ನವದೆಹಲಿ: ಇದುವರೆಗೆ 23 ಕೋಟಿಗೂ ಅಧಿಕ ಮಣ್ಣಿನ ಆರೋಗ್ಯ ಕಾರ್ಡ್ಗಳನ್ನು ರೈತರಿಗೆ ವಿತರಿಸಲಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ಮಣ್ಣಿನ ಆರೋಗ್ಯ ಕಾರ್ಡ್ ಮಣ್ಣಿನ ಆರೋಗ್ಯ ಮತ್ತು ಅದರ ಫಲವತ್ತತೆ, ಮಣ್ಣಿನ ಪೋಷಕಾಂಶದ ಸ್ಥಿತಿಯ ಮಾಹಿತಿಯನ್ನು ರೈತರಿಗೆ ಒದಗಿಸುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು 2015 ರ ಫೆಬ್ರವರಿ 19 ರಂದು ರಾಜಸ್ಥಾನದ ಸೂರತ್ಗಢದಲ್ಲಿ ಮಣ್ಣಿನ ಆರೋಗ್ಯ ಕಾರ್ಡ್ ವಿತರಣಾ ಯೋಜನೆಯನ್ನು ಪ್ರಾರಂಭಿಸಿದರು . ಈ ಯೋಜನೆ ಇಂದಿಗೆ ಏಳು ವರ್ಷ ಪೂರೈಸಿದೆ.
ಈ ಯೋಜನೆಯು ಮಣ್ಣಿನಲ್ಲಿರುವ ಪೌಷ್ಟಿಕಾಂಶದ ಕೊರತೆಯನ್ನು ಪರಿಹರಿಸಲು ಆಧಾರವನ್ನು ಒದಗಿಸಲು ಪ್ರತಿ ಎರಡು ವರ್ಷಗಳಿಗೊಮ್ಮೆ ರೈತರಿಗೆ ಮಣ್ಣಿನ ಆರೋಗ್ಯ ಕಾರ್ಡ್ಗಳನ್ನು ನೀಡುವ ಗುರಿಯನ್ನು ಹೊಂದಿದೆ.
ಕಾರ್ಡ್ ರೈತನ ಹಿಡುವಳಿಯ ಮಣ್ಣಿನ ಪೋಷಕಾಂಶದ ಸ್ಥಿತಿಯನ್ನು ಆಧರಿಸಿ ಸಲಹೆಯನ್ನು ನೀಡುತ್ತದೆ. ಅಗತ್ಯವಿರುವ ವಿವಿಧ ಪೋಷಕಾಂಶಗಳ ಡೋಸೇಜ್ನ ಶಿಫಾರಸುಗಳನ್ನು ಸಹ ಇದು ತೋರಿಸುತ್ತದೆ.
ಈ ಯೋಜನೆಯು ಇಳುವರಿಯಲ್ಲಿ ಹೆಚ್ಚಳದ ಮೂಲಕ ರೈತರಿಗೆ ಹೆಚ್ಚುವರಿ ಆದಾಯವನ್ನು ಖಾತ್ರಿಗೊಳಿಸುತ್ತದೆ ಮತ್ತು ಇದು ಸುಸ್ಥಿರ ಕೃಷಿಯನ್ನು ಉತ್ತೇಜಿಸುತ್ತದೆ.
ದೇಶಾದ್ಯಂತ 11,500 ಕ್ಕೂ ಹೆಚ್ಚು ಹೊಸ ಮಣ್ಣು ಪರೀಕ್ಷಾ ಪ್ರಯೋಗಾಲಯಗಳನ್ನು ಕಾರ್ಯಗತಗೊಳಿಸಲಾಗಿದೆ. ಮಣ್ಣಿನ ವಿಶ್ಲೇಷಣಾ ಸಾಮರ್ಥ್ಯವು ವರ್ಷಕ್ಕೆ 1 ಕೋಟಿ 78 ಲಕ್ಷದಿಂದ 3 ಕೋಟಿ 33 ಲಕ್ಷ ಸ್ಯಾಂಪಲ್ಗಳಿಗೆ ಏರಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.