ಚೆನ್ನೈ: ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಅವರು ಇಂದು `ಡಿಎಂಕೆ ಫೈಲ್ಸ್` ಬಿಡುಗಡೆ ಮಾಡಿದ್ದು, ಡಿಎಂಕೆ ಉನ್ನತ ಸಚಿವರು ಮತ್ತು ಸಿಎಂ ಎಂಕೆ ಸ್ಟಾಲಿನ್ ಅವರ ಕುಟುಂಬ ಸದಸ್ಯರು ಲೆಕ್ಕಕ್ಕೆ ಬಾರದಷ್ಟು ಆಸ್ತಿ ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ.
ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಅಣ್ಣಾಮಲೈ, “ನಾವು ಇಂದು ಡಿಎಂಕೆ ಫೈಲ್ಸ್ 1 ಅನ್ನು ಬಿಡುಗಡೆ ಮಾಡಿದ್ದೇವೆ. ಇದು ವರ್ಷವಿಡೀ ಸರಣಿಯಾಗಲಿದೆ. ನಾವು ಅವರು ಹೊಂದಿರುವ ನೇರ ಆಸ್ತಿ, ಕಂಪನಿಯಲ್ಲಿ ಅವರ ಷೇರುಗಳು ಮತ್ತು ಆಸ್ತಿಗಳ ಮೌಲ್ಯಮಾಪನವನ್ನು ಮಾತ್ರ ಬಹಿರಂಗಪಡಿಸಿದ್ದೇವೆ. ಅದನ್ನು ಮೀರಿ ಹೋಗಿಲ್ಲ” ಎಂದಿದ್ದಾರೆ.
ಡಿಎಂಕೆ ವಿಶ್ವಾದ್ಯಂತ ಅತಿ ದೊಡ್ಡ ಹಣ ವರ್ಗಾವಣೆ ವ್ಯವಹಾರದ ಭಾಗವಾಗುತ್ತಿರುವುದು ಹೇಗೆ ಎಂಬುದು ಅತ್ಯಂತ ಕಾಳಜಿಯ ಪ್ರಶ್ನೆಯಾಗಿದೆ.ನಾವು ಪ್ರಧಾನಿ ಮೋದಿಯವರ ನಿಜವಾದ ದೃಷ್ಟಿಕೋನವನ್ನು ಪ್ರತಿಬಿಂಬಿಸಲು ಬಯಸುತ್ತೇವೆ, ನಾವು ಸಾರ್ವಜನಿಕರ ಸಮಸ್ಯೆ ಬಗೆಹರಿಸುವ ಪಕ್ಷವಾಗಿದ್ದೇವೆ ಎಂದಿದ್ದಾರೆ.
ಜೂನ್ ಮೊದಲ ವಾರದಿಂದ ಡಿಎಂಕೆ ಹಗರಣಗಳನ್ನು ಬಯಲಿಗೆಳೆಯಲು ನಾವು ಪಾದಯಾತ್ರೆ ಆರಂಭಿಸುತ್ತಿದ್ದೇವೆ, ನಮ್ಮ ಪಕ್ಷದ ನಾಯಕರು ತಮಿಳುನಾಡಿನಾದ್ಯಂತ ಸಂಚರಿಸಲಿದ್ದಾರೆ ಎಂದು ಅಣ್ಣಾಮಲೈ ಹೇಳಿದ್ದಾರೆ.
“ಡಿಎಂಕೆ ಹಗರಣಗಳು ಮಾತ್ರವಲ್ಲ, ಎಲ್ಲಾ ಪಕ್ಷಗಳ ಹಗರಣಗಳನ್ನು ನಾವು ವಿರೋಧಿಸುತ್ತೇವೆ. ನಾನು ಎಲ್ಲವನ್ನೂ ತಮಿಳುನಾಡು ಜನರ ಮುಂದೆ ಇಡುತ್ತೇನೆ. ತಮಿಳುನಾಡಿನ ಜನರು ಯಾರಿಗೆ ಮತ ಹಾಕುತ್ತಾರೆ ಎಂಬುದನ್ನು ನೋಡೋಣ. ಇದು ಭ್ರಷ್ಟಾಚಾರದ ವಿರುದ್ಧದ ಹೋರಾಟವೇ ಹೊರತು ಒಂದು ಪಕ್ಷದ ವಿರುದ್ಧ ಅಲ್ಲ, ನಾನು ಇಲ್ಲಿಗೆ ನಿಲ್ಲುವುದಿಲ್ಲ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.