ಚೆನ್ನೈ: ತಮಿಳುನಾಡಿನ ಖ್ಯಾತ ನಟ ಮತ್ತು ರಾಜಕೀಯ ಪಕ್ಷ ದೇಸಿಯ ಮುರ್ಪೊಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಮುಖ್ಯಸ್ಥ ಕ್ಯಾಪ್ಟನ್ ವಿಜಯಕಾಂತ್ ಅವರು ನಿಧನರಾಗಿದ್ದು, ಅವರ ಅಪಾರ ಅಭಿಮಾನಿ ಬಳಗದಲ್ಲಿ ಶೋಕ ಉಂಟು ಮಾಡಿದೆ.
ವಿಜಯಕಾಂತ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ.
ಎಕ್ಸ್ ಪೋಸ್ಟ್ ಮಾಡಿರುವ ಮೋದಿ, ವಿಜಯಕಾಂತ್ ಅವರು ತಮಿಳು ಚಲನಚಿತ್ರ ಪ್ರಪಂಚದ ದಂತಕಥೆಯಾಗಿದ್ದರು ಮತ್ತು ಅವರ ವರ್ಚಸ್ವಿ ಅಭಿನಯವು ಲಕ್ಷಾಂತರ ಜನರ ಹೃದಯವನ್ನು ಗೆದ್ದಿದೆ ಎಂದು ಹೇಳಿದರು.
ರಾಜಕೀಯ ನಾಯಕರಾಗಿ,ಅವರು ಸಾರ್ವಜನಿಕ ಸೇವೆಗೆ ಆಳವಾಗಿ ಬದ್ಧರಾಗಿದ್ದರು, ದಕ್ಷಿಣ ರಾಜ್ಯದ ರಾಜಕೀಯ ಸನ್ನಿವೇದ ಮೇಲೆ ಅವರು ಶಾಶ್ವತವಾದ ಪ್ರಭಾವವನ್ನು ಬೀರಿದ್ದಾರೆ ಎಂದು ಮೋದಿ ಹೇಳಿದ್ದಾರೆ.
ಅಲ್ಲದೇ ಕೆಲವು ವರ್ಷಗಳಿಂದ ವಿಜಯಕಾಂತ್ ಅವರೊಂದಿಗೆ ಅತ್ಯುತ್ತಮ ಸಂಭಾಷಣೆಗಳನ್ನು ನಡೆಸುತ್ತಾ ಬಂದಿದ್ದೇನೆ ಮತ್ತು ಅವರ ನಿಧನವು ತುಂಬಲು ಅಸಾಧ್ಯವಾದ ನಷ್ಟ ಎಂದರು. ಅಲ್ಲದೇ ಡಿಎಂಡಿಕೆ ನಾಯಕನ ಕುಟುಂಬ, ಅಭಿಮಾನಿಗಳು ಮತ್ತು ಹಲವಾರು ಅನುಯಾಯಿಗಳಿಗೆ ಪ್ರಧಾನಿ ತಮ್ಮ ಸಂತಾಪಗಳನ್ನು ಸೂಚಿಸಿದ್ದಾರೆ.
Extremely saddened by the passing away of Thiru Vijayakanth Ji. A legend of the Tamil film world, his charismatic performances captured the hearts of millions. As a political leader, he was deeply committed to public service, leaving a lasting impact on Tamil Nadu’s political… pic.twitter.com/di0ZUfUVWo
— Narendra Modi (@narendramodi) December 28, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.