ನವದೆಹಲಿ: ಭಾರತವು ಅವಕಾಶಗಳ ರಾಷ್ಟ್ರ ಎಂದು ಬಣ್ಣಿಸಿದ ಪ್ರಧಾನಿ ನರೇಂದ್ರ ಮೋದಿ, ಭಾರತವು ಏನನ್ನಾದರೂ ಸಾಧಿಸಬಲ್ಲದು ಎಂಬ ಬಗ್ಗೆ ನನಗೆ ಅತೀವ ನಂಬಿಕೆ ಇದೆ ಎಂದು ಹೇಳಿದ್ದಾರೆ.
ರಾಷ್ಟ್ರವು ನನ್ನಂತಹ ಬಡ ವ್ಯಕ್ತಿಯನ್ನು ಜನಪ್ರತಿನಿಧಿಯಾಗಿ ಆರಿಸಿದ್ದು ಮತ್ತು ಅಂತಹ ದೊಡ್ಡ ಜವಾಬ್ದಾರಿಗಳಲ್ಲಿ ನನ್ನ ಮೇಲೆ ನಂಬಿಕೆ ಇಟ್ಟಿದ್ದು ಪ್ರಜಾಪ್ರಭುತ್ವದ ಶಕ್ತಿಯನ್ನು ತೋರಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.
‘ಓಪನ್ ಮ್ಯಾಗಜಿನ್’ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, “ನನ್ನ ಸ್ವಂತ ಜೀವನದ ಹಾದಿ ನನಗೆ ಅಚ್ಚರಿ ಹುಟ್ಟಿಸುವುದಿಲ್ಲ. ನಮ್ಮ ದೇಶದ ಮಾದರಿಯನ್ನು ನೋಡಿ ಮತ್ತು ಅದು ನನ್ನಂತಹ ಬಡವನನ್ನು ಆರಿಸಿದ್ದು ಮತ್ತು ಇಲ್ಲಿಯವರೆಗೆ ತಂದು ನಿಲ್ಲಿಸಿದ ಬಗ್ಗೆ ನನಗೆ ಅಚ್ಚರಿ ಇದೆ. ದೇಶದ ಜನರು ನನಗೆ ಅಂತಹ ದೊಡ್ಡ ಜವಾಬ್ದಾರಿಗಳನ್ನು ನೀಡಿದ್ದಾರೆ ಮತ್ತು ನನ್ನ ಮೇಲಿನ ಅವರ ವಿಶ್ವಾಸವನ್ನು ಮುಂದುವರಿಸಿದ್ದಾರೆ. ಇದು ನಮ್ಮ ಪ್ರಜಾಪ್ರಭುತ್ವದ ಶಕ್ತಿ” ಎಂದಿದ್ದಾರೆ.
ನನ್ನ ಜೀವನ ಪ್ರಯಾಣವನ್ನು ವಿಭಿನ್ನ ರೀತಿಯಲ್ಲಿ ನೋಡುವುದಾಗಿ ಮೋದಿ ಹೇಳಿದರು. “ನಾನು ಬಾಲ್ಯದಲ್ಲಿ ಚಹಾ ಮಾರಿದ್ದು ಮತ್ತು ರಾಷ್ಟ್ರದ ಪ್ರಧಾನಿಯಾದ ಬಗೆಯನ್ನು ನಿಮಗಿಂತ ವಿಭಿನ್ನವಾಗಿ ನೋಡುತ್ತೇನೆ. ಭಾರತದ 130 ಕೋಟಿ ಜನರು ನನ್ನಂತೆಯೇ ಸಾಮರ್ಥ್ಯ ಹೊಂದಿದ್ದಾರೆ ಎಂದು ನಾನು ಭಾವಿಸುತ್ತೇನೆ. ನಾನು ಸಾಧಿಸಿದ್ದನ್ನು ಯಾರು ಬೇಕಾದರೂ ಸಾಧಿಸಬಹುದು. ನನಗೆ ಸಾಧ್ಯವಾಗಿದೆ ಎಂದರೆ ಎಲ್ಲರಿಗೂ ಸಾಧ್ಯವಾದಂತೆ” ಎಂದಿದ್ದಾರೆ.
Sharing an extensive interview with @Openthemag, in which I have talked about diverse subjects of governance, the commitment to reform and efforts to transform the lives of 130 crore Indians. https://t.co/tbbuKGQQKy
— Narendra Modi (@narendramodi) October 2, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.