ಕೋಲ್ಕತ್ತಾ: ಕಲ್ಕತ್ತಾ ಹೈಕೋರ್ಟ್ನ ನ್ಯಾಯಾಧೀಶರಾಗಿ ಸೋಮವಾರ ನಿವೃತ್ತರಾದ ನ್ಯಾಯಮೂರ್ತಿ ಚಿತ್ತ ರಂಜನ್ ದಾಸ್ ಅವರು ತಾನು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಸದಸ್ಯ ಎಂದು ಹೇಳಿದ್ದಾರೆ.
ಹೈಕೋರ್ಟ್ನಲ್ಲಿ ನ್ಯಾಯಾಧೀಶರು ಮತ್ತು ಬಾರ್ನ ಸದಸ್ಯರ ಸಮ್ಮುಖದಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ನ್ಯಾಯಮೂರ್ತಿ ದಾಸ್, ತಾನು ಆರ್ಎಸ್ಎಸ್ ಹಿಂದಿರುಗಲು ಸಿದ್ಧ ಎಂದು ಹೇಳಿಕೊಂಡಿದ್ದಾರೆ.
ಅವರು ಯಾವುದೇ ಸಹಾಯಕ್ಕಾಗಿ ಸಂಘ ಕರೆದರೆ “ಸಂಸ್ಥೆಗೆ ಹಿಂತಿರುಗಲು ಸಿದ್ಧ” ಎಂದು ಹೇಳಿದ್ದಾರೆ
“ನಾನು ಸಂಘಕ್ಕೆ ತುಂಬಾ ಋಣಿಯಾಗಿದ್ದೇನೆ. ನಾನು ನನ್ನ ಬಾಲ್ಯದಿಂದ ಮತ್ತು ನನ್ನ ಯೌವನದುದ್ದಕ್ಕೂ ಸಂಘದಲ್ಲಿ ಇದ್ದೇನೆ” ಎಂದು ಅವರು ಹೇಳಿದರು.
“ನಾನು ಧೈರ್ಯಶಾಲಿ, ನೇರ ಮತ್ತು ಇತರರಿಗೆ ಸಮಾನವಾದ ದೃಷ್ಟಿಕೋನವನ್ನು ಹೊಂದುವ ನೀತಿಯನ್ನು ಕಲಿತಿದ್ದೇನೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ದೇಶಭಕ್ತಿಯ ಭಾವನೆ ಮತ್ತು ಕೆಲಸದ ಬದ್ಧತೆಯನ್ನು ಹೊಂದಿದ್ದೇನೆ” ಎಂದು ಅವರು ಹೇಳಿದ್ದಾರೆ.
ನ್ಯಾಯಾಧೀಶರಾಗಿ ಸೇವೆ ಸಲ್ಲಿಸುವ ಸಲುವಾಗಿ ಸುಮಾರು 37 ವರ್ಷಗಳ ಕಾಲ ಸಂಘದಿಂದ ದೂರ ಇದ್ದಿರುವುದಾಗಿ ಅವರು ಹೇಳಿದ್ದಾರೆ.
“ನಾನು ಸಂಘದ ಸದಸ್ಯತ್ವವನ್ನು ನನ್ನ ವೃತ್ತಿಜೀವನದ ಯಾವುದೇ ಪ್ರಗತಿಗೆ ಬಳಸಿಲ್ಲ ಏಕೆಂದರೆ ಅದು ಅದರ ತತ್ವಗಳಿಗೆ ವಿರುದ್ಧವಾಗಿದೆ” ಎಂದು ಅವರು ಹೇಳಿದರು.
” ಶ್ರೀಮಂತರಾಗಿರಲಿ ಅಥವಾ ಬಡವರಾಗಿರಲಿ, ಕಮ್ಯುನಿಸ್ಟ್ ಆಗಿರಲಿ ಅಥವಾ ಬಿಜೆಪಿ, ಕಾಂಗ್ರೆಸ್ ಅಥವಾ ಟಿಎಂಸಿ (ತೃಣಮೂಲ ಕಾಂಗ್ರೆಸ್) ಎಲ್ಲರನ್ನು ಸಮಾನವಾಗಿ ಪರಿಗಣಿಸಿದ್ದೇನೆ” ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.