ಮಂಗಳೂರು : ವಿಶ್ವ ಯೋಗ ದಿನವನ್ನಾಗಿ ಆಚರಿಸಿದ ಹೆಮ್ಮೆ ಭಾರತದ್ದು. ವಿಶ್ವಕ್ಕೆ ಯೋಗ ಶಾಸ್ತ್ರವನ್ನು ಪರಿಚಯಿಸಿದ್ದು ಪ್ರಾಚೀನ ವಿಜ್ಞಾನಿಯೆನಿಸಿದ ಪತಂಜಲಿ ಮಹರ್ಷಿ. ಈ ಯೋಗಶಾಸ್ತ್ರವಿರುವುದು ಸಂಸ್ಕೃತದಲ್ಲಿ. ಆದ್ದರಿಂದ ಸಂಸ್ಕೃತ ವಿಶ್ವತೋಮುಖವಾಗಿ ಬೆಳೆಯಲು ಪ್ರಾಚೀನ ಭಾರತೀಯ ಕೊಡುಗೆ ಅಪಾರ ಹಾಗಾಗಿ ಈ ನಿಟ್ಟಿನಲ್ಲಿ ನಾವು ಸಂಸ್ಕೃತದ ರಕ್ಷಣೆಗಾಗಿ ಕಂಕಣಬದ್ಧರಾಗಬೇಕಾದುದು ಅತ್ಯವಶ್ಯ ಎಂಬುದಾಗಿ ಸುರತ್ಕಲ್ ಗೋವಿಂದದಾಸ ಕಾಲೇಜಿನ ಸಂಸ್ಕೃತ ಉಪನ್ಯಾಸಕರಾದ ಶ್ರೀ ವಿದ್ವಾನ್ ವೆಂಕಟ್ರಮಣ ಭಟ್ ಅಭಿಪ್ರಾಯಪಟ್ಟರು.
ಅವರು ಶಾರದಾ ಪದವಿ ಪೂರ್ವ ಕಾಲೇಜಿನ ಸಂಸ್ಕೃತ ದಿನೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಸಂಸ್ಕೃತದಿಂದ ಮಾತ್ರ ಈ ದೇಶವನ್ನು ಅರಿಯಲು ಸಾಧ್ಯ ಹಾಗಾಗಿ ನಾವೆಲ್ಲರೂ ಸಂಸ್ಕೃತಾಭಿಮಾನಿಗಳಾಗಬೇಕು ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶಾರದಾ ವಿದ್ಯಾ ಸಂಸ್ಥೆಯ ಟ್ರಸ್ಟಿಗಳಾದ ಪ್ರದೀಪ ಕುಮಾರ ಕಲ್ಕೂರ ಮಾತನಾಡಿ ಸಂಸ್ಕೃತ ಭಾರತದ ಹೆಮ್ಮೆಯಾಗಿದೆ. ಇದು ನಮ್ಮ ಅಂತರಂಗ ಶುದ್ಧಿಯನ್ನು ಮಾಡುವ ಭಾಷೆ. ಇದರ ಸೊಗಸು ನಮ್ಮ ಜೀವನಕ್ಕೆ ಸಂಸ್ಕಾರವನ್ನು ಸೌಂದರ್ಯವನ್ನು ಕೊಡುವ ಮಧುರ ಭಾಷೆಯಾಗಿದೆ ಎಂದರು.
ಸಂಸ್ಕೃತೋತ್ಸವ ಆಚರಣೆಯಲ್ಲಿ ಅತಿಥಿಗಳಾಗಿ ಭಾಗವಹಿಸಿದ ಡಾ| ಲೀಲಾ ಉಪಾಧ್ಯಾಯ, ಡಾ| ಕಬ್ಬಿನಾಲೆ ಬಾಲಕೃಷ್ಣ ಭಾರದ್ವಾಜ್ ಹಾಗೂ ಕಾಲೇಜಿನ ಪ್ರಾಚಾರ್ಯರಾದ ಡಾ| ಶ್ರೀಪತಿ ರಾವ್ ಸಂಸ್ಕೃತ ಹಿರಿಮೆ-ಗರಿಮೆಗಳ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡರು. ಸಂಸ್ಕೃತೋತ್ಸವದ ಆಚರಣೆಯ ಅವಶ್ಯಕತೆಯ ಬಗ್ಗೆ ಸಂಸ್ಕೃತೋತ್ಸವ ಸಂಯೋಜಕರು ಹಾಗೂ ಉಪನ್ಯಾಸಕರಾದ ಶ್ರೀ ರಮೇಶ್ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಕು| ಕೃತಿ ಸ್ವಾಗತಿಸಿದರೆ, ಕು| ಶ್ರಾವ್ಯ ವಂದಿಸಿದರು. ಕು| ರೇಷ್ಮ ಹಾಗೂ ಕು| ಹನಿಷಾ ಸಾಂಸ್ಕೃತಿಕ ಕಾರ್ಯಕ್ರಮದ ನಿರೂಪಣೆಗೈದರು. ಕಾರ್ಯಕ್ರಮದ ಕೊನೆಗೆ ವಿದ್ಯಾರ್ಥಿಗಳಿಂದ ಸಂಸ್ಕೃತದಲ್ಲಿ ವಿಜ್ಞಾನ ವೈಭವ, ಸಂಸ್ಕೃತ ಅಂತ್ಯಾಕ್ಷರಿ, ಭಾಷಣ, ಸಮೂಹ ನೃತ್ಯ, ಸಮೂಹಗಾನ ಕಾರ್ಯಕ್ರಮಗಳು ಜರಗಿದವು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.