ನವದೆಹಲಿ: ಕೇಂದ್ರ ಸಂಸ್ಕೃತಿ ಖಾತೆ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ ಅವರು ನಿನ್ನೆ ನವದೆಹಲಿಯಲ್ಲಿ ‘ಇಂಡಿಯಾಸ್ ವುಮೆನ್ ಅನ್ಸಂಗ್ ಹೀರೋಸ್’ ಎಂಬ ಪಿಕ್ಟೋರಿಯಲ್ ಕಾಮಿಕ್ ಬುಕ್ ಬಿಡುಗಡೆ ಮಾಡಿದ್ದಾರೆ. ಅಮರ್ ಚಿತ್ರ ಕಥಾ ಸಹಭಾಗಿತ್ವದಲ್ಲಿ ಸಂಸ್ಕೃತಿ ಸಚಿವಾಲಯವು ಈ ಪುಸ್ತಕವನ್ನು ಸಿದ್ಧಪಡಿಸಿದೆ.
ಪುಸ್ತಕವು ನಮ್ಮ ಮರೆತುಹೋದ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರ ಪರಾಕ್ರಮದ ಕಥೆಗಳನ್ನು ಚಿತ್ರಿಸುತ್ತದೆ. ದೇಶದೆಲ್ಲೆಡೆ ಬಂಡಾಯದ ಜ್ವಾಲೆಯನ್ನು ಹೊತ್ತಿಸಿದ ಮಹಿಳೆಯರ ಬದುಕನ್ನು ಈ ಪುಸ್ತಕ ಶ್ಲಾಘಿಸಿದೆ.
“ಈ ಪುಸ್ತಕವು ನಮ್ಮ ಸ್ವಾತಂತ್ರ್ಯ ಹೋರಾಟದ ಮರೆತ ಹೋದ ವೀರರಿಗೆ ಸಂದ ಗೌರವವಾಗಿದೆ. ಸಾಮ್ರಾಜ್ಯಶಾಹಿ ವಿರುದ್ಧ ಹೋರಾಡಿದ ಮತ್ತು ತಾಯಿ ಭಾರತಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ರಾಣಿಯರ ಕಥೆಗಳನ್ನು ಇದು ಒಳಗೊಂಡಿದೆ” ಎಂದು ಸಚಿವರು ಹೇಳಿದ್ದಾರೆ.
Delhi | MoS MEA & Culture, Meenakashi Lekhi, released a pictorial comic book ‘India’s Women Unsung Heroes’, prepared by the Ministry of Culture, depicting unsung women freedom fighters, at the Indira Gandhi National Centre for the Arts (27.01) pic.twitter.com/jff53gmms4
— ANI (@ANI) January 27, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.