ಕಡಬ : ವಿದ್ಯಾ ಭಾರತೀ ಶಿಕ್ಷಣ ಸಂಸ್ಥಾನ ನವದೆಹಲಿ ಇದರ ಆಶ್ರಯದಲ್ಲಿ ಹೈದರಾಬಾದಿನಲ್ಲಿ ನಡೆದ ದಕ್ಷಿಣ ಭಾರತ ಮಟ್ಟದ ಕ್ರೀಡಾಕೂಟ ಖೇಲ್-ಕೂಟ್ ಬಾಲವರ್ಗದ ಬಾಲಕಿಯರ ಕಬಡ್ಡಿ ಪಂದ್ಯಾಟದಲ್ಲಿ ಆಲಂಕಾರು ಶ್ರೀ ಭಾರತಿ ಹಿರಿಯ ಪ್ರಾಥಮಿಕ ಶಾಲೆ ದ್ವೀತಿಯ ಸ್ಥಾನ ಪಡೆದಿದೆ. ವೀಜೆತ ತಂಡವನ್ನು ಆಲಂಕಾರು ಪೇಟೆಯಲ್ಲಿ ಅದ್ದೂರಿಯಾಗಿ ಸ್ವಾಗತಿಸಿ ಮೆರವಣಿಗೆ ನಡೆಸಲಾಯಿತು.
ಆಲಂಕಾರು ಗ್ರಾಮ ಪಂಚಾಯತ್, ಆಲಂಕಾರಿನ ಹಿಂದೂಜಾಗರಣ ವೇದಿಕೆ, ರಿಕ್ಷಾ-ಜೀಪು ಚಾಲಕ ಮಾಲಕರ ಸಂಘ, ವರ್ತಕರ ಸಂಘ ಇವುಗಳ ಸಂಯುಕ್ತ ಆಶ್ರಯದಲ್ಲಿ ವೀಜೆತ ಕ್ರೀಡಾಪಟುಗಳನ್ನು ಸ್ವಾಗತಿಸಲಾಯಿತು. ವೀಜೆತ ಕ್ರೀಡಾಪಟುಗಳಾದ ಸಿಂಚಾನ ಸುರುಳಿ, ರಾಚನಾ ಆಲಂಕಾರು, ಶರಣ್ಯ ಆಲಂಕಾರು, ರಕ್ಷಿತಾ ಕುಂತೂರು, ಮೋಕ್ಷಿತಾ ಪಜ್ಜಡ್ಕ, ದೀಪ್ತಾ ನೆಕ್ಕಿಲಾಡಿ, ಧನ್ಯಶ್ರೀ ಪಜ್ಜಡ್ಕ, ಅನುಜ್ಞಾನ ಆನೆಗುಂಡಿ, ಯಶಸ್ವಿ ಮನವಳಿಕೆ, ಹಾಗೂ ತಂಡದ ತರಬೇತುದಾರ ಚಂದ್ರಹಾಸ.ಕೆ.ಸಿ ಹಾಗೂ ತಂಡದ ವ್ಯವಸ್ಥಾಪಕಿ ಆಶಾ ಎಸ್.ರೈ ತಂಡದ ಸಹ ವ್ಯವಸ್ಥಾಪಕಿ ವಿನಯ ಲಕ್ಷ್ಮೀಶ ಶೆಟ್ಟಿ ಸುರುಳಿ ಇವರುಗಳಿಗೆ ಅಕ್ಷತೆಯನ್ನು ನೀಡಿ ಹೂಹಾರ ಹಾಕಿ ಆರತಿ ಬೆಳಗುವುದರ ಮೂಲಕ ಆಲಂಕಾರು ಪೇಟೆಯಲ್ಲಿ ಸ್ವಾಗತಿಸಲಾಯಿತು.
ಈ ಸಂದರ್ಭ ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಗಂಗಾಧರ ಗೌಡ ಕುಂಡಡ್ಕ, ಸದಸ್ಯರಾದ ಇಂದುಶೇಖರ ಶೆಟ್ಟಿ, ಕೊಂಡಾಡಿ ಈಶ್ವರ ಭಟ್, ಶ್ರೀಧರ ಬಲ್ಯಾಯ, ಶರವೂರು ದೇವಾಲಯದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಎಸ್.ಪೂವಪ್ಪ ನಾಯ್ಕ, ಹಿಂದೂ ಜಾಗರಣ ವೇದಿಕೆಯ ಆಲಂಕಾರು ಘಟಕ ಅಧ್ಯಕ್ಷ ಮಲ್ಲೇಶ್.ಎನ್, ಆಲಂಕಾರು ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ಜನಾರ್ದನಗೌಡಕಯ್ಯಪ್ಪೆ, ಆಲಂಕಾರು ಗ್ರಾ.ಪಂ ಉಪಾಧ್ಯಕ್ಷ ಸುಧಾಕರ ಪೂಜಾರಿ ಕಲ್ಲೇರಿ, ಶಾಲಾ ಮುಖ್ಯ ಮಾತಜಿ ಕನಕಲತಾ.ಎಸ್.ಎನ್. ಭಟ್, ಶಿಕ್ಷಕ ಯಧುಶ್ರೀ ಆನೆಗುಂಡಿ, ಶಿವಪ್ಪ ಗೌಡ ಕಜೆ, ಜಯಂತ ಪೂಜಾರಿ ನೆಕ್ಕಿಲಾಡಿ, ದಾಮೋದರ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.