ಇಸ್ಲಾಮಾಬಾದ್: ಈದ್-ಉಲ್-ಅಧಾ ಸಂದರ್ಭದಲ್ಲಿ ಪ್ರಾರ್ಥನೆ ಸಲ್ಲಿಸದಂತೆ ಅಹ್ಮದೀಯ ಮುಸ್ಲಿಂ ಸಮುದಾಯಕ್ಕೆ ಪಾಕಿಸ್ಥಾನದಲ್ಲಿ ನಿರ್ಬಂಧ ಹೇರಲಾಗಿದೆ. ಪಾಕಿಸ್ಥಾನದ ಅಹ್ಮದೀಯ ಮುಸ್ಲಿಂ ಸಮುದಾಯದ ಸದಸ್ಯರು ತಾವು ಈದ್ ಪ್ರಾರ್ಥನೆಗಳನ್ನು ನಡೆಸುವುದಿಲ್ಲ ಅಥವಾ ಪ್ರಾಣಿಗಳನ್ನು ಬಲಿ ನೀಡುವುದಿಲ್ಲ ಎಂದು ಒಪ್ಪಿಕೊಳ್ಳುವ ಕಾನೂನು ದಾಖಲೆಗಳು ಅಥವಾ ಅಫಿಡವಿಟ್ಗಳಿಗೆ ಸಹಿ ಹಾಕುವಂತೆ ಒತ್ತಾಯಪಡಿಸಲಾಗಿದೆ. ಪಂಜಾಬ್ ಮತ್ತು ಸಿಂಧ್ನ ಅನೇಕ ಭಾಗಗಳಲ್ಲಿ ನಈ ಕೃತ್ಯ ನಡೆಯುತ್ತಿದೆ ಎನ್ನಲಾಗಿದೆ.
ಸ್ಥಳೀಯ ವರದಿಗಳ ಪ್ರಕಾರ, ಯಾವುದೇ ಅಹ್ಮದೀಯರು ತಮ್ಮ ಮನೆಯೊಳಗೂ ಈದ್ ಆಚರಣೆಗಳಲ್ಲಿ ಭಾಗವಹಿಸುತ್ತಿರುವುದು ಕಂಡುಬಂದರೆ, ಅವರು ಪೊಲೀಸ್ ಕ್ರಮ, ಬಂಧನ ಅಥವಾ 5 ಲಕ್ಷ ರೂಪಾಯಿಗಳವರೆಗೆ ದಂಡವನ್ನು ಎದುರಿಸಬೇಕಾಗುತ್ತದೆ.
ಆಘಾತಕಾರಿ ವಿಷಯವೆಂದರೆ, ಪಾಕಿಸ್ಥಾನದ ಕೆಲವು ಉನ್ನತ ಬಾರ್ ಕೌನ್ಸಿಲ್ಗಳು ಅಹ್ಮದೀಯರು ಈದ್ ಪ್ರಾರ್ಥನೆಗಳನ್ನು ನಡೆಸದಂತೆ ರಾಷ್ಟ್ರವ್ಯಾಪಿ ನಿಷೇಧ ಹೇರಬೇಕು ಎಂದು ಒತ್ತಾಯಿಸಿ ಅಧಿಕೃತ ಪತ್ರಗಳನ್ನು ಬರೆದಿವೆ. ಇವು ರಾಜ್ಯ ಬೆಂಬಲಿತ ಕಾನೂನು ಸಂಸ್ಥೆಗಳಾಗಿರುವ ಹಿನ್ನೆಲೆಯಲ್ಲಿ ಅಹಮದೀಯರ ಮೇಲಿನ ಅವರ ದಮನಕಾರಿ ನಡೆ ಸಾಮಾಜಿಕ ಮಾತ್ರವಲ್ಲ, ಅಧಿಕೃತವೂ ಆಗಿದೆ ಎಂಬುದನ್ನು ತೋರಿಸುತ್ತದೆ.
ಈ ನಿರ್ಬಂಧ ಈಗಾಗಲೇ ದುರ್ಬಲವಾಗಿರುವ ಅಹ್ಮದೀಯ ಸಮುದಾಯದ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದೆ.
ಈ ದೌರ್ಜನ್ಯವನ್ನು ಯುನೈಟೆಡ್ ಸ್ಟೇಟ್ಸ್ ಕಾಂಗ್ರೆಸ್ ಗಮನಿಸಿದೆ, ಇತ್ತೀಚೆಗೆ 23 ಅಮೇರಿಕನ್ ಶಾಸಕರ ಗುಂಪು ಯುಎಸ್ ವಿದೇಶಾಂಗ ಕಾರ್ಯದರ್ಶಿಗೆ ಕ್ರಮ ಕೈಗೊಳ್ಳುವಂತೆ ಕೇಳುವ ಪತ್ರವನ್ನು ಕಳುಹಿಸಿದೆ. ಪಾಕಿಸ್ಥಾನದಲ್ಲಿ ಅಹ್ಮದೀಯರ ಮೇಲೆ ಹೇರಲಾಗುತ್ತಿರುವ ಹಿಂಸಾಚಾರ ಮತ್ತು ಒತ್ತಡವನ್ನು ಅಮೆರಿಕ ಸರ್ಕಾರ ನಿಲ್ಲಿಸಬೇಕೆಂದು ಅದು ಒತ್ತಾಯಿಸಿದೆ.
ಜೂನ್ 2024 ರ ವರದಿಯಲ್ಲಿ ಅಮ್ನೆಸ್ಟಿ ಇಂಟರ್ನ್ಯಾಷನಲ್ ಕೂಡ ಕಳವಳ ವ್ಯಕ್ತಪಡಿಸಿದೆ. ಈದ್ ಆಚರಿಸುವುದನ್ನು ತಡೆಯಲು ಪಂಜಾಬ್ನಲ್ಲಿ ಕನಿಷ್ಠ 36 ಅಹ್ಮದೀಯ ಮುಸ್ಲಿಮರನ್ನು ಬಂಧಿಸಲಾಗಿದೆ ಎಂದು ಅದು ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.