ನವದೆಹಲಿ:1965ರ ಭಾರತ-ಪಾಕಿಸ್ಥಾನ ಯುದ್ಧ ೫೦ನೇ ವರ್ಷಾಚರಣೆಯ ಹಿನ್ನಲೆಯಲ್ಲಿ ಶುಕ್ರವಾರ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರು ಹುತಾತ್ಮರಿಗೆ ಗೌರವ ನಮನ ಸಲ್ಲಿಸಿದರು.
ದೆಹಲಿಯ ಅಮರ್ ಜವಾನ್ ಜ್ಯೋತಿ ಸ್ಮಾರಕಕ್ಕೆ ಭೇಟಿ ನೀಡಿದ ಅವರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿ ಅಮರರಾದವರನ್ನು ಸ್ಮರಿಸಿದರು.
ಈ ಯುದ್ಧದಲ್ಲಿ ಭಾರತೀಯ ಸೇನೆ ಪಾಕಿಸ್ಥಾನದ ವಶದಲ್ಲಿದ್ದ ಹಜ್ ಫಿರ್ ಪಾಸ್ನ್ನು ವಶಕ್ಕೆ ಪಡೆದುಕೊಂಡಿತ್ತು. ಅಲ್ಲದೇ ಪಾಕ್ ಭಾರತದ 550 sq km ವಶಪಡಿಸಿಕೊಂಡರೆ, ಭಾರತದ ಅದರ 1,920 sq km ವಶಪಡಿಸಿಕೊಂಡಿತ್ತು.
ಈ ಯುದ್ಧದಲ್ಲಿ ತಾನು ಗೆದ್ದಿರುವುದಾಗಿ ಪಾಕ್ ಹೇಳಿಕೊಂಡರು ಅಧಿಕೃತ ಗೆಲುವು ಭಾರತದ್ದು ಎಂಬುದು ಪ್ರಪಂಚಕ್ಕೆ ತಿಳಿದ ವಿಷಯ.
17 ದಿನಗಳ ಕಾಲ ನಡೆದ ಈ ಯುದ್ಧದಲ್ಲಿ ಒಟ್ಟು 3 ಸಾವಿರ ಯೋಧರು, ನೌಕಾ ಸಿಬ್ಬಂದಿ ಮತ್ತು ವಾಯು ಸಿಬ್ಬಂದಿಗಳು ಮರಣವನ್ನಪ್ಪಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.