ಬೆಳ್ತಂಗಡಿ : ಸರಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯ ಅಂತರ್ ಕಾಲೇಜು ಮಹಿಳಾ ವಾಲಿಬಾಲ್ ಪಂದ್ಯಾಟದಲ್ಲಿ ಎಸ್ಡಿಎಂ ಉಜಿರೆ ತಂಡವು ಉಡುಪಿ ಪೂರ್ಣಪ್ರಜ್ಞ ಕಾಲೇಜನ್ನು 3 ಸೆಟ್ಗಳಿಂದ ಮಣಿಸಿತು. ಉಜಿರೆ ಎಸ್ಡಿಎಂ ತಂಡವು ಪಿಪಿಸಿ ತಂಡವನ್ನು 25-12, 25-15, 25-15 ಅಂಕಗಳಿಂದ ಪರಾಭವಗೊಳಿಸಿ ಪ್ರಥಮ ಸ್ಥಾನ ಪಡೆದು ದಿ|ಕೊಲ್ಕೆಬೈಲ್ ಚಂದ್ರಶೇಖರ ಶೆಟ್ಟಿ ಸ್ಮಾರಕ ಫಲಕವನ್ನು ಸತತ 7 ನೇ ಬಾರಿಗೆ ತನ್ನದಾಗಿಸಿ ಕೊಂಡಿದೆ. ರನ್ನರ್ಅಪ್ ಸ್ಥಾನವನ್ನು ಉಡುಪಿ ಪೂರ್ಣಪ್ರಜ್ಞ ಕಾಲೇಜು ಪಡೆದಿದೆ.
ಮೊದಲ ಸೆಮಿಫೈನಲ್ನಲ್ಲಿ ಮಂಗಳೂರು ಆಗ್ನೇಸ್ ತಂಡವು ಉಡುಪಿ ಪಿಪಿಸಿಯನ್ನು ಎದುರಿಸಿತು. 25-12, 25-15, 25-12 ಅಂಕಗಳೊಂದಿಗೆ ಪಿಪಿಸಿ ತಂಡವು ಅಂತಿಮ ಪಂದ್ಯಕ್ಕೆ ಪ್ರವೇಶ ಪಡೆಯಿತು.ಎರಡನೇ ಸೆಮಿಫೈನಲ್ನಲ್ಲಿ ಮಂಗಳೂರು ವಿವಿ ಕ್ಯಾಂಪಸ್ ತಂಡವು ಎಸ್ಡಿಎಂ ಉಜಿರೆ ತಂಡದೆದುರು ಕಣಕ್ಕಿಳಿಯಿತು.25-10, 25-10, 25-7 ಅಂಕಗಳಿಂದ ಎಸ್ಡಿಎಂ ತಂಡವು ಅಂತಿಮ ಪಂದ್ಯಕ್ಕೆ ತೇರ್ಗಡೆಯಾಯಿತು.
ಪ್ರಥಮ ಸ್ಥಾನವನ್ನು ಎಸ್ಡಿಎಂ ಉಜಿರೆ, ದ್ವಿತೀಯ ಸ್ಥಾನವನ್ನು ಪಿಪಿಸಿ ಉಡುಪಿ, ತೃತೀಯ ಸ್ಥಾನವನ್ನು ಮಂಗಳೂರು ವಿವಿ ಕ್ಯಾಂಪಸ್ ಹಾಗೂ ಚತುರ್ಥ ಸ್ಥಾನವನ್ನು ಮಂಗಳೂರು ಆಗ್ನೇಸ್ ಕಾಲೇಜು ಪಡೆಯಿತು. ಪಂದ್ಯಾಟದಲ್ಲಿ ಉತ್ತಮ ಹೊಡೆತಗಾರ್ತಿಯಾಗಿ ಎಸ್ಡಿಎಂ ಉಜಿರೆ ತಂಡದ ಪ್ರತೀಕ್ಷಾ, ಉತ್ತಮ ಎಸೆತಗಾರ್ತಿಯಾಗಿ ಎಸ್ಡಿಎಂ ಉಜಿರೆ ತಂಡದ ಚೈತ್ರಾ, ಸರ್ವಾಂಗೀಣ ಆಟಗಾರ್ತಿಯಾಗಿ ಉಡುಪಿ ಪಿಪಿಸಿಯ ಕೃಪಾಶ್ರೀ ಆಯ್ಕೆಯಾದರು.
ಸಮಾರೋಪ ಸಮಾರಂಭದಲ್ಲಿ ಶಾಸಕ ಕೆ.ವಸಂತ ಬಂಗೇರ ಪ್ರಶಸ್ತಿ ವಿತರಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಪ್ರೊ.ಸಿ.ರಾಜಪ್ಪ ವಹಿಸಿದ್ದರು. ವೇದಿಕೆಯಲ್ಲಿ ಎಸ್ಡಿಎಂ ಕಾಲೇಜಿನ ಕ್ರೀಡಾ ಕಾರ್ಯದರ್ಶಿ ಬಾಲಭಾಸ್ಕರ್, ವಿವಿ ಕ್ರೀಡಾಕೂಟದ ಆಯ್ಕೆ ಸಮಿತಿಯ ಸದಸ್ಯ ಕೇಶವ ಮೂರ್ತಿ, ದೈಹಿಕ ಶಿಕ್ಷಣ ನಿರ್ದೇಶಕ ಜಯರಾಮ್, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ರಾಮಚಂದ್ರಗೌಡ, ಜಿ.ಪಂ.ಸದಸ್ಯ ಶೈಲೇಶ್ ಕುಮಾರ್, ಹಿರಿಯ ವಿದ್ಯಾರ್ಥಿ ಸಮಿತಿ ಅಧ್ಯಕ್ಷ ಕೇಶವ ಪಿ. ಉಪಸ್ಥಿತರಿದ್ದರು. ಉಪನ್ಯಾಸಕ ಶರತ್ ಕುಮಾರ್.ಕೆ.ಟಿ. ಸ್ವಾಗತಿಸಿದರು. ಉಪನ್ಯಾಸಕ ಆಂಟನಿ ಟಿ.ಪಿ. ವಿಜೇತರ ಪಟ್ಟಿಯನ್ನು ವಾಚಿಸಿದರು. ಉಪನ್ಯಾಸಕ ಸುಬ್ರಹ್ಮಣ್ಯ ಕುಮಾರ್ ಕಾರ್ಯಕ್ರಮ ನಿರ್ವಹಿಸಿ ದೈಹಿಕ ಶಿಕ್ಷಣ ನಿರ್ದೇಶಕ ಶೈಲೇಶ್ ಕುಮಾರ್ ವಂದಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.