ಕಠ್ಮಂಡು: ನೇಪಾಳದ ಪ್ರಧಾನಿ ಪುಷ್ಪ ಕಮಲ್ ದಹಲ್ ಪ್ರಚಂಡ ಇಂದು ನೀಡಿರುವ ಹೇಳಿಕೆ ನೇಪಾಳದಲ್ಲಿ ದೊಡ್ಡ ಮಟ್ಟದಲ್ಲಿ ವಿವಾದ ಸೃಷ್ಟಿಸಿದೆ. ನೇಪಾಳದಲ್ಲಿ ನೆಲೆಸಿರುವ ಭಾರತೀಯ ಉದ್ಯಮಿಯೊಬ್ಬರು ತಮ್ಮನ್ನು ಪ್ರಧಾನಿಯನ್ನಾಗಿ ಮಾಡಲು ಒಮ್ಮೆ ಪ್ರಯತ್ನ ನಡೆಸಿದ್ದರು ಎಂಬ ಅವರ ಹೇಳಿಕೆ ಹಿಮಾಲಯ ರಾಷ್ಟ್ರದಲ್ಲಿ ಬಿರುಗಾಳಿ ಎಬ್ಬಿಸಿದ್ದು, ಪ್ರತಿಪಕ್ಷಗಳು ರಾಜೀನಾಮೆಗೆ ಒತ್ತಾಯಿಸಿವೆ.
ನೇಪಾಳದ ಟ್ರಕ್ಕಿಂಗ್ ಉದ್ಯಮಿ ಸರ್ದಾರ್ ಪ್ರೀತಮ್ ಸಿಂಗ್ ಅವರು ನೇಪಾಳ-ಭಾರತ ಸಂಬಂಧಗಳನ್ನು ಹೆಚ್ಚಿಸುವಲ್ಲಿ ವಿಶೇಷ ಮತ್ತು ಐತಿಹಾಸಿಕ ಪಾತ್ರವನ್ನು ವಹಿಸಿದ್ದಾರೆ ಎಂದು ಪ್ರಚಂಡ ಹೇಳಿದರು. ‘ರೋಡ್ಸ್ ಟು ದಿ ವ್ಯಾಲಿ: ದಿ ಲೆಗಸಿ ಆಫ್ ಸರ್ದಾರ್ ಪ್ರೀತಮ್ ಸಿಂಗ್ ಇನ್ ನೇಪಾಳ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಸೋಮವಾರ ಪ್ರಚಂಡ ಈ ಮಾತುಗಳನ್ನಾಡಿದರು.”ಸಿಂಗ್ ಒಮ್ಮೆ ನನ್ನನ್ನು ಪ್ರಧಾನಿ ಮಾಡಲು ಪ್ರಯತ್ನಗಳನ್ನು ಮಾಡಿದ್ದರು. ಅವರು ಹಲವಾರು ಬಾರಿ ದೆಹಲಿಗೆ ಪ್ರಯಾಣಿಸಿದರು ಮತ್ತು ನನ್ನನ್ನು ಪ್ರಧಾನಿ ಮಾಡಲು ಕಠ್ಮಂಡುವಿನಲ್ಲಿ ರಾಜಕೀಯ ನಾಯಕರೊಂದಿಗೆ ಅನೇಕ ಸುತ್ತಿನ ಮಾತುಕತೆ ನಡೆಸಿದರು” ಎಂದಿದ್ದಾರೆ. ಈ ಹೇಳಿಕೆಗಳು ಬಿರುಗಾಳಿ ಎಬ್ಬಿಸಿದ್ದು, ಟೀಕೆಗೆ ಗುರಿಯಾಗಿದೆ.
ನೇಪಾಳದ ಪಕ್ಷ-(ಯುನಿಫೈಡ್ ಮಾರ್ಕ್ಸಿಸ್ಟ್-ಲೆನಿನಿಸ್ಟ್) (CPN-UML) ಬುಧವಾರ ನಡೆದ ರಾಷ್ಟ್ರೀಯ ಅಸೆಂಬ್ಲಿ ಸಭೆಯನ್ನು ಅಡ್ಡಿಪಡಿಸಿ, ಪ್ರಧಾನಿಯವರ ರಾಜೀನಾಮೆಗೆ ಒತ್ತಾಯಿಸಿತು. ಸಭೆಯನ್ನು ಗುರುವಾರ ಮಧ್ಯಾಹ್ನ 1 ಗಂಟೆಗೆ ಮುಂದೂಡಲಾಗಿದೆ.
ಸಿಪಿಎನ್-ಯುಎಂಎಲ್ ಅಧ್ಯಕ್ಷ ಕೆಪಿ ಶರ್ಮಾ ಒಲಿ ಅವರು ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ, ನಮಗೆ ಪ್ರಧಾನಿಯಿಂದ ರಾಜೀನಾಮೆ ಬೇಕು, ಸ್ಪಷ್ಟೀಕರಣವಲ್ಲ ಎಂದಿದ್ದಾರೆ
ಪ್ರಧಾನಿ ರಾಜೀನಾಮೆಗೆ ಒತ್ತಾಯಿಸಿದ ಮಾಜಿ ಪ್ರಧಾನಿ ಒಲಿ, ಅವರ ಹೇಳಿಕೆಗಳು ರಾಷ್ಟ್ರೀಯ ಸ್ವಾತಂತ್ರ್ಯ, ಘನತೆ, ಸಂವಿಧಾನ ಮತ್ತು ಸಂಸತ್ತಿಗೆ ಹೊಡೆತ ನೀಡಿದೆ” ಎಂದು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.