ಇತಿಹಾಸದುದ್ದಕ್ಕೂ ಭಾರತದ ಇತರ ಪ್ರಾಂತ್ಯಗಳ ಇತಿಹಾಸವನ್ನು ಮತ್ತು ಕಾಶ್ಮೀರದ ಇತಿಹಾಸವನ್ನು ಹೋಲಿಸಿ ನೋಡಿದರೆ ಭಾರತದ ಇತರ ಪ್ರಾಂತ್ಯಗಳ ಹಿಂದೂಗಳಿಗಿಂದ ಕಾಶ್ಮೀರಿ ಹಿಂದೂಗಳು ಭಿನ್ನರಾಗಿ ಕಾಣಿಸುತ್ತಾರೆ. ಇತರ ಪ್ರದೇಶದ ಹಿಂದೂಗಳೇ ಸಹಿಷ್ಣುಗಳು ಮತ್ತು ಶಾಂತರಾದರೆ, ಕಾಶ್ಮೀರಿ ಹಿಂದೂಗಳ ಸಹಿಷ್ಣುತೆ ಮತ್ತು ಶಾಂತ ಸ್ವಭಾವವು ಇನ್ನೂ ಎರಡು ತೂಕ ಹೆಚ್ಚಾಗಿತ್ತು. ಯಾಕೆಂದರೆ ಕಾಶ್ಮೀರದಲ್ಲಿ ಸ್ವತಃ ತಾಯಿ ಶಾರದೆಯೇ ವಾಸವಾಗಿದ್ದಳು. ಅಲ್ಲಿನ ಹಿಂದೂಗಳೂ ಶಾರದೆ ಮತ್ತು ಸರಸ್ವತಿಯನ್ನು ಉಪಾಸಿಸುತ್ತಾ ಸ್ವಧರ್ಮಾಚರಣೆಯನ್ನು ಶಾಂತಿಯಿಂದ ಮಾಡುತ್ತಾ ಹಲವಾರು ವರ್ಷಗಳಿಂದ ನೆಲೆಸಿದ್ದರು.
ಅಲ್ಲಿನ ಕ್ಷತ್ರಿಯ ಅರಸರೂ ಸಹ ಯುದ್ಧಪೀಪಾಸುಗಳಾಗಿ ಸಾಮ್ರಾಜ್ಯ ವಿಸ್ತರಣೆಗೆ ಗಮನವನ್ನೀಯುವ ಬದಲಾಗಿ, ಉತ್ತಮ ಆಡಳಿತಗಾರರೂ, ಧಾರ್ಮಿಕರೂ ಆಗಿ ಪ್ರಜೆಗಳ ಶಾಂತಿ ಮತ್ತು ಸುಭಿಕ್ಷತೆಗೆ ಒಟ್ಟು ನೀಡಿ ಆಳ್ವಿಕೆಯನ್ನು ನಡೆಸಿದ್ದರು. ಇತ್ತ ಪಂಜಾಬ್ ರಾಜ್ಯದ ಸ್ಥಿತಿಯೂ ಹೀಗೆಯೇ ಇದ್ದಿತ್ತು. ಅತೀವ ಸಾಹಸಿಗಳೂ, ವೀರರೂ ಆಗಿದ್ದ ಪಂಜಾಬಿನ ಸಿಖ್ಖರು ಧಾರ್ಮಿಕರೂ, ದಯಾಳುಗಳೂ ಆಗಿದ್ದರು. ಸಿಕ್ಖ್ ವೀರರು ತಾವು ಯಾರ ಮೇಲೆಯೂ ದಂಡೆತ್ತಿ ಹೋಗದೆ ತಮ್ಮ ಧಾರ್ಮಿಕ ಗುರುಗಳ ಮಾತುಗಳನ್ನು ಅನುಸರಿಸುತ್ತಾ ರಾಜ್ಯಆಡಳಿತವನ್ನು ನಡೆಸುತ್ತಿದ್ದರು. ಎರಡೂ ರಾಜ್ಯಗಳ ಸಾಮ್ಯತೆ ಮತ್ತು ಎರಡೂ ರಾಜ್ಯಗಳ ದುರಾದೃಷ್ಟವೆಂದರೆ ಎರಡೂ ರಾಜ್ಯಗಳು ಅಫಘಾನಿಸ್ತಾನವೆಂಬ ಮತಾಂಧರ ಅನಾಗರೀಕ ರಾಷ್ಟ್ರದೊಂದಿಗೆ ಗಡಿಯನ್ನು ಹಂಚಿಕೊಂಡದ್ದು. ( ಇಂದಿನ ಪಂಜಾಬ್ ಅಲ್ಲ,ಬ್ರಿಟಿಷ್ ಆಕ್ರಮಣಕ್ಕೂ ಪೂರ್ವದ ಕಾಶ್ಮೀರ ಮತ್ತು ಪಂಜಾಬ್). ಅನಾಗರಿಕ ಮುಸ್ಲಿಂ ಮತಾಂಧ ಅರಸರ ಆಳ್ವಿಕೆಗೆ ಒಳಪಟ್ಟಿದ್ದ ಅಫಘಾನಿಸ್ತಾನದ ಮುಸಲ್ಮಾನರು ಆಶ್ರಯಕ್ಕಾಗಿ ಪಂಜಾಬ್ ಮತ್ತು ಕಾಶ್ಮೀರಕ್ಕೆ ಓಡಿ ಬಂದಿದ್ದರು.
ಸುಶಿಕ್ಷಿತರೂ ಸಹಿಷ್ಣುಗಳೂ ನೆಲೆದಿದ್ದ ಕಾಶ್ಮೀರದಲ್ಲಿ ಆಶ್ರಯ ಅರೆಸಿ ಬಂದಿದ್ದವರಿಗೆ ರಾಜರಿಂದಲೂ ಸಾಮಾನ್ಯ ಜನರಿಂದಲೂ ಉತ್ತಮ ಸ್ವಾಗತವೇ ದೊರಕಿತ್ತು. ಅಷ್ಟು ಮಾತ್ರವಲ್ಲದೆ ಸ್ವಧರ್ಮವನ್ನು ಆಚರಿಸುವ ಸ್ವಾತಂತ್ರವೂ ದೊರಕಿತ್ತು. ಆದರೆ ಕ್ರಮೇಣ ನಿರಾಶ್ರಿತರಾಗಿ ಬಂದವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಲಾರಂಭಿಸಿತು. ಅವರಲ್ಲಿದ್ದ ಭಯ, ಕೃತಜ್ಞತೆಗಳು ಮಾಯವಾಗಿ ಅಲ್ಲಿ ತಮ್ಮ ಸ್ವಭಾವವಾದ ಧರ್ಮಾಂಧತೆಯೂ ಅಧಿಕಾರದ ಲಾಲಸೆಯೂ ಚಿಗುರೊಡೆಯಲಾರಂಭವಾಯಿತು. ಪ್ರಾರಂಭದಲ್ಲಿ ಕುತಂತ್ರದಿಂದ ಅಧಿಕಾರವನ್ನು ಪಡೆದವರು ಮುಂದೆ ಯುದ್ಧವನ್ನೇ ಹೂಡಿ, ತಮಗೆ ಆಶ್ರಯವನ್ನು ನೀಡಿದವರನ್ನೇ ನಿರಾಶ್ರಿತರನ್ನಾಗಿಸಿ ಹೊರದಬ್ಬುವ ದಾಷ್ಟ್ಯವನ್ನು ತೋರಿದರು. ಈ ಮುಸಲ್ಮಾನರ ಆಳ್ವಿಕೆಯಲ್ಲಿ ಕಾಶ್ಮೀರವು ಅಕ್ಷರಸಹ ನರಕವಾಗಿತ್ತು.
ಆದರೆ ಹೇಗೆ ಕತ್ತಲು ಕಳೆದ ಮೇಲೆ ಬೆಳಕು ಬರುತ್ತದೆಯೋ ಹಾಗೆ ಕಾಶ್ಮೀರಿ ಹಿಂದೂಗಳ ಜೀವನದಲ್ಲೂ ಬೆಳಕು ಮೂಡಿದ್ದು ಕಾಶ್ಮೀರದಲ್ಲಿ ಸಿಖ್ ಆಳ್ವಿಕೆಗೆ ಒಳಪಟ್ಟ ಸಮಯದಲ್ಲಿ. 1819 ನೇ ಇಸವಿಯಿಂದ 1846 ರ ವರೆಗೆ ಕಾಶ್ಮೀರ ಸಿಖ್ಖರ ಆಡಳಿತಕ್ಕೆ ಒಳಪಟ್ಟಿತ್ತು. ಸಾಮಾನ್ಯವಾಗಿ ಚರಿತ್ರೆಕಾರರು ಕಾಶ್ಮೀರದ ಇತಿಹಾಸದಲ್ಲಿ ಸಿಖ್ ಆಡಳಿತಾವಧಿಯನ್ನು ಕಪ್ಪು ಚುಕ್ಕೆ ಎಂಬುದಾಗಿ ವಿಶ್ಲೇಷಿಸುತ್ತಾರೆ. ಆದರೆ ಖಂಡಿತವಾಗಿಯೂ ಅಫ್ಘಾನ್ ನ ಮುಸಲ್ಮಾನ ದೊರೆಗಳಿಗಿಂತ ಸಾವಿರಪಟ್ಟು ಉತ್ತಮ ಆಡಳಿತ ಸಿಖ್ಖರದ್ದಾಗಿತ್ತೆಂದು ಇತಿಹಾಸವೇ ಸಾಕ್ಷ್ಯವನ್ನು ನೀಡುತ್ತದೆ. (ಮುಸ್ಲಿಂ ತುಷ್ಟೀಕರಣ ಎಂದರೆ ಜಾತ್ಯಾತೀತತೆ. ಎಲ್ಲಿಯಾದರೂ ಅಲ್ಪ ಸ್ವಲ್ಪ ಹಿಂದೂಗಳಿಗೆ ಉತ್ತಮವಾದದ್ದು ಮಾಡಿದರೆ ಅದು ಕೋಮುವಾದ. ಇದು ಅನೇಕ ಇತಿಹಾಸಗಾರರು ಅನ್ವಯಿಸಿಕೊಂಡ ಅಲಿಖಿತ ನಿಯಮ. ಬಾಂಗ್ಲಾ ಮತ್ತು ಮಯನ್ಮಾರ್ ನ ಅಕ್ರಮವಲಸಿಗರನ್ನು ಸ್ವಾಗತಿಸುವುದು ಜಾತ್ಯಾತೀತಡೆಯಾದರೆ ಅಲ್ಲಿನ ಹಿಂದೂ ನಿರಾಶ್ರಿತರಿಗೆ ಪೌರತ್ವ ನೀಡುವುದು ಕೋಮುವಾದ). ಇತಿಹಾಸಗಾರ ರೆಕಾರ್ಡ್ಸ್ ಯಂಗ್ ಹಾಸ್ಬೆಂಡ್ಸ್ “ ಅಫ್ಘಾನ್ನರ ನಂತರ ಬಂದ ಸಿಖ್ಖರು ಆನಾಗರೀಕರೂ ಕ್ರೂರರೂ ಆಗಿರಲಿಲ್ಲ,ಬದಲಾಗಿ ಕಠಿಣರೂ ವೀರರೂ ಆಗಿದ್ದರು“ ಎಂದು ಹೇಳುತ್ತಾರೆ. ಆದರೆ ಕೆಲ ಇತಿಹಾಸಗಾರರ ಪ್ರಕಾರ ಅವರು ಮುಸ್ಲಿಂ ಆಡಳಿತಗಾರರಂತೆ ಅಸಹಿಷ್ಣುಗಳಾಗಿದ್ದರು. ಆದರೆ ಸತ್ಯವೇನೆಂದರೆ ಅವರು ಹಿಂದೂ ಧಾರ್ಮಿಕ ನಂಬಿಕೆಯೊಂದಿಗೆ ವಿಶ್ವಾಸ ಹೊಂದಿದ್ದ ಸಿಖ್ ಧಾರ್ಮಿಕರಾಗಿದ್ದರು. ಕಾಶ್ಮೀರದಲ್ಲಿ ಮುಸ್ಲಿಂ ಆಡಳಿತದ ಆರಂಭದಿಂದ ಅಂತ್ಯದವರೆಗೂ ಅನಾಗರೀಕ ದೌರ್ಜನ್ಯ, ಕ್ರೌರ್ಯ ಮತ್ತು ಮತಾಂತರಗಳಿಗೆ ಒಳಗಾದ ಹಿಂದೂಗಳ ದುರವಸ್ಥೆಯು ಸಿಕ್ಖ್ ಆಡಳಿತಗಾರರಿಗೆ ತಿಳಿದಿತ್ತು. ಯಾಕೆಂದರೆ ಸ್ವತಃ ಸಿಖ್ ಧರ್ಮಗುರುಗಳಾದ ತೇಜ್ ಬಹಾದ್ದೂರ್ ಅವರು ಮುಸಲ್ಮಾನರ ದ್ವೇಷ ಮತ್ತು ಮತಾಂಧತೆಗೆ ಬಲಿಯಾಗಿದ್ದರು. ಅವರ ಯುದ್ಧ ನಿರಂಕುಶಾಧಿಕಾರ ಮತ್ತು ದ್ವೇಷವನ್ನೇ ಸಿದ್ದಾಂತವಾಗಿಸಿಕೊಂಡಿದ್ದ ಮತಾಂಧ ಮುಸ್ಲಿಂ ದೊರೆಗಳ ವಿರುದ್ದವಾಗಿತ್ತೇ ಹೊರತಾಗಿ ಸಹಿಷ್ಣುತೆ ಮತ್ತು ಸಂಸ್ಕಾರಿಗಳಾಗಿದ್ದ ಹಿಂದೂಗಳ ಮೇಲಾಗಿರಲಿಲ್ಲ. ದೇವಾಲಯದ ಕಂಬಗಳ ಮೇಲೆ ಮತ್ತು ದೇವಾಲಯವನ್ನು ಪುಡಿಗಟ್ಟಿದ ನೆಲದ ಮೇಲೆ ನಿರ್ಮಿಸಲ್ಪಟ್ಟಿದ್ದ ಮಸೀದಿಗಳನ್ನು ಒಡೆದು ಅವರ ಅಧಿಕಾರಿಗಳನ್ನು ಲೂಟಿಗೈದರು. ಆದರೆ ಸಿಖ್ಖರು ಅತ್ಯಂತ ಮಾನವೀಯರೂ ಧಾರ್ಮಿಕರೂ ಆಗಿದ್ದರು.
ಸಿಖ್ ಅರಸನಾಗಿದ್ದ ದಿವಾನ್ ಮೋತಿರಾಮ್ ಅವರು ಮುಸಲ್ಮಾನರ ಪ್ರಾರ್ಥನಾ ಸ್ಥಳವಾಗಿದ್ದ ಜುಮಾ ಮಸೀದಿಯನ್ನು ಮುಚ್ಚಿದ್ದರು ಎಂದು ಹೇಳುವ ಇತಿಹಾಸಗಾರರು, ಮುಸ್ಲಿಮರು ಮತ್ತು ಅವರ ಧಾರ್ಮಿಕ ಮುಖಂಡರು ಹೊರಗಿನ(ಅಫ್ಘಾನ್) ಆಡಳಿತಗಾರರ ಸಹಾಯದೊಂದಿಗೆ ಸಿಖ್ ಆಡಳಿತಗಾರರ ವಿರುದ್ಧ ಪಿತೂರಿ ನಡೆಸುತ್ತಿದ್ದರು ಎಂಬ ಕಾರಣವನ್ನು ವ್ಯವಸ್ಥಿತವಾಗಿ ಬಚ್ಚಿಡುತ್ತಾರೆ. ಇದು ಸಿಖ್ಖರ ಧರ್ಮಾಂಧತೆಯಲ್ಲ ಬದಲಾಗಿ ಸಾಮಾನ್ಯ ರಾಜಕೀಯ ನಡೆಯಾಗಿತ್ತು. ಸಿಖ್ ಸೇನಾಧಿಪತಿಯಾಗಿದ್ದ ಫುಲಾ ಸಿಂಗ್ ಮೀರ್ ಅಲಿ ಅಹಮದಾನಿ ಮಸೀದಿಯನ್ನು ನಾಶಪಡಿಸಲು ತನ್ನ ಬಂದೂಕುಗಳಿಂದ ತರಬೇತಿ ನೀಡಿದ್ದ ಎಂದು ಇತಿಹಾಸಗಾರರು ದೂಷಿಸುತ್ತಾರೆ. ಆದರೆ ಅವನು ನೆಲಸಮಗೊಳಿಸಲು ಬಯಸಿದ್ದ ಮೂರು ಮಸೀದಿಯನ್ನೂ ಉರುಳಿಸಲು ಅವನಿಗೆ ಸಂಪೂರ್ಣ ಹಕ್ಕಿತ್ತು ಏಕೆಂದರೆ ಈ ಮಸೀದಿಯನ್ನು ಕಾಲಿಶ್ರೀ ದೇವಾಲಯವನ್ನು ನಾಶಪಡಿಸಿ ನಿರ್ಮಿಸಲಾಗಿತ್ತೆಂದು ಹೇಳುವುದೇ ಇಲ್ಲ.
ಹಾಗೆ ನೋಡಿದರೆ ಸಿಖ್ಖರ ಆಡಳಿತಾವಧಿಯಲ್ಲಿ ಸಿಖ್ಖರಾಗಲಿ ಹಿಂದೂಗಳಾಗಲಿ ಮುಸಲ್ಮಾನರನ್ನು ಮತಾಂತರಕ್ಕಾಗಿ ( ಮರು ಮತಾಂತರ) ಹಿಂಸಿಸುವುದಾಗಲಿ ಅಥವಾ ಒಂದೇ ಒಂದು ಮಸೀದೆಯನ್ನು ಒಡೆಯುವುದಾಗಲೀ ಮಾಡದೆಯೇ ಸಹಿಷ್ಣುತೆಯನ್ನು ತೋರಿದ್ದರು. ಹಾಗಿದ್ದೂ ಇತಿಹಾಸಗಾರರು ಸಿಖ್ ಆಡಳಿತಗಾರರನ್ನು ಮತಾಂಧರೆಂದು ದೂಷಿಸುತ್ತಾರೆ. ಸಿಖ್ ಆಡಳಿತಗಾರರು ಮಸೀದಿಯನ್ನು ಸರಕಾರದ ಆಸ್ತಿಯೆಂದು ಘೋಷಿಸಿದ್ದು ಸಿಖ್ ಆಡಳಿತಕ್ಕೆ ಕಪ್ಪು ಚುಕ್ಕಿ ಎನ್ನುವ ಇತಿಹಾಸಗಾರರು, ಈ ಪ್ರಕ್ರಿಯೆಯನ್ನು ಮುಸಲ್ಮಾನರ ಕ್ರೂರ ಆಡಳಿತಕ್ಕೆ ಹಿಂದೂ ಸಿಖ್ಖರು ನೀಡಿದ ಅತ್ಯಂತ ಸೌಮ್ಯ ಪ್ರತೀಕಾರ ಎಂಬುದನ್ನು ಬಚ್ಚಿಡುತ್ತಾರೆ. ಅತ್ಯಂತ ಸುಂದರ ವಾಸ್ತುಶಿಲ್ಪವಿದ್ದ ಮಾರ್ತಾಂಡ ಸೂರ್ಯದೇವಾಲಯವನ್ನು ನಾಶಪಡಿಸಲು ಸಿಕಂದರ್ ಸರ್ಕಾರದ ಒಂದು ಇಲಾಖೆಯನ್ನೇ ಸ್ಥಾಪಿಸಿದ್ದ ಎಂಬ ಕ್ರೂರತೆಯನ್ನು ಇತಿಹಾಸದಿಂದ ಅಳಿಸಿ ಹಾಕುವ ಪ್ರಯತ್ನವನ್ನೂ ಇತಿಹಾಸಗಾರರು ನಡೆಸುತ್ತಾರೆ. ವಿಜಯೇಶ್ವರ ದೇವಾಲಯವನ್ನು ಲೂಟಿಗೈದು ಶಿಹಾಬ್ ಉದ್ದೀನ್ ಎಂಬ ವಿಶ್ರಾಂತಿಗ್ರಹವನ್ನು ನಿರ್ಮಿಸಿದ್ದು, ಮಲಿಕ್ ಸೈಫುದ್ದೀನ್ ಮತ್ತು ಅಲಿ ಷಾ ಜೊತೆಯಾಗಿ ಗ್ರಾಮಗಳಲ್ಲೂ ದೇವಾಲಯಗಳನ್ನು ಹೊಡೆದುರುಳಿಸಿದ್ದು ಇತ್ಯಾದಗಳ ಬಗ್ಗೆ ಇತಿಹಾಸಗಾರರು ಜಾಣಕುರುಡುತನವನ್ನು ಪ್ರದರ್ಶಿಸುತ್ತಾರೆ. ಸಿಖ್ಖರು ಬಲವಂತವಾಗಿ ಕಾರ್ಮಿಕರನ್ನು ಬಳಸುತ್ತಿದ್ದರು, ಗುಲಾಮೀ ಪದ್ದತಿಯನ್ನು ಸ್ಥಾಪಿಸಿದ್ದರು ಎಂದೂ ಹಲವು ಇತಿಹಾಸಗಾರರು ಹೇಳುತ್ತಾರೆ. ಆದರೆ ಅವರೆಂದೂ ಕಾರ್ಮಿಕರ ಮೇಲೆ ದಬ್ಬಾಳಿಕೆ ನಡೆಸಿರಲಿಲ್ಲ,ಆಧುನಿಕ ಸಾರಿಗೆ ಸಂಪರ್ಕವಿಲ್ಲದ ಸಮಯದಲ್ಲಿ ಸ್ಥಳೀಯರನ್ನು ಅವರು ಯುದ್ಧಸಾಮಗ್ರಿ ಮತ್ತು ಸರಕು ಸಾಗಾಣಿಕೆಗಾಗಿ ಬಳಸಿಕೊಳ್ಳುತ್ತಿದ್ದರೆಂಬುದು ಸತ್ಯ.ಆದರೆ ಅವರು ಇದಕ್ಕಾಗಿ ಸ್ಥಳೀಯರನ್ನು ಗುಲಾಮರನ್ನಾಗಿ ಬಳಸದೆ ಕಾರ್ಮಿಕರಂತೆ ಬಳಸಿಕೊಂಡು, ಅವರಿಗೆ ಸಂಬಳ ಮುಂತಾದ ವ್ಯವಸ್ಥೆಗಳನ್ನೂ ನೀಡಿದ್ದರು. ಬದಲಾಗಿ ಗುಲಾಮೀ ಪದ್ದತಿಯನ್ನು ಸ್ಥಾಪಿಸಿ, ಆಚರಿಸಿದ್ದೂ, ಮತಾಂತರಗೊಳ್ಳದ ಸ್ಥಳೀಯ ಹಿಂದೂಗಳನ್ನು ಬಲವಂತದಿಂದ ಮತಾಂತರಿಸಿ ಅವರನ್ನು ಗುಲಾಮರನ್ನಾಗಿಸಿ ಕ್ರೌರ್ಯ ಮೆರೆದದ್ದು ಮುಸಲ್ಮಾನರೆಂಬುದನ್ನು ಮುಚ್ಚಿ ಆ ಪಾಪವನ್ನು ಸಿಖ್ ಅರಸರ ಮೇಲೆ ಹೊರೆಸುವ ಮುಖಾಂತರ ಸಿಖ್ ಅರಸರ ಆಡಳಿತವನ್ನು ಕ್ರೌರ್ಯವೆನ್ನುವ ಅತೀ ಜಾಣತನವನ್ನೂ ಇತಿಹಾಸಗಾರರು ನಿಭಾಯಿಸಿದ್ದಾರೆ. ಆದ್ದರಿಂದ ಇತಿಹಾಸಗಾರರು ಉಲ್ಲೇಖಿಸಿದಂತೆ ಸಿಖ್ಖರ ಆಡಳಿತವು (1818-1946)ಕಾಶ್ಮೀರದ ಇತಿಹಾಸದಲ್ಲಿ ಕಪ್ಪುಚುಕ್ಕಿಯಾಗಿರದೆ, ಹಿಂದೂಗಳ ಪಾಲಿನ ಬಂಗಾರದ ಅವಧಿಯಾಗಿತ್ತೆಂಬುದು ಸ್ಪಷ್ಟವಾಗುತ್ತದೆ.
ದೀಪ ಜಿ. ಭಟ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.