ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ವೈದ್ಯಕೀಯ ಮತ್ತು ಆರೋಗ್ಯ ವೆಚ್ಚವನ್ನು ತಾವೇ ಭರಿಸುತ್ತಿದ್ದಾರೆ ಮತ್ತು ಅವುಗಳನ್ನು ಭಾರತ ಸರ್ಕಾರ ಪಾವತಿಸುತ್ತಿಲ್ಲ ಎಂದು ಆರ್ಟಿಐ ವಿಚಾರಣೆಯಿಂದ ತಿಳಿದುಬಂದಿದೆ.
ಪುಣೆ ಮೂಲದ ಆರ್ಟಿಐ ಕಾರ್ಯಕರ್ತ ಪ್ರಫುಲ್ ಸರ್ದಾ ಅವರು 2014 ರಿಂದ ಇಲ್ಲಿಯವರೆಗೆ ಭಾರತ ಮತ್ತು ವಿದೇಶಗಳಲ್ಲಿ ಪಿಎಂ ಮೋದಿ ಅವರ ವೈದ್ಯಕೀಯ ಚಿಕಿತ್ಸೆ, ಆರೋಗ್ಯ ತಪಾಸಣೆ ಮತ್ತು ಇತರ ವೈದ್ಯಕೀಯ ಪರೀಕ್ಷೆಗಳಿಗೆ ಪ್ರಧಾನಿ ಕಚೇರಿ ಖರ್ಚು ಮಾಡಿದ ಹಣದ ಬಗ್ಗೆ ಮಾಹಿತಿ ಕೇಳಿದ್ದರು.
“ಲಭ್ಯವಿರುವ ದಾಖಲೆಗಳ ಪ್ರಕಾರ, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವೈಯಕ್ತಿಕ ವೈದ್ಯಕೀಯ ಚಿಕಿತ್ಸೆಗೆ ಯಾವುದೇ ಖರ್ಚು ಮಾಡಿಲ್ಲ” ಎಂದು ಪಿಎಂಒ ಹೇಳಿದೆ.
ಕೇಂದ್ರ ಮಂತ್ರಿಗಳು ಮತ್ತು ಸಂಸತ್ತಿನ ಸದಸ್ಯರು ವೈದ್ಯಕೀಯ ಸೇರಿದಂತೆ ಹಲವಾರು ಪ್ರಯೋಜನಗಳಿಗೆ ಅರ್ಹರಾಗಿರುತ್ತಾರೆ. ಆದರೆ ಮೋದಿ ಆ ಪ್ರಯೋಜನವನ್ನು ಇದುವರೆಗೆ ಪಡೆದುಕೊಂಡಿಲ್ಲ.
ಫಿಟ್ ಇಂಡಿಯಾ ಆಂದೋಲನದ ಮೂಲಕ ಭಾರತದ 135 ಕೋಟಿ ಜನರನ್ನು ಫಿಟ್ ಆಗಿರಲು ಪ್ರೇರೇಪಿಸುವ ಮೂಲಕ ಪ್ರಧಾನಿ ಮೋದಿ ಬಲವಾದ ಸಂದೇಶವನ್ನು ರವಾನಿಸುತ್ತಿದ್ದಾರೆ ಎಂದು ಆರ್ಟಿ ವಿಚಾರಣೆಯನ್ನು ಸಲ್ಲಿಸಿದ ಕಾರ್ಯಕರ್ತ ಪ್ರಫುಲ್ ಸರ್ದಾ ಹೇಳಿದ್ದಾರೆ.
“ಕಳೆದ 8 ವರ್ಷಗಳಲ್ಲಿ ಪ್ರಧಾನಿ ಮೋದಿಯವರ ವೈದ್ಯಕೀಯ ಚಿಕಿತ್ಸೆಗೆ ಪಿಎಂಒ ಯಾವುದೇ ಹಣವನ್ನು ಖರ್ಚು ಮಾಡಿಲ್ಲ ಎಂದು ನನ್ನ ಹುಡುಕಾಟದ ಮಾಹಿತಿಯು ಹೇಳುತ್ತದೆ. ಇತರ ಸಂಸದರು ಮತ್ತು ಶಾಸಕರು ಹಿಂದೂಸ್ತಾನದ ಪ್ರಧಾನ್ ಸೇವಕನಿಂದ ಕಲಿಯುತ್ತಾರೆ ಎಂದು ಭಾವಿಸುತ್ತೇವೆ” ಎಂದು ಸರ್ದಾ ಟ್ವೀಟ್ ಮಾಡಿದ್ದಾರೆ.
ಪ್ರಧಾನಿ ಮೋದಿ ತಮ್ಮ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ನಿರಂತರ ವೈದ್ಯಕೀಯ ತಪಾಸಣೆಗಳನ್ನು ನಡೆಸುತ್ತಾರೆ ಮತ್ತು ವ್ಯಾಯಾಮಗಳನ್ನೂ ಮಾಡುತ್ತಾರೆ. ಹಿತಮಿತವಾದ ಆಹಾರ ಪದ್ಧತಿಯನ್ನು ಅವರು ಅಳವಡಿಸಿಕೊಂಡಿದ್ದಾರೆ.
My sought info says :
No money spent for Prime minister Modi #MedicalExpenses by #PMO in last 8 years. Hope other MP & MLA will also learn from #PradhanSevak of #Hindustan ! @TimesNow @PMOIndia @Shivani703— Praffull Sarda™ (@prafful_sarda) January 9, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.