ಬೆಳ್ತಂಗಡಿ : ಪುಟ್ಟ ಬಾಲಕನೋರ್ವ ರಕ್ತದ ಕ್ಯಾನ್ಸರ್ನಿಂದ ಬಳಲುತ್ತಿದ್ದು ಆತನ ಆರೋಗ್ಯ ಸುಧಾರಣೆಗೆ ದಾನಿಗಳ ನೆರವನ್ನು ಬಡದಂಪತಿ ಬಯಸುತ್ತಿದ್ದಾರೆ. ಬೆಳ್ತಂಗಡಿ ಕಸಬಾ ಗ್ರಾಮದ ರೆಂಕೆದಗುತ್ತು ರಘು ಮತ್ತು ಲಿಂಗಯ್ಯ ದಂಪತಿ ಪುತ್ರ ಸಚಿನ್ ಕ್ಯಾನ್ಸರ್ ರೋಗದಿಂದ ಬಳುತ್ತಿದ್ದಾನೆ.
ಈತ ಮುಗುಳಿ ಶಾಲೆಯಲಿ 2 ನೇ ತರಗತಿ ವಿದ್ಯಾರ್ಥಿ. ಮಗುವಿಗೆ ಎರಡೂವರೆ ವರ್ಷವಿರುವಾಗ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿತ್ತು. ಮಂಗಳೂರಿನ ಏ.ಜೆ. ಆಸ್ಪತ್ರೆಯಲ್ಲಿ ತಜ್ಞ ವೈದ್ಯರುಗಳು ಪರೀಕ್ಷೆ ನಡೆಸಿದಾಗ ಬಾಲಕನಿಗೆ ರಕ್ತದ ಕ್ಯಾನ್ಸರ್ ಇದೆ ಎಂದು ತಿಳಿಯಿತು. ಈತನ ತಂದೆ ರಿಕ್ಷಾ ಚಾಲಕನಾಗಿ ತಾಯಿ ಮನೆವಾರ್ತೆ ನೋಡಿಕೊಳ್ಳುತ್ತಿದ್ದಾರೆ.
ಈಗಾಲೇ ಲಕ್ಷಾಂತರ ರೂ.ಖರ್ಚು ಮಾಡಿರುವ ಕುಟುಂಬ ಪುತ್ರನ ಹೆಚ್ಚಿನ ಚಿಕಿತ್ಸೆಗಾಗಿ ರೂ. 4 ಲಕ್ಷ ಬೇಕಾಗಿದೆ ಎಂದು ಹೇಳುತ್ತಿದೆ. ಇಷ್ಟು ಹಣವನ್ನು ಹೊಂದಿಸಲಾರದ ಸ್ಥಿತಿಯಲ್ಲಿದ್ದಾರೆ ಈ ಬಡದಂಪತಿ. ಇದೀಗ ಬಾಲಕನ ಚಿಕಿತ್ಸೆಗೆ ದಾನಿಗಳು ದಾರಿತೋರಬೇಕಾಗಿದೆ. ಸಹೃದಯಿಗಳು ಸಚಿನ್ನ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಬೆಳ್ತಂಗಡಿ ಶಾಖೆಯಲ್ಲಿನ ಖಾತೆಗೆ ನೆರವು ನೀಡಬಹುದಾಗಿದೆ.
ಖಾತೆ ಸಂಖ್ಯೆ: 644144676046. ಐಎಫ್ಎಸ್ಸಿ ಕೋಡ್: ಎಸ್ಬಿಎಮ್ವೈ 00407410. ಸಂಪರ್ಕ ಸಂಖ್ಯೆ: 9945564791 / 8152947831
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.