿ ಹಿಡಿದಿದೆ.
https://x.com/ANI/status/1808723989239640496?ref_src=twsrc%5Etfw%7Ctwcamp%5Etweetembed%7Ctwterm%5E1808723989239640496%7Ctwgr%5E0f9a819be18f106310ea0f4cfb1ea06ec9748dc6%7Ctwcon%5Es1_&ref_url=https%3A%2F%2Fwww.freepressjournal.in%2Fsports%2Fvideo-india-skipper-rohit-sharma-coach-rahul-dravid-cut-cake-as-t20-wc-champions-leave-itc-maurya-hotel-to-meet-pm-narendra-modi-in-delhi
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.