ನವದೆಹಲಿ: ಟ್ವಿಟರ್ ಬಳಿಕ ಇದೀಗ ಗೂಗಲ್ ಉದ್ಯೋಗಿಗಳ ಸಂಖ್ಯೆಯನ್ನು ಕಡಿತಗೊಳಿಸಲು ಮುಂದಾಗಿದೆ. ಸುಮಾರು 10,000 ಉದ್ಯೋಗಿಗಳನ್ನು ಅದು ಕಡಿತಗೊಳಿಸಲು ಯೋಜಿಸಿದೆ. ಕಡಿಮೆ ಕಾರ್ಯಕ್ಷಮತೆಯ ರೇಟಿಂಗ್ಗಳನ್ನು ಪಡೆಯುವ ಉದ್ಯೋಗಿಗಳನ್ನು ಬಿಡಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ.
ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಆರ್ಥಿಕ ಹಿಂಜರಿತ ತೀವ್ರವಾಗಿ ಕಾಡುತ್ತಿದೆ. ಹೀಗಾಗಿ ಒತ್ತಡ ನಿವಾರಿಸಲು, ಪ್ರತಿಕೂಲವಾದ ಮಾರುಕಟ್ಟೆ ಸಂದರ್ಭಗಳು ಮತ್ತು ವೆಚ್ಚಗಳನ್ನು ಕಡಿಮೆ ಮಾಡುವ ಅಗತ್ಯಕ್ಕೆ ಕಟ್ಟುಬಿದ್ದು ಉದ್ಯೋಗಿಗಳನ್ನು ಬಹುರಾಷ್ಟ್ರೀಯ ಕಂಪನಿಗಳು ವಜಾ ಮಾಡುತ್ತಿವೆ.
ಟ್ವಿಟರ್, ಅಮೆಜಾನ್, ಮೆಟಾ ಸೇರಿದಂತೆ ಹಲವು ಕಂಪನಿಗಳು ಈಗಾಗಲೇ ಉದ್ಯೋಗಿಗಳ ವಜಾ ಮಾಡಿದೆ. ಮೆಟಾ, ಅಮೆಜಾನ್, ಟ್ವಿಟರ್ ಸೇರಿದಂತೆ 2022ರಲ್ಲಿ ಒಟ್ಟು 850 ಕಂಪನಿಗಳು ಒಟ್ಟು 1,36,989 ಉದ್ಯೋಗಿಗಳ ವಜಾ ಮಾಡಿದೆ ಎಂದು ಹೇಳಲಾಗಿದೆ.
ಗೂಗಲ್ ಮಾತೃಸಂಸ್ಥೆ ಆಲ್ಫಾಬೆಟ್ ಉದ್ಯೋಗಿಗಳ ವಜಾಗೆ ಸಜ್ಜಾಗಿದೆ. ಆಲ್ಫಾಬೆಟ್ ಈಗಾಗಲೇ ಉದ್ಯೋಗಿಗಳ ಪರ್ಫಾಮೆನ್ಸ್ ವಿಶ್ಲೇಷಣೆ ಮಾಡಿದೆ. ಕಳಪೆ ನಿರ್ವಹಣೆ ನೀಡುತ್ತಿರುವ ಉದ್ಯೋಗಿಗಳನ್ನು ಸಂಸ್ಥೆಯಿಂದ ವಜಾ ಮಾಡಲಾಗುವುದು ಎಂದು ಆಲ್ಫಾಬೆಟ್ ಹೇಳಿದೆ. ಸದ್ಯದ ಮಾರುಕಟ್ಟೆ ಸನ್ನಿವೇಶಗಳು ಭಿನ್ನವಾಗಿದೆ. ಹೀಗಾಗಿ ವೆಚ್ಚವನ್ನು ಕಡಿತಗೊಳಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಕಂಪನಿ ಈಗ ದಿಟ್ಟ ನಿರ್ಧಾರ ಮಾಡಲೇಬೇಕಿದೆ ಎಂದು ಆಲ್ಫಾಬೆಟ್ ಹೇಳಿದೆ
ಅಮೆಜಾನ್ ತನ್ನ 10 ಸಾವಿರ ಸಿಬ್ಬಂದಿಗಳ ಕಡಿತ ಆರಂಭಿಸಿದೆ. ವಿಶ್ವದಾದ್ಯಂತ ಅಮೆಜಾನ್ ಕಂಪನಿಯ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗಳಿಗೆ ಈ ಮೇಲ್ ಮೂಲಕ ಸಂದೇಶ ರವಾನಿಸಲಾಗಿದೆ. ಕಳೆದ ವಾರ ಫೇಸ್ಬುಕ್ ಕಂಪನಿ 11,000 ಉದ್ಯೋಗಿಗಳನ್ನು ವಜಾಗೊಳಿಸಿತ್ತು.
ಜಗತ್ತು ಆರ್ಥಿಕ ಹಿಂಜರಿತದತ್ತ ಮುಖ ಮಾಡಿದ್ದು ಪರಿಸ್ಥಿತಿ ಇನ್ನಷ್ಟ ಬಿಗಡಾಯಿಸುವ ಸಾಧ್ಯತೆ ಇದೆ ಎಂದು ತಜ್ಞರು ಈಗಾಗಲೇ ವಿಶ್ಲೇಷಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.