ನವದೆಹಲಿ: ವಿದೇಶಾಂಗ ವ್ಯವಹಾರಗಳ ಸಚಿವ ಡಾ.ಎಸ್.ಜೈಶಂಕರ್ ಅವರು ಇಂದು ನವದೆಹಲಿಯಲ್ಲಿ ಹಂಗೇರಿಯ ವಿದೇಶಾಂಗ ಸಚಿವ ಪೀಟರ್ ಸಿಜ್ಜಾರ್ಟೊ ಅವರೊಂದಿಗೆ ಅಂತಾರಾಷ್ಟ್ರೀಯ ಸೌರ ಒಕ್ಕೂಟದ (ಐಎಸ್ಎ) ಒಡಂಬಡಿಕೆಗೆ ಸಹಿ ಹಾಕಿದರು. ಈ ಮೂಲಕ ಹಂಗೇರಿ ಇಂಟರ್ನ್ಯಾಷನಲ್ ಸೋಲಾರ್ ಅಲೆನ್ಸ್ನ ಹೊಸ ಸದಸ್ಯನಾಗಿದೆ.
ಬಳಿಕ ಸಿಜ್ಜಾರ್ಟೊ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದ ಜೈಶಂಕರ್, ಭಾರತ-ಹಂಗೇರಿ ವ್ಯಾಪಾರ ವೇದಿಕೆಯ ಬದಿಯಲ್ಲಿ ಜಾಗತಿಕ ವ್ಯವಹಾರಗಳ ಕುರಿತು ಚರ್ಚಿಸಿದರು.
ರಷ್ಯಾದ ಇಂಧನಗಳನ್ನು ನಿಷೇಧಿಸುವ ಯುರೋಪಿಯನ್ ಯೂನಿಯನ್ನ ಕ್ರಮವನ್ನು ನಿರಾಕರಿಸಿದ ಕೆಲವು ಯುರೋಪಿಯನ್ ರಾಷ್ಟ್ರಗಳಲ್ಲಿ ಹಂಗೇರಿಯೂ ಒಂದಾಗಿದೆ. ಇದು ಭಾರತ-ಹಂಗೇರಿ ದೇಶಗಳ ನಡುವಣ ಸಂಬಂಧಗಳನ್ನು ಸುಗಮಗೊಳಿಸುತ್ತದೆ ಎಂದು ಪರಿಗಣಿಸಲಾಗಿದೆ.
A warm and insightful discussion with FM Péter Szijjártó of Hungary today.
Appreciated Hungarian support for Operation Ganga and discussed admission of Indian medical students in Hungary.
Recalled Hungary’s early recognition of Covaxin and openness to travel arrangements. pic.twitter.com/U7CCqMcHEP
— Dr. S. Jaishankar (@DrSJaishankar) May 27, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.