ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಮಾಡಿದ ಸುಧಾರಣೆಗಳು ಬಡವರ ಅಗತ್ಯಗಳನ್ನು ಆಧರಿಸಿವೆ ಮತ್ತು ಮೋದಿ ಜಿಡಿಪಿಗೆ ಮಾನವೀಯ ಆಯಾಮವನ್ನು ನೀಡಿದ್ದಾರೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
‘ಪ್ರಜಾಪ್ರಭುತ್ವ ವಿತರಣೆ: ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಮುಖ್ಯಸ್ಥರಾಗಿ ಎರಡು ದಶಕಗಳನ್ನು ಪೂರೈಸಿದ ಬಗ್ಗೆ ವಿಮರ್ಶೆ’ ಎಂಬ ರಾಷ್ಟ್ರೀಯ ಕಾನ್ಫರೆನ್ಸ್ ಅನ್ನು ಉದ್ದೇಶಿಸಿ ಮಾತನಾಡಿದ ಸಂದರ್ಭ ಅವರು ಈ ಮಾತುಗಳನ್ನಾಡಿದರು.
“ಮೋದಿ ಅವರು ಎಲ್ಲಾ ಕ್ಷೇತ್ರಗಳಲ್ಲಿ ಭಾರತದ ಅಭಿವೃದ್ಧಿಗೆ ಕೊಡುಗೆ ನೀಡುವ ಯೋಜನೆಗಳನ್ನು ಪ್ರಾರಂಭಿಸಿದರು. ಜಿಡಿಪಿ ಬೆಳೆಯಬೇಕು, ಆದರೆ ಅದರ ಫಲಾನುಭವಿ ಬಡವರು ಮತ್ತು ನಿರ್ಗತಿಕರೇ ಆಗಿರಬೇಕು” ಎಂದರು.
ವಿವಿಧ ಯೋಜನೆಗಳ ಅಡಿಯಲ್ಲಿ ದೇಶಾದ್ಯಂತ ಬಡವರು ಮತ್ತು ನಿರ್ಗತಿಕರನ್ನು ಬೆಂಬಲಿಸುವ ನೇರ ಲಾಭ ವರ್ಗಾವಣೆ ಮೂಲಕ 19 ಲಕ್ಷ ಕೋಟಿ ರೂಪಾಯಿಗಳನ್ನು ವರ್ಗಾಯಿಸಲಾಗಿದೆ ಎಂದು ಸಚಿವರು ಹೇಳಿದರು.
Rs 19 lakh crore have been sent via DBT, supporting the poor and needy across the nation under various schemes.
This highlights the benefits of the Jan Dhan Yojana, under which over 43 crore bank accounts have been opened up- Shri @AmitShah pic.twitter.com/BEqSopn3YK
— BJP (@BJP4India) October 27, 2021
ಭಾರತದ ಸ್ವಾತಂತ್ರ್ಯದ ನಂತರ ಬುಡಕಟ್ಟು ಜನಾಂಗದವರಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್ ಹಂಚಿಕೆಯನ್ನು ಖಚಿತಪಡಿಸಿಕೊಂಡ ಮೊದಲ ರಾಜ್ಯ ಗುಜರಾತ್ ಆಗಿದೆ. ಇದನ್ನು ವನ್ ಬಂಧು ಕಲ್ಯಾಣ ಯೋಜನೆಯಡಿ ಮಾಡಲಾಗಿದೆ ಎಂದು ಶಾ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.