ಮುಂಬಯಿ: ಫೋರ್ಬ್ಸ್ನ ಜಾಗತಿಕ ಟಾಪ್ 10 ಅತ್ಯುತ್ತಮ ಅಂತಾರಾಷ್ಟ್ರೀಯ ಎಂಬಿಎ ಕಾಲೇಜುಗಳ ಪಟ್ಟಿಯಲ್ಲಿ ಎಸ್ಪಿ ಜೈನ್ ಸ್ಕೂಲ್ ಆಫ್ ಗ್ಲೋಬಲ್ ಮ್ಯಾನೇಜ್ಮೆಂಟ್ ಸ್ಥಾನ ಪಡೆದುಕೊಂಡಿದೆ. ಟಾಪ್ 10ರಲ್ಲಿ ಕಾಣಿಸಿಕೊಂಡ ಭಾರತದ ಏಕೈಕ್ ಕಾಲೇಜು ಇದಾಗಿದೆ.
2013-14ರ ಸಾಲಿನಲ್ಲಿ ಇದು ವಿಶ್ವದಲ್ಲೇ 11ನೇ ಸ್ಥಾನ ಪಡೆದುಕೊಂಡಿತ್ತು, ಇದೀಗ ಅದು ತನ್ನ ಸ್ಥಾನವನ್ನು 10ಕ್ಕೆ ಏರಿಸಿಕೊಂಡಿದೆ. ಭಾರತ ಮಾತ್ರವಲ್ಲದೇ ದುಬೈ, ಸಿಂಗಾಪುರ, ಆಸ್ಟ್ರೇಲಿಯಾದಲ್ಲೂ ಎಸ್ಪಿ ಜೈನ್ ಕಾಲೇಜು ಕಾರ್ಯನಿರ್ವಹಿಸುತ್ತಿದೆ.
‘ನಮ್ಮ 11ವರ್ಷಗಳ ಇತಿಹಾಸದಲ್ಲಿ ಕಳೆದ 5 ವರ್ಷದಿಂದ ನಾವು ಅತ್ಯುತ್ತಮ ಸಾಧನೆಯನ್ನು ಮಾಡಿ ಫೋರ್ಬ್ಸ್, ಫಿನಾನ್ಸಿಯಲ್ ಟೈಮ್ಸ್ ಮತ್ತು ನೆಲ್ಸನ್ ರ್ಯಾಂಕಿಂಗ್ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದೇವೆ’ ಎಂದು ಕಾಲೇಜಿನ ಅಧ್ಯಕ್ಷ ನಿತೀಶ್ ಜೈನ್ ಹೇಳಿದ್ದಾರೆ.
ಈ ಕಾಲೇಜು ಏಷ್ಯಾದ ಟಾಪ್ ಬ್ಯುಸಿನೆಸ್ ಸ್ಕೂಲ್ ಎಂಬ ಹೆಸರನ್ನು ಪಡೆದಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಒದಗಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.