ನವದೆಹಲಿ: ಸುಡಾನ್ನಲ್ಲಿ ಸಿಲುಕಿರುವ ಭಾರತೀಯರ ಮೊದಲ ಗುಂಪು ಸಂಘರ್ಷ ಪೀಡಿತ ರಾಷ್ಟ್ರವನ್ನು ತೊರೆದು ಭಾರತೀಯ ನೌಕಾಪಡೆಯ ಯುದ್ಧನೌಕೆಯಲ್ಲಿ ಸೌದಿ ಅರೇಬಿಯಾದ ಜೆಡ್ಡಾ ಹೊರಟಿದೆ ಎಂದು ವಿದೇಶಾಂಗ ಸಚಿವಾಲಯ ಇಂದು ತಿಳಿಸಿದೆ.
ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಅವರು ಐಎನ್ಎಸ್ ಸುಮೇಧಾ ಹಡಗಿನಲ್ಲಿರುವ ಭಾರತೀಯರ ಫೋಟೋಗಳನ್ನು ಟ್ವೀಟ್ ಮಾಡಿದ್ದಾರೆ. ಕೆಲವರು ತಮ್ಮ ಸ್ಥಳಾಂತರಕ್ಕೆ ವ್ಯವಸ್ಥೆ ಮಾಡಿದ್ದಕ್ಕಾಗಿ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿ ರಾಷ್ಟ್ರಧ್ವಜವನ್ನು ಬೀಸಿದ್ದಾರೆ.
“ಆಪರೇಷನ್ ಕಾವೇರಿ ಅಡಿಯಲ್ಲಿ ಸಿಕ್ಕಿಬಿದ್ದ ಭಾರತೀಯರ ಮೊದಲ ಬ್ಯಾಚ್ ಸುಡಾನ್ನಿಂದ ಹೊರಟಿದೆ. 278 ಜನರೊಂದಿಗೆ ಐಎನ್ಎಸ್ ಸುಮೇಧಾ ಜೆಡ್ಡಾಕ್ಕೆ ಪೋರ್ಟ್ ಸುಡಾನ್ನಿಂದ ಹೊರಡುತ್ತದೆ” ಎಂದು ಬಾಗ್ಚಿ ಟ್ವೀಟ್ ಮಾಡಿದ್ದಾರೆ. ಸೇನೆ ಮತ್ತು ಅರೆಸೇನಾ ಗುಂಪಿನ ನಡುವೆ ಭೀಕರ ಕಾಳಗ ಪೀಡಿದ ಸುಡಾನ್ನಿಂದ ಸ್ಥಳಾಂತರಿಸಿದ ಭಾರತೀಯರ ಗುಂಪಿನಲ್ಲಿ ಮಕ್ಕಳೂ ಸೇರಿದ್ದಾರೆ.
ಭಾರತವು ಆಪರೇಷನ್ ಕಾವೇರಿಯ ಭಾಗವಾಗಿ ಎರಡು ಸಾರಿಗೆ ವಿಮಾನಗಳನ್ನು ಜೆಡ್ಡಾದಲ್ಲಿ ಮತ್ತು INS ಸುಮೇಧಾವನ್ನು ಪೋರ್ಟ್ ಸುಡಾನ್ನಲ್ಲಿ ಇರಿಸಿದೆ. ಜೆಡ್ಡಾ ತಲುಪಿದ ನಂತರ ಭಾರತೀಯರನ್ನು ಭಾರತಕ್ಕೆ ಕರೆತರಲಾಗುತ್ತದೆ.
First batch of stranded Indians leave Sudan under #OperationKaveri.
INS Sumedha with 278 people onboard departs Port Sudan for Jeddah. pic.twitter.com/4hPrPPsi1I
— Arindam Bagchi (@MEAIndia) April 25, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.