ಪಾಲ್ತಾಡಿ : ಖಾಸಗಿ ಮೊಬೈಲ್ ಟವರ್ಗೆ ನೋಟಿಸ್ ಜಾರಿಮಾಡಿ ತೆರಿಗೆ ವಿಧಿಸಲು ಅವಕಾಶವಿದೆ ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ್ ತಿಳಿಸಿದರು. ಅವರು ಸೋಮವಾರ ಸವಣೂರು ಗ್ರಾ.ಪಂ.ನ ಸಾಮಾನ್ಯ ಸಭೆಯಲ್ಲಿ ಬಾಗವಹಿಸಿ ಸದಸ್ಯರ ಪ್ರಶ್ನೆಗೆ ಈ ಉತ್ತರ ನೀಡಿದರು.ಪ್ರತೀ ವರ್ಷ ಪಂಚಾಯತ್ ವತಿಯಿಂದ ಪಂಚಾಯತ್ ಹಬ್ಬ ಆಚರಿಸುವಂತೆ ಆಡಳಿತ ಮಂಡಳಿಗೆ ಸಲಹೆ ನೀಡಿದರು.ಗ್ರಾ.ಪಂ,ವ್ಯಾಪ್ತಿಯಲ್ಲಿ ನಿವೇಶನ ರಹಿತರ ಹಾಗೂ ಶೌಚಾಲಯ ರಹಿತರರನ್ನು ಗುರುತಿಸಿ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು, ಆಶ್ರಯ ಯೋಜನೆಯಡಿಯ ಫಲಾನುಭವಿಗಳಿಗೆ ಅನುದಾನ ನೀಡಲು ಬಾಕಿಯಿದ್ದರೆ ಕೂಡಲೇ ಪಾವತಿಸುವಂತೆ ಸೂಚಿಸಿದರು.
ಗೋಮಾಳ ವನ್ನು ನಿವೇಶನ ರಹಿತರಿಗೆ ನೀಡಲು ಅವಕಾಶವಿದೆಯಾ ಎಂಬ ಸದಸ್ಯರ ಪ್ರಶ್ನೆಗೆ ಉತ್ತರಿಸಿದ ಶ್ರೀನಿವಾಸ್ ಪೂಜಾರಿ ವಾಸ್ತವವಾಗಿ ಗೋಮಾಳವನ್ನು ಯಾವುದೇ ಬೇರೆ ಉದ್ದೇಶಕ್ಕೆ ಬಳಸುವಂತಿಲ್ಲ. ಇದರ ಬದಲಾವಣೆ ಈ ಕುರಿತು ಜಿಲ್ಲಾಧಿಕಾರಿಗಳು ಕ್ರಮಕೈಗೊಳ್ಳಬೇಕು. ಬಹುಗ್ರಾಮ ಕುಡಿಯುವ ನೀರು ಯೋಜನೆಯ ಅನುಷ್ಠಾನ ಕುರಿತು ಜಿ.ಪಂ.ಕಾರ್ಯನಿರ್ವಹನಾಧಿಕಾರಿಗಳ ಜತೆ ಮಾತುಕತೆ ನಡೆಸುವಂತೆ ಆಡಳಿತ ಮಂಡಲಿಗೆ ಸಲಹೆ ನೀಡಿದರು. ಪಂಚಾಯತ್ ಸದಸ್ಯರು ಗ್ರಾಮದ ಅಭಿವೃದ್ದಿಗೆ ಶ್ರಮಿಸಬೇಕು. ಎಲ್ಲ ಸದಸ್ಯರಿಗೂ ಮಹತ್ತರವಾದ ಜವಾಬ್ದಾರಿ ಇದೆ ಎಂದರು. ಬಳಿಕ ಗ್ರಾ.ಪಂ.ಆಡಳಿತದ ಸಾಮಾನ್ಯ ಸಭೆ ಗ್ರಾ.ಪಂ.ಅಧ್ಯಕ್ಷೆ ಇಂದಿರಾ ಕಲ್ಲೂರಾಯ ಅಧ್ಯಕ್ಷತೆಯಲ್ಲಿ ನಡೆಯಿತು.
ಗ್ರಾ.ಪಂ.ವ್ಯಾಪ್ತಿಯ ರಸ್ತೆಯಲ್ಲಿ ಮರಳು ಸಾಗಾಟಕ್ಕೆ ಶುಲ್ಕ ಸಂಗ್ರಹಿಸುವ ಕುರಿತು ಅ.13 ರಂದು ಏಲಂ ನಡೆಸುವುದು,ರಸ್ತೆ ಬದಿಯಲ್ಲಿರುವ ಅಪಾಯಕಾರಿ ಮರಗಳನ್ನು ತೆರವುಗೊಳಿಸುವಂತೆ ,ಗ್ರಾ.ಪಂ.ವ್ಯಾಪ್ತಿ ಮಾಂತೂರು,ಕುಮಾರಮಂಗಲ,ಪಂಚೋಡಿಯಲ್ಲಿನ ಸಾಮಾಜಿಕ ಅರಣ್ಯವನ್ನು ಮರು ಸರ್ವೆ ಮಾಡುವಂತೆ ಅರಣ್ಯ ಇಲಾಖೆ ಬರೆದುಕೊಳ್ಳುವುದು,ಗ್ರಾ.ಪಂ.ಸದಸ್ಯರ ಗೌರವಧನ,ಸಭಾ ಭತ್ಯೆ ಹೆಚ್ಚಿಸುವಂತೆ ಸರಕಾರಕ್ಕೆ ಬರೆದುಕೊಳ್ಳುವುದು,ನೇತ್ರಾವತಿ ತಿರುವು ಯೋಜನೆ ,ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವಿರೇಂದ್ರ ಹೆಗ್ಗಡೆಯವರ ತೇಜೋವಧೆಗೆ ಯತ್ನಿಸುವ ಕುರಿತು ಸಭೆಯಲ್ಲಿ ಖಂಡನಾ ನಿರ್ಣಯ ಕೈಗೊಳ್ಳಲಾಯಿತು,ಸರಕಾರ ಗ್ರಾಮವಿಕಾಸ ಯೋಜನೆಗೆ ಸವಣೂರು ಗ್ರಾ.ಪಂ.ನ್ನು ಕೈಬಿಟ್ಟಿರುವ ಸರಕಾರ ಗ್ರಾ.ಪಂ.ಗೆ ತಾರತಮ್ಯ ಮಾಡುವುದು ಸರಿಯಲ್ಲ ಎಂದು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.
ಸಭೆಯಲ್ಲಿ ಪುತ್ತೂರು ತಾ.ಪಂ.ಉಪಾಧ್ಯಕ್ಷ ದಿನೇಶ್ ಮೆದು, ಗ್ರಾ.ಪಂ.ಉಪಾಧ್ಯಕ್ಷ ರವಿಕುಮಾರ್ , ಸದಸ್ಯರಾದ ಗಿರಿಶಂಕರ್ ಸುಲಾಯ, ಸುಧಾ ನಿಡ್ವಣ್ನಾಯ , ನಾಗೇಸ್ ಒ, ವೇದಾವತಿ ಅಂಜಯ , ಎಂ.ಎ.ರಫೀಕ್ ಚೆನ್ನು , ಮೀನಾಕ್ಷಿ ಬಂಬಿಲ , ವಸಂತಿ ಬಸ್ತಿ, ಅಬ್ದುಲ್ ರಝಾಕ್ , ಪ್ರಕಾಶ್ ಕುದ್ಮನಮಜಲು , ಸತೀಶ್ ಬಲ್ಯಾಯ , ಗಾಯತ್ರಿ ಬರೆಮೇಲು, ರಾಜೀವಿ ಶೆಟ್ಟಿ , ಜಯಂತಿ ಮಡಿವಾಳ, ಸತೀಶ್ ಅಂಗಡಿಮೂಲೆ, ದಿವಾಕರ ಬಂಗೇರ ಬಿಳಿಯಾಲ, ಜಯರಾಮ ರೈ ಬಿ.ಎನ್ , ದೇವಿಕಾ ಶ್ರೀಧರ್ ,ನಳೀನಾಕ್ಷಿ ಅಸಂತಡ್ಕ ಉಪಸ್ಥಿತರಿದ್ದರು. ಗ್ರಾ.ಪಂ.ಅಭಿವೃದ್ದಿ ಅಧಿಕಾರಿ ಸುಭಾಶ್ಚಂದ್ರ ಮಲ್ಲಣ್ನವರ್ ಸ್ವಾಗತಿಸಿ ,ಲೆಕ್ಕ ಸಹಾಯಕ ಎ.ಮನ್ಮಥ ವಂದಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.