ಬೆಳ್ತಂಗಡಿ : ಎತ್ತಿನಹೊಳೆ ಯೋಜನೆಯನ್ನು ವಿರೋಧಿಸಿ ಉಜಿರೆ ಎಸ್ಡಿಎಂ ಕಾಲೇಜಿನ ವಿದ್ಯಾರ್ಥಿಗಳು ಬೆಳ್ತಂಗಡಿ ತಹಶೀಲ್ದಾರರಿಗೆ ಶನಿವಾರ ಮನವಿ ನೀಡಿದರು.
ಇತ್ತೀಚಿನ ದಿನಗಳಲ್ಲಿ ಕರಾವಳಿ ಜಿಲ್ಲೆಯಲ್ಲಿ ಕುಡಿಯುವ ನೀರಿನ ಅಭಾವ ಕಂಡುಬರುತ್ತಿದೆ.
ಕೃಷಿ ಚಟುವಟಿಕೆಯೂ ಈ ಸಂದರ್ಭ ಕುಂಠಿತಗೊಳ್ಳುತ್ತಿದೆ. ಜಿಲ್ಲೆಯ ಜೀವನದಿ, ಉಪನದಿಗಳನ್ನು ಉತ್ತರಾಭಿಮುಖವಾಗಿ ನದಿಪಾತ್ರವನ್ನು ತಿರುಗಿಸಲು ಮುಂದಾಗಿರುವುದು ಸರಿಯಲ್ಲ. ಜಿಲ್ಲೆಯ ಮತ್ಸ್ಯೋದ್ಯಮ ಕುಂಠಿತಗೊಂಡು ವ್ಯಾಪಕ ನಿರುದ್ಯೋಗ ಸೃಷ್ಟಿಯಾಗಬಹುದು, ಮಾತ್ರವಲ್ಲದೆ ಜನರ ಆಹಾರದ ಹಕ್ಕನ್ನು ಕಸಿದುಕೊಂಡಂತಾಗುತ್ತದೆ. ಎತ್ತಿನಹೊಳೆ ಯೋಜನೆಯ ಬಗ್ಗೆ ಜಿಲ್ಲೆಯಲ್ಲಿ ಜನತೆಗೆ ಯಾವುದೇ ಮಾಹಿತಿಯನ್ನು ನೀಡದೆ ಗುಪ್ತವಾಗಿ ಜಾರಿಗೊಳಿಸುತ್ತಿರುವುದಾದರು ಯಾಕೆ? ಯೋಜನೆಯ ಹೆಸರಿನಲ್ಲಿ ವ್ಯಾಪಕವಾಗಿ ಅರಣ್ಯ ನಾಶವಾಗುತ್ತಿದೆ. ಇದರಿಂದಾಗಿ ಪ್ರಾಣಿ, ಪಕ್ಷಿಗಳು ನಾಡು ಪ್ರವೇಶಿಸಿ ಮುಂದೆ ಅನಾಹುತಗಳ ಸರಮಾಲೆಯೇ ಎದುರಾಗಬಹುದು.
ತೀರಾ ಅವೈಜ್ಞಾನಿಕವಾಗಿ ಜಾರಿಗೊಳಿಸಲು ಮುಂದಾಗಿರುವ ಎತ್ತಿನಹೊಳೆಯನ್ನು ಸರಕಾರ ಮುಂದುವರಿಸುವುದಕ್ಕೆ ನಮ್ಮ ವಿರೋಧವಿದ್ದು, ಸರ್ಕಾರ ತನ್ನ ನಡೆಯಬಗ್ಗೆ ಪುನರ್ ವಿಮರ್ಶೆ ನಡೆಸಿ ಈ ಯೋಜನೆಯನ್ನು ಕೈಬಿಡಬೇಕು. ನಮ್ಮ ಜಿಲ್ಲೆಯಲ್ಲಿ ಕೃತಕವಾಗಿ ಬರಗಾಲ ಸೃಷ್ಠಿಸುವ ಈ ಯೋಜನೆಯ ವಿರುದ್ಧ ವಿದ್ಯಾರ್ಥಿ ಸಮೂಹ ಮನೆ ಮನೆ ಪ್ರಚಾರ ನಡೆಸಿ ಜನ ಸಾಮಾನ್ಯರಲ್ಲಿ ಜಾಗೃತಿಗೊಳಿಸಲು ಮುಂದಾಗಿದೆ ಎಂದು ಮನವಿಯಲ್ಲಿ ತೀಳಿಸಲಾಗಿದೆ. ಉಜಿರೆ ಎಸ್ಡಿಎಂನ ವಿದ್ಯಾರ್ಥಿಗಳು ಮನವಿಯನ್ನು ತಹಶೀಲ್ದಾರ ಪ್ರಸನ್ನ ಕುಮಾರ್ ಮೂಲಕ ಮುಖ್ಯಮಂತ್ರಿಗಳಿಗೆ ನೀಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.