ಅಸ್ಸಾಂನ ಹೈಲಕಂಡಿ ಜಿಲ್ಲೆಯಲ್ಲಿ ಅಪಹರಣ ಮತ್ತು ಸಾಮೂಹಿಕ ಅತ್ಯಾಚಾರದ ಕ್ರೂರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಐವರು ಮುಸ್ಲಿಂ ಯುವಕರು ಶಾಲೆಯ ಮುಂದೆ ಇಬ್ಬರು ಅಪ್ರಾಪ್ತ ಹಿಂದೂ ಬಾಲಕಿಯರನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಓರ್ವ ಬಾಲಕಿ ಸಾವನ್ನಪ್ಪಿದ್ದು, ಮತ್ತೊಬ್ಬ ಬಾಲಕಿ ಚಿಂತಾಜನಕವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಾಹಿತಿ ಪ್ರಕಾರ, ಇಬ್ಬರು ಸಂತ್ರಸ್ತ ಬಾಲಕಿಯರು ಮೋಹನ್ಪುರ ಅಭಯಚರಣ್ ಎಂಇ ಶಾಲೆಯ ವಿದ್ಯಾರ್ಥಿಗಳು. ಜುಲೈ 4 ರಂದು, ಮಂಗಳವಾರ ಅವರು ಶಾಲೆಯಿಂದ ಹಿಂತಿರುಗುತ್ತಿದ್ದಾಗ, ಜಬೀರ್ ಮತ್ತು ಜುಬೈರ್ ಮತ್ತು ಇತರರು ಅವರನ್ನು ರೋಸ್ಕಂಡಿ ಟೀ ಗಾರ್ಡನ್ಗೆ ಎಳೆದೊಯ್ದು ಅವರ ಮೇಲೆ ಕ್ರೂರವಾಗಿ ಸಾಮೂಹಿಕ ಅತ್ಯಾಚಾರ ಮಾಡಿ ಅಲ್ಲಿಂದ ಹೊರಟು ಹೋಗಿದ್ದಾರೆ. ಸ್ವಲ್ಪ ಸಮಯದ ನಂತರ ಸ್ಥಳೀಯರು ಬಾಲಕಿಯರು ಮಲಗಿರುವುದನ್ನು ನೋಡಿ ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಅವರ ಸ್ಥಿತಿ ಚಿಂತಾಜನಕವಾಗಿದ್ದರಿಂದ ಕರ್ತವ್ಯ ನಿರತ ವೈದ್ಯರು ಅವರನ್ನು ಸಿಲ್ಚಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಿದ್ದಾರೆ. ಬುಧವಾರ ರಾತ್ರಿ ಒಬ್ಬಾಕೆ ಮೃತಪಟ್ಟಿದ್ದಾರೆ. ಇನ್ನೊಬ್ಬಳ ಸ್ಥಿತಿ ಚಿಂತಾಜನಕವಾಗಿದೆ.
ದೂರಿನ ಆಧಾರದ ಮೇಲೆ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದು, ಜಬೀರ್ ಎಂಬ ಆರೋಪಿಯನ್ನು ಬಂಧಿಸಿದ್ದಾರೆ. ಇನ್ನು ಕೆಲವರು ತಲೆಮರೆಸಿಕೊಂಡಿದ್ದಾರೆ. ಹೈಲಕಂಡಿ ಪೊಲೀಸರು ತಮ್ಮ ಅಧಿಕೃತ ಫೇಸ್ಬುಕ್ ಪುಟದಲ್ಲಿ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಜುಬೈರ್ ಅಹಮದ್ ತಾಲೂಕದಾರ್ ಬಗ್ಗೆ ವಿವರಗಳನ್ನು ನೀಡಿದ್ದಾರೆ. ಇನ್ನು, ಆತ ತಲೆಮರೆಸಿಕೊಂಡಿದ್ದು, ಪೊಲೀಸರು ನೆಟಿಜನ್ಗಳಿಂದ ಮಾಹಿತಿ ದೊರೆತರೆ ಕೊಡುವಂತೆ ಕೇಳಿದ್ದಾರೆ.
ಒಟ್ಟು 5 ರಿಂದ 6 ಯುವಕರು ಇದ್ದರು ಎಂದು ಬಾಲಕಿಯರ ಕುಟುಂಬಸ್ಥರು ಆರೋಪಿಸಿದ್ದಾರೆ. ಆರೋಪಿಗಳ ವಿರುದ್ಧ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದ್ದಾರೆ.
ಆದರೆ ಈ ಪ್ರಕರಣ ನಡೆದು ಹಲವು ದಿನಗಳಾದರೂ ದೇಶವ್ಯಾಪಿಯಾಗಿ ಖಂಡನೆಗಳು, ಪ್ರತಿಭಟನೆಗಳು ನಡೆದಿಲ್ಲ ಎಂಬುದೇ ಆಶ್ಚರ್ಯ. ಬಹುಶಃ ಆರೋಪಿಗಳು ಮತ್ತು ಸಂತ್ರಸ್ತರ ಹೆಸರು ನೋಡಿ ಪ್ರತಿಭಟನೆ ನಡೆಸುವ ಕೆಟ್ಟ ಛಾಳಿಯಿಂದ ಇಂತಹ ಭೀಕರ ಘಟನೆ ಸಹಜ ಘಟನೆ ಎಂಬಂತೆ ಬಿಂಬಿತಗೊಂಡಿದೆ.
Sad news coming from #Hailakandi of #Assam#Thread
Yesterday, Muslim youths abducted and gangraped two minor Hindu girls(14 and 16) while they were returning from School. They were dragged into Roskandi garden, raped brutally. One(14) died. Her body is being cremeted right now.+ pic.twitter.com/kUiaxdNERq— Hindu Voice (@HinduVoice_in) July 5, 2023
ಮೂಲ : Hindu Post
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.