
ನವದೆಹಲಿ: ನೂಪುರ್ ಶರ್ಮಾ ವಿರುದ್ಧ ಸುಪ್ರೀಂಕೋರ್ಟ್ನ ಇತ್ತೀಚಿನ ಅವಲೋಕನಗಳನ್ನು ಮಾಜಿ ನ್ಯಾಯಾಧೀಶರು, ಅಧಿಕಾರಿಗಳು ಮತ್ತು ನಿವೃತ್ತ ಸಶಸ್ತ್ರ ಪಡೆಗಳ ಅಧಿಕಾರಿಗಳ ಗುಂಪು ಟೀಕಿಸಿದೆ.
ಸಿಜೆಐ ಎನ್ವಿ ರಮಣ ಅವರಿಗೆ ಗುಂಪು ಬಹಿರಂಗ ಪತ್ರವನ್ನು ಕಳುಹಿಸಿದ್ದು, ಪತ್ರದಲ್ಲಿ ಸುಪ್ರೀಂಕೋರ್ಟ್ ನೂಪುರ್ ಶರ್ಮಾ ಅವರ ಪ್ರಕರಣದಲ್ಲಿ ಲಕ್ಷ್ಮಣ ರೇಖೆಯನ್ನು ಮೀರಿದೆ ಎಂದು ಆರೋಪಿಸಿದೆ ಮತ್ತು ತಪ್ಪನ್ನು ತುರ್ತು ಸರಿಪಡಿಸಬೇಕಾದ ಅಗತ್ಯವಿದೆ ಎಂದಿದೆ.
ಜುಲೈ 1 ರಂದು ಸುಪ್ರೀಂಕೋರ್ಟ್ ನೂಪುರ್ ಶರ್ಮಾ ಅವರನ್ನು ಪ್ರವಾದಿ ಮೊಹಮ್ಮದ್ ಅವರ ಬಗ್ಗೆ ನೀಡಿದ ಹೇಳಿಕೆಗಳಿಗಾಗಿ ದೂಷಿಸಿತ್ತು, ಅವರ ಹೇಳಿಕೆಗಳು ಗೊಂದಲದ ಮತ್ತು ದುರಹಂಕಾರದ ಪರಮಾವಧಿ ಎಂದು ಹೇಳಿತ್ತು. ಪ್ರವಾದಿ ಮೊಹಮ್ಮದ್ ವಿರುದ್ಧದ ವಿವಾದಕ್ಕಾಗಿ ಆಕೆ ದೇಶದ ಕ್ಷಮೆಯಾಚನೆ ಮಾಡಬೇಕು ಎಂದಿತ್ತು. ಅವರ ಹೇಳಿಕೆ ದೇಶಕ್ಕೆ ಕಿಚ್ಚು ಹತ್ತಿಸಿದೆ ಎಂದಿತ್ತು. ಇದನ್ನು ಗುಂಪು ತೀವ್ರವಾಗಿ ಖಂಡಿಸಿದೆ.
ಸುಪ್ರೀಂಕೋರ್ಟ್ನಲ್ಲಿ ನೂಪುರ್ ಶರ್ಮಾ ಅವರ ಪ್ರಕರಣದ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೆಬಿ ಪರ್ದಿವಾಲಾ ಅವರು ಮಾಡಿದ ಅವಲೋಕನದ ವಿರುದ್ಧ 15 ನಿವೃತ್ತ ನ್ಯಾಯಾಧೀಶರು, 77 ನಿವೃತ್ತ ಅಧಿಕಾರಿಗಳು ಮತ್ತು 25 ನಿವೃತ್ತ ಸಶಸ್ತ್ರ ಪಡೆಗಳ ಅಧಿಕಾರಿಗಳ ಸಹಿ ಇರುವ ಬಹಿರಂಗ ಪತ್ರವನ್ನು ಸಿಜೆಐ ಎನ್ವಿ ರಮಣ ಅವರಿಗೆ ಕಳುಹಿಸಲಾಗಿದೆ.
ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ನಿವೃತ್ತಿಯಾಗುವವರೆಗೆ ಅವರ ರೋಸ್ಟರ್ ಅನ್ನು ಹಿಂಪಡೆಯಬೇಕು ಮತ್ತು ನೂಪುರ್ ಶರ್ಮಾ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಅವರು ಮಾಡಿದ ಟೀಕೆಗಳು ಮತ್ತು ಅವಲೋಕನಗಳನ್ನು ಹಿಂತೆಗೆದುಕೊಳ್ಳುವಂತೆ ಸೂಚಿಸಬೇಕು ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಫೋರಮ್ ಫಾರ್ ಹ್ಯೂಮನ್ ರೈಟ್ಸ್ ಅಂಡ್ ಸೋಶಿಯಲ್ ಜಸ್ಟಿಸ್, ಜೆ & ಕೆ ಮತ್ತು ಲಡಾಖ್ ಅಟ್ ಜಮ್ಮು’ ಎಂಬ ಸಂಘಟನೆಯಡಿ ಈ ಪತ್ರವನ್ನು ಬರೆಯಲಾಗಿದೆ.
An open letter has been sent to CJI NV Ramana, signed by 15 retired judges, 77 retd bureaucrats & 25 retd armed forces officers, against the observation made by Justices Surya Kant & JB Pardiwala while hearing Nupur Sharma's case in the Supreme Court. pic.twitter.com/ul5c5PedWU
— ANI (@ANI) July 5, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


