ನವದೆಹಲಿ: ಅಡುಗೆ ಅನಿಲ ಗ್ರಾಹಕರ ಮನಸ್ಸು ಗೆಲ್ಲುವಲ್ಲಿ ಪ್ರಧಾನಿ ನರೇಂದ್ರ ಮೋದಿ ಯಶಸ್ವಿಯಾಗಿದ್ದಾರೆ. ಅವರ ಕರೆಗೆ ಓಗೊಟ್ಟು ನಿತ್ಯ ೩೦ ಸಾವಿರದಿಂದ 40 ಸಾವಿರ ಮನೆಗಳು ತಾವು ಪಡೆಯುತ್ತಿದ್ದ ಅನಿಲ ಸಬ್ಸಿಡಿಯನ್ನು ರದ್ದುಪಡಿಸುತ್ತಿವೆ.
ಸರ್ಕಾರಿ ಸ್ವಾಮ್ಯದ ಇಂಧನ ಕಂಪನಿಗಳು ಕೂಡ ಮೋದಿಯವರ ‘ಗಿವ್ ಇಟ್ ಅಪ್’ ಅಭಿಯಾನದಲ್ಲಿ ಭಾಗವಹಿಸಿ ಮನೆ ಮನೆ ಪ್ರಚಾರದ ಮೂಲಕ ಅನಿಲ ಸಬ್ಸಿಡಿಯನ್ನು ಬಿಡುವಂತೆ ಶ್ರೀಮಂತರ ಮನವೊಲಿಸುತ್ತಿದೆ.
ಈಗಾಗಲೇ ಸುಮಾರು 20 ಲಕ್ಷ ಮನೆಗಳು ಎಲ್ಇಜಿ ಸಬ್ಸಿಡಿಯನ್ನು ತೊರೆದಿವೆ ಎಂದು ಸ್ವತಂತ್ರ ದಿನಾಚರಣೆಯ ಭಾಷಣದಲ್ಲಿ ಮೋದಿ ಹೇಳಿದ್ದರು. ಅವರ ಭಾಷಣದ ಬಳಿಕ ಸಬ್ಸಿಡಿ ತೊರೆಯುವವರ ಸಂಖ್ಯೆ ಮತ್ತಷ್ಟು ಏರಿಕೆಯಾಗಿದೆ, ಪ್ರಸ್ತುತ 22.57 ಲಕ್ಷ ಮನೆಗಳು ಸಬ್ಸಿಡಿಯನ್ನು ತೊರೆದಿವೆ ಎಂದು ಇಂಧನ ಸಚಿವಾಲಯದ ವರದಿಯಿಂದ ತಿಳಿದು ಬಂದಿದೆ.
ಪ್ರಧಾನಿ ನೀಡಿದ ಕರೆ ನಿಜಕ್ಕೂ ಮ್ಯಾಜಿಕ್ ಮಾಡಿದೆ. ಶ್ರೀಮಂತ ವರ್ಗ ಸಬ್ಸಿಡಿಯನ್ನು ತೊರೆದು ಬಡವರಿಗೆ ಸಬ್ಸಿಡಿಯಲ್ಲಿ ಅಡುಗೆ ಅನಿಲ ದೊರೆಯುವಂತೆ ಮಾಡುತ್ತಿವೆ. ಸರ್ಕಾರದ ಉಚಿತ ಕೊಡುಗೆಗಳಿಗೆ ಆಕರ್ಷಿತರಾಗುತ್ತಿದ್ದ ಭಾರತದ ಜನ ಇದೀಗ ಸಬ್ಸಿಡಿಯನ್ನು ತ್ಯಾಗ ಮಾಡುತ್ತಿದ್ದಾರೆ ಎಂದರೆ ನಿಜಕ್ಕೂ ಆಶ್ಚರ್ಯ. ಆದರೆ ಇದೆಲ್ಲವೂ ಸಾಧ್ಯವಾದುದು ಸರ್ಕಾರದ ಯೋಜಿತ ಅಭಿಯಾನದಿಂದ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.