ನವದೆಹಲಿ: ಡಿಸೆಂಬರ್ 1 ರಿಂದ ವಾರದಲ್ಲಿ 5 ದಿನಗಳ ಕಾಲ ರಾಷ್ಟ್ರಪತಿ ಭವನ ಸಾರ್ವಜನಿಕರ ವೀಕ್ಷಣೆಗೆ ತೆರೆದಿರಲಿದೆ.
“ರಾಷ್ಟ್ರಪತಿ ಭವನವು ಡಿಸೆಂಬರ್ 1 ರಿಂದ ವಾರದಲ್ಲಿ ಐದು ದಿನಗಳ ಕಾಲ ಸಾರ್ವಜನಿಕ ವೀಕ್ಷಣೆಗೆ ತೆರೆದಿರುತ್ತದೆ. ಬುಧವಾರ, ಗುರುವಾರ, ಶುಕ್ರವಾರ, ಶನಿವಾರ ಮತ್ತು ಭಾನುವಾರದಂದು ಸಾರ್ವಜನಿಕರ ಪ್ರವೇಶಕ್ಕೆ ಅವಕಾಶವಿರುತ್ತದೆ” ಎಂದು ಮೂಲಗಳು ತಿಳಿಸಿವೆ.
ಆದರೆ ಗೆಜೆಟೆಡ್ ರಜಾದಿನಗಳಲ್ಲಿ ಪ್ರವೇಶ ಇರುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ.
ವೀಕ್ಷಣೆಗೆ ಸಮಯ 10 AM ನಿಂದ 11 AM, 11 AM ನಿಂದ 12 PM, 12 PM ನಿಂದ 1 PM, 2 PM ನಿಂದ 3 PM ಮತ್ತು 3 PM ನಿಂದ 4 PM.
ಅಲ್ಲದೇ ಗೆಜೆಟೆಡ್ ರಜಾದಿನಗಳನ್ನು ಹೊರತುಪಡಿಸಿ, ಮಂಗಳವಾರದಿಂದ ಭಾನುವಾರದವರೆಗೆ ವಾರದಲ್ಲಿ ಆರು ದಿನ ಜನರು ರಾಷ್ಟ್ರಪತಿ ಭವನದ ವಸ್ತುಸಂಗ್ರಹಾಲಯ ಸಂಕೀರ್ಣಕ್ಕೆ ಭೇಟಿ ನೀಡಬಹುದು.
ಗಾರ್ಡ್ ಬದಲಾವಣೆ ಸಮಾರಂಭವನ್ನು ರಾಷ್ಟ್ರಪತಿ ಭವನದ ಮುಂಭಾಗದಲ್ಲಿ ಪ್ರತಿ ಶನಿವಾರ ಬೆಳಿಗ್ಗೆ 8 ರಿಂದ 9 ರವರೆಗೆ ವೀಕ್ಷಿಸಬಹುದು.
ಸಂದರ್ಶಕರು ತಮ್ಮ ಸ್ಲಾಟ್ಗಳನ್ನು ವೆಬ್ಸೈಟ್ https://rashtrapatisachivalaya.gov.in/rbtour ನಲ್ಲಿ ಬುಕ್ ಮಾಡಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.