ಬೈಂದೂರು: ಎಬಿವಿಪಿ ಹೋರಾಟಕ್ಕೆ ಮಣಿದು ಆಜ್ರಿಯಿಂದ ಕುಂದಾಪುರಕ್ಕೆ ಹೊಸ ಬಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಇದರಿಂದ ಸಾಕಷ್ಟು ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲಿದೆ. ಶಾಸಕ ಗುರುರಾಜ್ ಗಂಟಿಹೊಳೆ ಅವರು ಕೂಡ ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ ನೀಡಿದ್ದು, ಬಸ್ ಸಂಚಾರ ಆರಂಭಿಸಲೇ ಬೇಕು ಎಂದು ಡಿಪೋ ಮ್ಯಾನೇಜರ್, ಅಧಿಕಾರಿಗಳಿಗೆ ಆಗ್ರಹಿಸಿದ್ದರು. ಇದರ ಪರಿಣಾಮವಾಗಿ ಇಂದು ಬಸ್ ಸಂಚಾರ ಆರಂಭವಾಗಿದೆ.
ಗ್ರಾಮಾಂತರ ಪ್ರದೇಶಗಳಿಂದ ಕುಂದಾಪುರಕ್ಕೆ ವಿದ್ಯಾಭ್ಯಾಸಕ್ಕೆ ಬರುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಬಸ್ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ಆಗ್ರಹಿಸಿ ಕಳೆದ ಕೆಲ ದಿನಗಳ ಹಿಂದೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕುಂದಾಪುರ ವತಿಯಿಂದ ಶಾಸ್ತ್ರಿ ಸರ್ಕಲ್ ನಿಂದ ತಾಲೂಕು ಆಫೀಸಿನ ವರೆಗೆ ಬೃಹತ್ ಪ್ರತಿಭಟನಾ ಜಾಥಾ ನಡೆಸಲಾಗಿತ್ತು. ಅಲ್ಲದೇ ಕುಂದಾಪುರ ತಹಶೀಲ್ದಾರ್, ಕೆಎಸ್ಆರ್ಟಿಸಿ ಡಿಪೋ ಮ್ಯಾನೇಜರ್, ಕುಂದಾಪುರ ಮತ್ತು ಬೈಂದೂರು ವಿಧಾನ ಸಭಾ ಕ್ಷೇತ್ರದ ಶಾಸಕರುಗಳಿಗೆ ತಮ್ಮ ಬೇಡಿಕೆಯನ್ನೂ ಇಟ್ಟಿತ್ತು.
ಇದೀಗ ಎಬಿವಿಪಿ ಹೋರಾಟಕ್ಕೆ ಜಯ ದೊರೆತಿತ್ತು, ಮೊದಲ ಹಂತವಾಗಿ ಆಜ್ರಿಯಿಂದ ಕುಂದಾಪುರಕ್ಕೆ ಬಸ್ ವ್ಯವಸ್ಥೆಯನ್ನು ಆರಂಭಿಸಲಾಗಿದೆ. ಆಜ್ರಿಯಿಂದ ನೇರಳಕಟ್ಟೆ ತಲ್ಲೂರು ಮಾರ್ಗವಾಗಿ ಕುಂದಾಪುರಕ್ಕೆ ಬಸ್ ವ್ಯವಸ್ಥೆ ಮಾಡಲಾಗಿದ್ದು, ಕೇವಲ ವಿದ್ಯಾರ್ಥಿಗಳಿಗಲ್ಲದೆ ಸಾರ್ವಜನಿಕರಿಗೂ ಇದರಿಂದ ಸಹಾಯಕವಾಗಿದೆ.
ಈ ಮಾರ್ಗಕ್ಕೆ ಬಸ್ನ ಬೇಡಿಕೆ ಬಹಳ ಹಿಂದಿನಿಂದಲೂ ಇದ್ದರು ಕೂಡ ಅಧಿಕಾರಿಗಳು ಸಾರ್ವಜನಿಕರ ಕೂಗಿಗೆ ಬೆಲೆ ನೀಡಿರಲಿಲ್ಲ, ಆದರೆ ಈಗ ವಿದ್ಯಾರ್ಥಿಗಳ ಹೋರಾಟದ ಫಲವಾಗಿ ಸಮರ್ಪಕ ಬಸ್ ವ್ಯವಸ್ಥೆ ಮಾಡಲಾಗಿರುವುದು ಸಾರ್ವಜನಿಕರಿಗೂ ಸಂತಸ ತಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.