ನವದೆಹಲಿ: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ)ಯು ಪಿಎಫ್ ಖಾತೆಗಳಿಗೆ ಬಡ್ಡಿಯನ್ನು ಜಮಾ ಮಾಡಲು ಪ್ರಾರಂಭಿಸಿದೆ ಎಂದು ಸರ್ಕಾರಿ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ. 2022-23 ರ ಹಣಕಾಸು ವರ್ಷದಲ್ಲಿ ಪಿಎಫ್ ಖಾತೆಯ ಹೂಡಿಕೆಯ ಮೇಲಿನ ಬಡ್ಡಿ ದರವು 8.15% ಆಗಿದೆ.
ಕೆಲವು ಬಳಕೆದಾರರು ಈಗಾಗಲೇ ತಮ್ಮ ಖಾತೆಗಳಲ್ಲಿ ತಮ್ಮ ಬಡ್ಡಿ ಪಾವತಿಗಳನ್ನು ಸ್ವೀಕರಿಸಿದ್ದಾರೆ, ಆದರೆ ಎಲ್ಲಾ ಖಾತೆಗಳಲ್ಲಿ ಮೊತ್ತವು ಶೀಘ್ರದಲ್ಲೇ ಜಮೆಯಾಗಲಿದೆ, ಇದಕ್ಕೆ ಸವಲ್ಪ ಸಮಯ ತೆಗೆದುಕೊಳ್ಳಬಹುದು ಎಂದು EPFO ಹೇಳಿದೆ.
“ಪ್ರಕ್ರಿಯೆಯು ಕಾರ್ಯರೂಪಕ್ಕೆ ಬರುವ ಹಂತದಲ್ಲಿದೆ ಮತ್ತು ಶೀಘ್ರದಲ್ಲೇ ಖಾತೆಯಲ್ಲಿ ಜಮೆಯಾಗಬಹುದು. ಬಡ್ಡಿಯನ್ನು ಪೂರ್ಣವಾಗಿ ಪಾವತಿಸಲಾಗುತ್ತದೆ. ಯಾವುದೇ ಬಡ್ಡಿಯ ನಷ್ಟವಾಗುವುದಿಲ್ಲ. ದಯವಿಟ್ಟು ತಾಳ್ಮೆಯಿಂದಿರಿ” ಎಂದು EPFO ಹೇಳಿದೆ.
ಈಗಾಗಲೇ 24 ಕೋಟಿಗೂ ಅಧಿಕ ಖಾತೆಗಳಿಗೆ ಬಡ್ಡಿ ಜಮೆಯಾಗಿದೆ ಎಂದು ಕೇಂದ್ರ ಕಾರ್ಮಿಕ ಸಚಿವ ಭೂಪೇಂದರ್ ಯಾದವ್ ಹೇಳಿದ್ದಾರೆ.
ಬಡ್ಡಿಯನ್ನು ಒಮ್ಮೆ ಕ್ರೆಡಿಟ್ ಮಾಡಿದ ನಂತರ, ಅದು ವ್ಯಕ್ತಿಯ ಪಿಎಫ್ ಖಾತೆಯಲ್ಲಿ ಪ್ರತಿಫಲಿಸುತ್ತದೆ. ಭವಿಷ್ಯ ನಿಧಿ ಖಾತೆಯ ಬ್ಯಾಲೆನ್ಸ್ ಅನ್ನು ಹಲವಾರು ರೀತಿಯಲ್ಲಿ ಪರಿಶೀಲಿಸಬಹುದು. ಟೆಕ್ಸ್ಟ್ ಮೆಸೇಜ್, ಮಿಸ್ಡ್ ಕಾಲ್, ಉಮಂಗ್ ಅಪ್ಲಿಕೇಶನ್ ಮತ್ತು EPFO ವೆಬ್ಸೈಟ್ ಮೂಲಕ ಪರಿಶೀಲಿಸಬಹುದು.
ಪಿಎಫ್ ಬಡ್ಡಿ ದರವನ್ನು ಪ್ರತಿ ವರ್ಷ ಇಪಿಎಫ್ಒದ ಕೇಂದ್ರೀಯ ಟ್ರಸ್ಟಿಗಳ ಮಂಡಳಿ (ಸಿಬಿಟಿ) ಹಣಕಾಸು ಸಚಿವಾಲಯದೊಂದಿಗೆ ಸಮಾಲೋಚಿಸಿ ನಿರ್ಧರಿಸುತ್ತದೆ. ಈ ವರ್ಷ, ಬಡ್ಡಿದರವನ್ನು ಜುಲೈನಲ್ಲಿ ಇಪಿಎಫ್ಒ ಘೋಷಿಸಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.