ಬದಿಯಡ್ಕ : ಕೇರಳ ಸರಕಾರದ ಕೃಷಿಭವನ ಬದಿಯಡ್ಕದ ಸಹಾಯದೊಂದಿಗೆ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ತರಕಾರಿ ಗಾರ್ಡನನ್ನು ಸಬಲೀಕರಣಗೊಳಿಸುವ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು. ಬದಿಯಡ್ಕ ಕೃಷಿ ಆಫೀಸರ್ ಸಂತೋಷ್ ಕುಮಾರ್ ಚಾಲಿಲ್ ಅವರು ಮಕ್ಕಳಿಗೆ ತರಕಾರಿಗಳ ಬೀಜದಿಂದ ಮೊದಲ್ಗೊಂಡು ಪುನರಪಿ ಬೀಜವನ್ನು ದಾಸ್ತಾನೀಕರಿಸುವ ಸುದೀರ್ಘ ಕೃಷಿ ಪದ್ಧತಿಯನ್ನು ಸವಿಸ್ತಾರವಾಗಿ ತಿಳಿಸಿಕೊಟ್ಟರು.
ಕಾಸರಗೋಡು ಜಿಲ್ಲೆಯನ್ನು ಸಂಪೂರ್ಣ ಸಾವಯವ ಜಿಲ್ಲೆಯೆಂದು ಪರಿವತರ್ಿಸಲು ನಿಮ್ಮ ಇಂತಹ ಸಂಪೂರ್ಣ ಸಾವಯವ ಕೃಷಿ ಪದ್ಧತಿಯನ್ನು ಎಲ್ಲರೂ ಅನುಸರಿಸಲಿ. ಇದು ನಮ್ಮ ಆರೋಗ್ಯ ವರ್ಧನೆಗೆ ಸಹಕಾರಿ. ಮುಂದಿನ ಜನಾಂಗವಾದ ಮಕ್ಕಳು ಕೇವಲ ಪಠ್ಯಕ್ಕೆ, ಅಂಕ ಗಳಿಕೆಗೆ ಮಾತ್ರ ಸೀಮಿತವಾಗದೆ ತಮಗೆ ಬೇಕಾದ ಮೂಲಭೂತ ಆವಶ್ಯಕತೆಗಳನ್ನು ನಾವೇ ಶ್ರಮವಹಿಸಿ ಗಳಿಸಿಕೊಳ್ಳುತ್ತಿರುವುದು ಶ್ಲಾಘನೀಯ. ಇಂತಹ ಸಾವಯವ ಕೃಷಿಯು ದೇಶದೆಲ್ಲೆಡೆ ನಡೆಯಲಿ ಎಂದು ಅವರು ಹೇಳಿದರು. ಆಧುನಿಕ ಶಿಕ್ಷಣದ ಜೊತೆಗೆ ಜೀವನ ಶಿಕ್ಷಣವನ್ನು ನೀಡುವ ಈ ಯೋಜನೆಯನ್ನು ರೂಪಿಸುತ್ತಿರುವ ಶಾಲಾ ಮುಖ್ಯೋಪಾಧ್ಯಾಯರನ್ನು ಅಭಿನಂದಿಸಿದರು.
ಶಾಲೆಯ ಇಕೋಕ್ಲಬ್ ಮತ್ತು ನೇಚರ್ ಕ್ಲಬ್ಗಳು ತರಕಾರಿ ಕೃಷಿಯನ್ನು ಜಂಟಿಯಾಗಿ ಮಣ್ಣನ್ನು ಹದಗೊಳಿಸಿ ಬೀಜವನ್ನು ಬಿತ್ತಿ ಅದು ಮೊಳಕೆಯೊಡೆದು ಗಿಡವಾಗುವ ಬೆಳವಣಿಗೆಯ ಪ್ರತಿಯೊಂದು ಮಜಲನ್ನೂ ದಾಖಲೀಕರಿಸಿದರು. ಶ್ರೀಮತಿ ಕೃಷ್ಣವೇಣಿ ಹಾಗೂ ಶ್ರೀಮತಿ ಶಾರದಾ ಇವರ ಸಹಾಯದೊಂದಿಗೆ ಶಾಲೆಯ ಮಧ್ಯಾಹ್ನ ಭೋಜನಕ್ಕೆ ಪೂರಕವಾಗುವಂತಹ ತರಕಾರಿಗಳನ್ನು ಬೆಳೆಸುವಲ್ಲಿ ಉತ್ಸುಕತೆಯಿಂದ ಭಾಗವಹಿಸಿದರು.
ಮಧ್ಯಾಹ್ನದ ಊಟಕ್ಕೆ ಪೂರಕವಾದ ತರಕಾರಿ ಕೈತೋಟಗಳಿಗೆ ಕೇರಳ ಸರಕಾರದ ಕೃಷಿಭವನವು ಪ್ರೋತ್ಸಾಹವನ್ನು ನೀಡುತ್ತಿರುವುದು ಅಭಿನಂದನೀಯ. ಉತ್ಸಾಹೀ ಮಕ್ಕಳ ಜೊತೆಗೂಡಿ ಪ್ರತಿದಿನ ಬಿಡುವಿನ ಒಂದು ತಾಸನ್ನು ಶಾಲೆಗೊಂದು ತರಕಾರ ತೋಟವನ್ನು ನಿರ್ಮಿಸಿ ಮಕ್ಕಳ ಭವಿಷ್ಯಕ್ಕೊಂದು ದಾರಿದೀಪವಾಗುವಂತಹ ಈ ಯೋಜನೆಯು ಪ್ರತಿಯೊಂದು ಶಾಲೆಗಳಲ್ಲಿ ನಡೆಯಲಿ – ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ, ಶಾಲಾ ಮುಖ್ಯೋಪಾಧ್ಯಾಯರು .
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.